ಹಾರ್ಟ್ ಪ್ರಾಬ್ಲಂ ಕಂಡುಹಿಡಿಯುತ್ತಂತೆ ಸೆಲ್ಫಿ !

0
292

ಮೊಬೈಲ್ ನಿಂದಾಗಿ ಹಾಗೂ ಸೆಲ್ಫಿ ಹುಚ್ಚಿನಿಂದಾಗಿ ಹಲವರು ತಮ್ಮ ಜೀವವನ್ನೇ ಕಳೆದುಕೊಂಡಿರುವ ಸಂಗತಿಯನ್ನು ನೋಡಿದ್ದೇವೆ. ಕೇಳಿದ್ದೇವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸೆಲ್ಫಿಗಾಗಿ ಯುವಜನತೆ ಏನೆಲ್ಲ ಸಾಹಸಗಳನ್ನು ಮಾಡಿ, ಎಡವಟ್ಟಿನ ಜತೆಗೆ ಪ್ರಾಣಾಪಾಯಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂತಹ ಅಪಾಯದ ನಡುವೆ ಈ ಸೆಲ್ಫಿಯಿಂದಾಗಿ ಆರೋಗ್ಯ ಹೆಚ್ಚುತ್ತದೆ ಎಂಬ ಸುದ್ದಿ ಬಹಿರಂಗವಾಗಿದೆ. ಸೆಲ್ಫಿಯಿಂದಾಗಿ ಹೃದಯದ ಸಮಸ್ಯೆ ಪರಿಹಾರವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಅಚ್ಚರಿ ಎನಿಸಿದರೂ ಇದು ನಿಜ. ಸೆಲ್ಫಿಯಿಂದಾಗಿ ಕೆಲ ಆರೋಗ್ಯ ಸಮಸ್ಯೆಗಳನ್ನು ಕಂಡುಹಿಡಿಯಬಹುದಂತೆ. ಮುಖದ ಚಿತ್ರಗಳನ್ನು ನೋಡಿ ಆಲ್ಗರಿದಮ್ ಪರಿಧಮನಿಯ ಕಾಯಿಲೆಗಳನ್ನು ಪತ್ತೆ ಮಾಡಬಹುದು ಎಂದು ಯುರೋಪಿಯನ್ ಹಾರ್ಟ್ ಜರ್ನಲ್ ನಲ್ಲಿ ಅಧ್ಯಯನ ವರದಿ ತಿಳಿಸಿದೆ.

ಆಲ್ಗರಿದಮ್ ನ್ನು ಸಮರ್ಥವಾದ ಸ್ಕ್ರೀನಿಂಗ್ ಟೂಲ್ ಆಗಿ ಬಳಕೆ ಮಾಡಿಕೊಂಡು ಈ ಮೂಲಕವಾಗಿ ಹೃದಯ ಸಂಬಂಧಿ ಸಮಸ್ಯೆಗಳನ್ನು ಪತ್ತೆ ಮಾಡಬಹುದಾಗಿದೆ. ನಮ್ಮ ಅಧ್ಯಯನದ ಪ್ರಕಾರ ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಿಕೊಂಡು ಹೃದಯ ಸಂಬಂಧಿ ಸಮಸ್ಯೆಗಳನ್ನು ಪತ್ತೆ ಮಾಡಲು ಮುಖದ ಭಾವ ಚಿತ್ರಗಳನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಚೀನಾದಲ್ಲಿರುವ ಪೆಕಿಂಗ್ ಯೂನಿಯನ್ ಮೆಡಿಕಲ್ ಕಾಲೇಜಿನ ಝೆ ಝೆಂಗ್ ಹೇಳಿದ್ದಾರೆ.

ಕಡಿಮೆ ವೆಚ್ಚದಲ್ಲಿ ಹಾಗೂ ಪರಿಣಾಮಕಾರಿಯಾಗಿ ಹೃದಯ ಸಂಬಂಧಿ ಕಾಯಿಲೆಗಳನ್ನು ಕಂಡುಹಿಡಿಯಬಹುದು. ಈ ಅಧ್ಯಯನ ವರದಿಗಾಗಿ ಚೀನಾದಲ್ಲಿ 2017 ರ ಜುಲೈ-2019 ರ ಮಾರ್ಚ್ ವರೆಗೆ 5,796 ರೋಗಿಗಳನ್ನು ನೋಂದಣಿ ಮಾಡಿಕೊಳ್ಳಲಾಗಿತ್ತು. ಕೃತಕ ಬುದ್ಧಿಮತ್ತೆಯ ಮೂಲಕ ಹೃದಯ ಸಂಬಂಧಿ ಸಮಸ್ಯೆಗಳನ್ನು ಪತ್ತೆ ಮಾಡಬಹುದು. ಈ ಕುರಿತು ಇನ್ನಷ್ಟು ನಿಖರ ಅಧ್ಯಯನ ಮಾಡುವ ಅಗತ್ಯವಿದೆ ಎಂದು ವರದಿ ಹೇಳಿದೆ.

LEAVE A REPLY

Please enter your comment!
Please enter your name here