ಕಿರುತೆರೆಯಲ್ಲಿ ಧಾರವಾಹಿಗಳಿಗೇನು ಕಡಿಮೆಯಿಲ್ಲ. ಒಂದಲ್ಲಾ ಒಂದು ವಾಹಿನಿಯಲ್ಲಿ ಹೊಸ ಧಾರವಾಹಿಗಳು ಪ್ರಸಾರವಾಗುತ್ತವೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರವಾಹಿಯಲ್ಲಿ ಆರತಿ ಮತ್ತು ಗೌತಮ್ ಅವರ ವಿವಾಹ ಬಹಳ ಸಂಭ್ರಮದಿಂದ ನಡೆಯುತ್ತಿದೆ. ಇದೇ ಕಾರಣಕ್ಕಾಗಿ ಧಾರವಾಹಿಯ ಎಲ್ಲಾ ಪಾತ್ರಧಾರಿಗಳು ಬಹಳ ಬ್ಯುಸಿಯಾಗಿದ್ದಾರೆ.
ಇತ್ತ ಗೌತಮ್ ಮತ್ತು ಆರತಿ ಅವರು ಮುದ್ದು ಮುದ್ದಾಗಿ ಜಗಳ ಮಾಡಿಕೊಂಡು ಮದುವೆ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಧಾರವಾಹಿಯ ವಧು ಆರತಿ ಅವರ ಅರಿಶಿನ ಶಾಸ್ತ್ರ ಕೂಡ ಬಹಳ ಅದ್ಧೂರಿಯಾಗಿ ನಡೆದಿದೆ. ಈಗಾಗಲೇ ಈ ಸಂಚಿಕೆಗಳು ಟಿವಿಯಲ್ಲಿ ಪ್ರಸಾರವಾಗಿರುವುದನ್ನು ನೋಡಿರುತ್ತೀರಿ.
ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಗೌತಮ್ ಮದುವೆ ಸಮಾರಂಭದಲ್ಲಿ ಯಾವುದೋ ಒಂದು ಪ್ಲಾನ್ ಮಾಡಲು ಹೊರಟಿದ್ದಾನೆ. ಆದರೆ ಅದು ಯಾವ ಪ್ಲಾನ್ ಎಂಬುದು ಮುಂಬರುವ ಸಂಚಿಕೆಗಳಲ್ಲಿ ಗೊತ್ತಾಗಲಿದೆ. ಮಾರುವೇಷದಲ್ಲಿ ಆರತಿಯನ್ನು ನೋಡಲು ವಿಕ್ಕಿ ಬಂದಿದ್ದು, ಆಕೆಯನ್ನು ಮಾತನಾಡಿಸುತ್ತಾನೆ. ಇದರಿಂದ ಆರತಿಗೆ ಬಹಳ ಖುಷಿಯಾಗುತ್ತದೆ. ಇದೇ ವೇಳೆ ಗೌತಮ್ ಹಾಗೂ ವೇದಾಂತ್ ನಡುವೆ ಜಗಳವಾಗುತ್ತದೆ. ಇದು ಮುಂದಿನ ಸಂಚಿಕೆಗಳಲ್ಲಿ ಪ್ರಸಾರವಾಗಲಿದೆ.