ಪಾಕಿಸ್ತಾನದಲ್ಲಿರೋ ಈ ಶಿವನ ದೇವಾಲಯದ ಬಗ್ಗೆ ನಿಮಗೆ ತಿಳಿಯದಿರುವ ರಹಸ್ಯಗಳು.!!

0
430

ನಮ್ಮ ಶತ್ರು ದೇಶ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳು ತುಂಬಾ ಅಪರೂಪ ಎನ್ನಬಹುದು. ಆ ರೀತಿಯ ಅಪರೂಪದ ದೇವಾಸ್ಥಾನಗಳಲ್ಲಿ ಚಾರಿತ್ರತೆಯಿಂದ ಕೂಡಿರುವ ದೇವಸ್ಥಾನ ‘ಕಟಾಸ್ ರಾಜ’ ದೇವಸ್ಥಾನ ಪಾಕಿಸ್ತಾನದಲ್ಲಿನ ಪಂಜಾಬ್’ಗೆ ಸೇರಿದ ದೇವಸ್ಥಾನ. ‘ಚೆಗ್ಮಾಲ್’ ಜಿಲ್ಲೆಯ ಕಟಾಸ್ ಗ್ರಾಮದಲ್ಲಿದೆ. ಇದು ಒಂದು ಶಿವಾಲಯ, ಮಹಾಭಾರತದ ಕಾಲದಲ್ಲಿ ಪಾಂಡವರು ತಮ್ಮ ಅರಣ್ಯವಾಸದಲ್ಲಿ ಇರುವಾಗ ಸ್ವಲ್ಪ ದಿನಗಳನ್ನು ಈ ಪ್ರದೇಶದಲ್ಲಿ ವಾಸವಿದ್ದರು.

ಪಾಕಿಸ್ತಾನ ಸರ್ಕಾರ 3 ದಶಕಗಳಲ್ಲಿ ಈ ದೇವಸ್ಥಾನ ಪುನರುದ್ದಾರಣಕ್ಕೆ 20 ಮಿಲಿಯನ್ ಹಣ ಕೊಟ್ಟಿತಂತೆ. ಇನ್ನು ಈ ದೇವಾಸ್ಥಾನಕ್ಕೆ ಹಲವು ಪುರಾತನ ಕಥೆಗಳಿವೆ. ಅದರಲ್ಲಿ ಒಂದು ದಕ್ಷಯಜ್ಞ ಸಮಯದಲ್ಲಿ ಸತಿದೇವಿ ಅಗ್ನಿಗೆ ಆಹುತಿ ಆದ ವಿಷಯ ತಿಳಿದ ಶಿವ ಕಣ್ಣಿನಿಂದ 2 ಹನಿ ಕಣ್ಣೀರು ಬಂದಿತು. ಅದು ಭೂಮಿಯಲ್ಲಿ ಬಿದ್ದಾಗ ಒಂದು ಹನಿ ಈ ಪಾಕಿಸ್ತಾನ ದೇಶದ ಕಟಾಸ್ ಕ್ಷೇತ್ರದಲ್ಲಿ ಅಮೃತ ಕುಂಡದ ತೀರ್ಥವಾಗಿದೆ. ಎರಡನೇ ಹನಿ ಭಾರತ ದೇಶದ ರಾಜಸ್ತಾನದ ಅಜ್ಮೀರ್ ನ ಪುಷ್ಕರಾದ್ ತೀರ್ಥವಾಗಿಯೂ ಬದಲಾಯಿತು. ಇನ್ನು ಈ ಜಿಲ್ಲೆಯ ಚರಿತ್ರೆಯ ಬಗ್ಗೆ ಹೇಳುವುದಾದರೆ ಈ ಕಟಾಸ್ ಕ್ಷೇತ್ರ ಉಚ್ಚಸ್ಥಾನದಲ್ಲಿದ್ದಾಗ ವಿಶ್ವವಿದ್ಯಾನಿಲಯವಾಗಿಯೂ ಹೆಸರು ವಾಸಿಯಾಗಿತ್ತು. ದೇಶ, ವಿದೇಶದ ವಿದ್ಯಾರ್ಥಿಗಳು ಇಲ್ಲಿ ವಿದ್ಯೆಯನ್ನ ಕಲಿಯುತ್ತಿದ್ದರು. ಪ್ರಮುಖ ಗಣಿ ತಜ್ಞ ಈ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತವನ್ನ ಕಲಿತು ಭೂಮಿಯ ಅಳತೆಯನ್ನ ಲೆಕ್ಕ ಹಾಕಿದರು.

1947 ರಲ್ಲಿ ಇಲ್ಲಿನ ಹಿಂದೂಗಳು ಭಾರತ ದೇಶದ ಪಂಜಾಬ್ ಗೆ ಹೊರಟು ಹೋದರು. ಭಾರತ ದೇಶದ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾನಿ ಈ ದೇವಾಲಯವನ್ನ ಭೇಟಿ ಆಗಿದ್ದರು. ನಾವು ಪ್ರತಿನಿತ್ಯ ಪೂಜಿಸುವ ಶಿವನು ಎಲ್ಲಾ ಕಡೆ ಇರುತ್ತಾನೆ,ಇದ್ದಾನೆ ಅನುವುದಕ್ಕೆ ಈ ಒಂದು ದೇವಾಲಯವೇ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಹೇಳಿದ್ದರು.

LEAVE A REPLY

Please enter your comment!
Please enter your name here