ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಐದು ದಿನಗಳಲ್ಲೇ ಬಿ.ಎಸ್. ಯಡಿಯೂರಪ್ಪನವರಿಗೆ ಇದೀಗ ಹೊಸ ಸಂಕಷ್ಟ ಎದುರಾಗಿದೆ. ಸಚಿವ ಸಂಪುಟ ರಚನೆ ಮಾಡದೆ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಯಡಿಯೂರಪ್ಪನವರ ನಡೆಗೆ ಪಕ್ಷದ ಹಿರಿಯ ಶಾಸಕರು ಗರಂ ಆಗಿದ್ದಾರೆ. ಸಚಿವ ಸ್ಥಾನ ಕೈ ತಪ್ಪುವ ಆತಂಕದಿಂದ ಬಂಡಾಯವೇಳಲು ಬಿಜೆಪಿಯ 10 ಹಿರಿಯ ಶಾಸಕರು ಸಿದ್ದತೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಗುಪ್ತವಾಗಿ ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಬಿಜೆಪಿಯ ಹಿರಿಯ ಶಾಸಕರ ಈ ನಡೆ ಬಿಎಸ್ವೈಗೆ ಹೊಸ ಸಂಕಷ್ಟ ತದ್ದೊಡ್ಡಿದೆ. ಹೀಗಾಗಿ ಸಚಿವ ಸಂಪುಟ ರಚನೆಯಾದ್ರೆ, ಬಿಜೆಪಿಯಲ್ಲಿ ಭಾರೀ ಬಂಡಾಯವೇಳುವ ಸೂಚನೆಗಳು ಕಾಣಿಸುತ್ತಿವೆ.