ವಿದ್ಯೆ ಕಲಿಸಿ ನಮ್ಮನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಗುರುಗಳನ್ನು ಎಷ್ಟು ಹೊಗಳಿದರೂ ಸಾಲದು, ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಎಷ್ಟೋ ಗುರುಗಳು ವಿದ್ಯಾಭ್ಯಾಸದ ಜೊತೆಗೆ ನಾವು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನೂ ಕಲಿಸಿಕೊಡುತ್ತಾರೆ.
ಇನ್ನು ಮಕ್ಕಳಿಗೆ ಪಾಠ ಹೇಳಿಕೊಟ್ಟು ಅವರಿಗೆ ಅರ್ಥ ಮಾಡಿಡುವುದು ಸುಲಭದ ಕೆಲಸವಲ್ಲ. ಅದರಲ್ಲೂ ಬುದ್ಧಿಶಕ್ತಿ ಕಡಿಮೆ ಇರುವ ಮಕ್ಕಳಿಗೆ ಪಾಠ ಹೇಳುವುದು ಸ್ವಲ್ಪ ಕಷ್ಟವೇ.
ಮಕ್ಕಳಿಗೆ ದೇಹರಚನೆ ಬಗ್ಗೆ ಪಾಠ ಮಾಡುವ ಸಲುವಾಗಿ ಶಿಕ್ಷಕಿಯೊಬ್ಬರು ಅಂಗಾಗ ರಚನೆ ಮಾದರಿಯಲ್ಲಿ ಬಟ್ಟೆ ಧರಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದಲ್ಲದೆ ಆ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಪಾನಿಷ್ನ ಶಿಕ್ಷಕಿಯೊಬ್ಬರು ಶಾಲೆಯಲ್ಲಿ ಜೀವಶಾಸ್ತ್ರ ಪಾಠ ಮಾಡುವಾಗ ಮಕ್ಕಳು ಅರ್ಥ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ದೇಹರಚನೆಯ ಬಟ್ಟೆ ಧರಿಸಿ ಪಾಠ ಮಾಡಿದ್ದಾರೆ. ಹೀಗೆ ಮಾಡಿದ್ದರಿಂದ ಮಕ್ಕಳಿಗೆ ಕೂಡಾ ಪಾಠ ಸುಲಭವಾಗಿ ಅರ್ಥವಾಗಿದೆಯಂತೆ.
ಅಂತೂ ಮೇಡಂ ಮಾಡಿದ ಪ್ಲ್ಯಾನ್ ಸಕ್ಸಸ್ ಆಗಿದೆ. ಫೋಟೋ ನೋಡಿದವರು ಶಿಕ್ಷಕಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.