ಈ ಪ್ರಪಂಚದಲ್ಲಿ ಅದೇಷ್ಟೊ ಜನ ಒಂದು ಸಣ್ಣ ಕಷ್ಟ ಬಂದರೆ ಅಷ್ಟಕ್ಕೆ ತುಂಬಾ ಕುಗ್ಗಿ ಹೋಗುತ್ತಾರೆ. ಆಕಾಶವೇ ತಲೆ ಮೇಲೆ ಬಿದ್ದಂತೆ ಆಡುತ್ತಾರೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳದೇ ಸೋಲುತ್ತಾರೆ. ಕೆಲವೊಂದಿಷ್ಟು ಜನ ನಾನಿನ್ನು ಬದುಕಲೇ ಬಾರದು ಸತ್ತು ಹೋಗಬೇಕೆಂದು ನಿರ್ಧಾರ ಮಾಡಿ ಸಾವಿನ ಮನೆಯತ್ತ ಮುಖ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಬಾಲಿವುಡ್ ನ ಈ ಖ್ಯಾತ ನಟ ತನಗೆ ಬಂದ ಕಷ್ಟವನ್ನು ಸವಾಲಾಗಿ ಸ್ವೀಕರಿಸಿ ಬದುಕಿಗೊಂದು ಅರ್ಥ ನೀಡಿದ್ದಾರೆ. ನಾನು ಹಂಗೆ ನಾನು ಹಿಂಗೆ ಎನ್ನುವ ಯಾವುದೇ ಅಹಂ ಅನ್ನು ತಲೆಯಲ್ಲಿ ತುಂಬಿಕೊಳ್ಳದೆ ಬದುಕನ್ನು ಬಂದ ಹಾಗೆ ಸ್ವೀಕಾರ ಮಾಡಿ ನೋಡಿ ಸ್ವಾಮಿ ನಾವಿರೋದೆ ಹೀಗೆ ಎನ್ನುವಂತೆ ಬದುಕುತ್ತಿದ್ದಾರೆ.
ಒಂದು ಕಾಲದಲ್ಲಿ ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರ ಜೊತೆಯಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದ ನಟ ಸವಿ ಸಿದ್ದು. ಇಂದು ಸಿನಿಮಾಗಳಲ್ಲಿ ಅವಕಾಶಗಳಿಲ್ಲದೆ ಜೀವನ ಮಾಡಲು ತುಂಬಾ ಕಷ್ಟ ವಾಗಿ ಮುಂಬೈನ ಅಪಾರ್ಟ್ಮೆಂಟ್ ಒಂದರಲ್ಲಿ ಸಾಮಾನ್ಯ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಸವಿ ಸಿದ್ದು ಬಾಲಿವುಡ್ ನ ಹಲವಾರು ಸಿನಿಮಾಗಳಲ್ಲಿ ಪೋಷಕ ನಟರಾಗಿ ನಟಿಸಿದ್ದಾರೆ. ಬ್ಲಾಕ್ ಫ್ರೈಡೇ, ಉಲ್ಲಾಲ್ ಹಾಗೂ ಪಾಟ್ಯಾಲ ಹೌಸ್ ಸೇರಿದಂತೆ ಸುಮಾರು ಹದಿನಾಲ್ಕು ಹಿಂದಿ ಸಿನಿಮಾಗಳಲ್ಲಿ ಪೋಷಕ ನಟರಾಗಿ ಬಾಲಿವುಡ್ ನ ಖ್ಯಾತ ನಟರಿಂದ, ನಿರ್ದೇಶಕರಿಂದ ಬೆನ್ನು ತಟ್ಟಿಸಿ ಕೊಂಡಿದ್ದಾರೆ ನಟ ಸವಿ ಸಿದ್ದು. ಆದರೆ ಈ ಸಿನಿಮಾ ರಂಗದಲ್ಲಿ ಹೀಗೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಹೇಗೆ ಬೇಕಾದರೂ ಆಗಬಹುದು.
ಸಡನ್ನಾಗಿ ಅವಕಾಶಗಳು ಬರುತ್ತವೆ. ಅಷ್ಟೇ ಸಡನ್ನಾಗಿ ಅವಕಾಶಗಳು ಕಡಿಮೆಯಾಗುತ್ತವೆ. ಹೀಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗಿ ಅದೆಷ್ಟೋ ನಟ-ನಟಿಯರ ಬದುಕು ಕತ್ತಲಾಗಿದೆ.
ಸಾವಿನ ಮನೆಯ ದಾರಿಯನ್ನು ತೋರಿಸಿದೆ. ಆದರೆ ನಟಿ ಸವಿ ಸಿದ್ದು ಮಾತ್ರ ಹಿಂಗೆ ಬದುಕಬೇಕು ಎನ್ನದೆ ಕಷ್ಟಗಳು ಬಂದಾಗ ಹೆಂಗಾದರೂ ಬದುಕಬೇಕು ಒಟ್ಟಿನಲ್ಲಿ ಬದುಕಬೇಕು ಮತ್ತು ತನ್ನನ್ನು ನಂಬಿದವರ ಹೊಟ್ಟೆ ತುಂಬಿಸಬೇಕು ಎಂದು ಸಿನಿಮಾಗಳಲ್ಲಿ ಅವಕಾಶಗಳಿಲ್ಲದೆ ಹೋದರೂನು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳ ಹಿಂದೆ ಇವರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು.
ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಸವಿ ಸಿದ್ದು ಅವರಿಗೆ ಸಿನಿಮಾಗಳಲ್ಲಿ ನಟಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದರು. ಇನ್ನು ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ನಟ ಸವಿ ಸಿದ್ದು ಅವರ ಬಗ್ಗೆ ಮಾತನಾಡಿದರು. ಸವಿ ಸಿದ್ದು ಒಬ್ಬ ಶ್ರಮ ಜೀವಿ ಸ್ವಾಭಿಮಾನಿ. ಈತನ ಬಗ್ಗೆ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ನನ್ನ ಮೂರು ಸಿನಿಮಾಗಳಲ್ಲಿ ಈ ನಟ ನಟಿಸಿದ್ದಾರೆ ಎಂದು ಬರೆದು ಕೊಂಡಿದ್ದರು. ಇನ್ನೂ ಮತ್ತೆ ಇತ್ತೀಚಿಗೆ ಸವಿ ಸಿದ್ದು ಅವರು ಬಾಲಿವುಡ್ ನ ಮಸ್ಕಾ ಎಂಬ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದರು.
ಜೀವನದಲ್ಲಿ ಎಂತಹವರಿಗೂ ಒಂದಲ್ಲ ಒಂದು ಸಮಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಆಗ ಅಯ್ಯೋ ಎಂತಹ ಕಷ್ಟ ಬಂತು ಎಂದು ಕೈ ಕಟ್ಟಿ ಕೂರಬಾರದು. ಯಾರನ್ನು ಕೈ ಚಾಚಬಾರದು ಮೈ ಮುರಿಯುವಂತೆ ದುಡಿಯಬೇಕು. ಸಿಕ್ಕ ಕೆಲಸವನ್ನು ಮಾಡಬೇಕು. ಯಾರ ಹತ್ತಿರವೂ ಬೆರಳು ತೋರಿಸಿಕೊಳ್ಳದೆ ಬದುಕಬೇಕು ಎನ್ನುವ ಈ ನಟನ ಚಲ ಮತ್ತು ಸ್ವಾಭಿಮಾನವನ್ನು ಮೆಚ್ಚಬೇಕು.
– ಸುಷ್ಮಿತಾ