ದಕ್ಷ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮೇಲೂ ಬಂತು ಅವ್ಯವಹಾರದ ಆರೋಪ..!

0
340

ಇತ್ತೀಚೆಗೆ ತಮ್ಮ ರಾಜೀನಾಮೆಯಿಂದ ರಾಜ್ಯಾದ್ಯಂತ ಸುದ್ದಿಯಾಗಿದ್ದ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮೇಲೆ ಭಾರೀ ಅವ್ಯವಹಾರದ ಆರೋಪ ಕೇಳಿಬಂದಿದೆ. ಮೋದಿ ಸರ್ಕಾರ ತೆಗೆದುಕೊಂಡಿರುವ ಸರ್ವಾಧಿಕಾರಿ ನೀತಿಗಳಿಂದ ಬೇಸತ್ತು ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಸಿಕಾಂತ್ ಸೆಂಥಿಲ್ ಪರೋಕ್ಷವಾಗಿ ತಮ್ಮ ರಾಜೀನಾಮೆ ಪತ್ರದಲ್ಲಿ ವಿಷಯವನ್ನು ಪ್ರಸ್ತಾಪಿಸಿದ್ದರು. ಆದರೆ ಇದೀಗ ಅವ್ಯವಹಾರ ನಡೆಸಿದ್ದು, ಅದರಿಂದ ತಪ್ಪಿಸಿಕೊಳ್ಳಲು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

‘ಸ್ಯಾಂಡ್ ಬಝಾರ್ ಆ್ಯಪ್’ ಮೂಲಕ ಸಸಿಕಾಂತ್ ಸೆಂಥಿಲ್ ಅವ್ಯವಹಾರ ನಡೆಸಿದ್ದು, ಒಂದೇ ಪರ್ಮಿಟ್‍ಗೆ ಹಲವು ಕಡೆ ಮರಳು ತೆಗೆಯಲು ಒಪ್ಪಿಗೆ ನೀಡಿದ್ದಾರೆ. ಮಾನದಂಡ ಇಲ್ಲದ ಕಂಪೆನಿಗೆ ಮರಳಿನ ಟೆಂಡರ್ ಕೊಟ್ಟಿದ್ದಾರೆ. ಇನ್ನು ತುಂಬೆ ಡ್ರೆಜ್ಜಿಂಗ್‍ನಲ್ಲೂ ಅವ್ಯವಹಾರ ನಡೆಸಿದ್ದು, ದೆಹಲಿ ಕಂಪೆನಿಗೆ ಡ್ರೆಜ್ಜಿಂಗ್ ಮಾಡಲು ಟೆಂಡರ್ ನೀಡಿದ್ದಾರೆ. ಆದರೆ ಇದು ಕಾನೂನು ಬಾಹಿರ ಎಂದು ದಕ್ಷಿಣ ಕನ್ನಡ ಲಾರಿ ಮಾಲಿಕರ ಸಂಘಗಳ ಒಕ್ಕೂಟ ಗಂಭೀರ ಆರೋಪ ಮಾಡಿದೆ.

ಹಲವು ಕಂಪನಿಗಳಿಗೆ ಮರಳು ತೆಗೆಯಲು ಟೆಂಡರ್ ಕೊಟ್ಟಿದ್ದಾರೆ. ಆದರೆ ಮರಳು ತೆಗೆಯೋದನ್ನು ಹೂಳೆತ್ತುದಾಗಿ ರಾಜ್ಯ ಹೈ ಕೋರ್ಟ್‍ಗೆ ತಪ್ಪು ಮಾಹಿತಿ ನೀಡಿ, ದಾರಿ ತಪ್ಪಿಸಿದ್ದಾರೆ. ಅದೇ ರೀತಿ ಬ್ಲಾಕ್ ಲೀಸ್ಟ್‍ನಲ್ಲಿರುವ ಕಂಪನಿಗೆ ಟೆಂಡರ್ ನೀಡಲಾಗಿದೆ. ಸೀಝ್ ಆದ ಮರಳನ್ನು ಒಂದೇ ಕಂಪೆನಿಗೆ ಕೊಟ್ಟಿದ್ದಾರೆ ಎಂದು ಸಸಿಕಾಂತ್ ಸೆಂಥಿಲ್ ವಿರುದ್ದ ಲೋಕಾಯುಕ್ತಕ್ಕೆ ದಕ್ಷಿಣ ಕನ್ನಡ ಲಾರಿ ಮಾಲಿಕರ ಸಂಘಗಳ ಒಕ್ಕೂಟ ದೂರು ನೀಡಿದೆ.

LEAVE A REPLY

Please enter your comment!
Please enter your name here