ಸಂಖ್ಯೆ ಮೂರರ ಪ್ರಭಾವ.!

0
211

ಸಂಖ್ಯೆ ೦೩ ರಲ್ಲಿ ಜನಿಸಿದವರಿಗೆ ಬಹಳ ಅದ್ಭುತ ದಿನ. ಗುರು ಗ್ರಹದ ಪೂರ್ಣ ಫಲವನ್ನು ನೀವು ನೋಡುತ್ತೀರಿ. ನೀವು ಹೆಚ್ಚಾಗಿ ಮಾತನಾಡುವುದಿಲ್ಲ ಮೌನಿಯಾಗಿ ಇರುತ್ತೀರಿ. ಮೌನದಲ್ಲಿ ನಿಮ್ಮ ಕೆಲಸವನ್ನು ಮಾಡಿಕೊಳ್ಳುವ ತಾಕತ್ತು ನಿಮಗಿರುತ್ತದೆ. ಸಂಖ್ಯೆ ೦೩ ಎಂದರೆ ಒಂದು ಶಕ್ತಿ ಎಂದೇ ಹೇಳಬಹುದು. ಯಾಕೆಂದರೆ ಈ ೦೩,೧೨, ೨೧, ೩೧ ಸಂಖ್ಯೆಯಲ್ಲಿ ಹುಟ್ಟಿಸುವವರಿಗೆ ಗುರು ಸಂಖ್ಯೆಯ ಪ್ರಭಾವ ಇದಕ್ಕೆ ಉದಾಹರಣೆ : ಒಬ್ಬ ಸಾಮಾನ್ಯ ಹುಡುಗ ಆತನಿಗೆ ಏನೋ ಒಂದು ಹುಚ್ಚು ಏನೋ ಸಾಧಿಸಬೇಕು ಎಂಬ ಕಿಚ್ಚು.

 

 

ಕಡುಗಪ್ಪಿನ ಮನುಷ್ಯ, ನೋಡೋಕ್ಕೆ ಸ್ಮಾರ್ಟ್ ನೆಸ್ ಇಲ್ಲ. ನಾಟಕಗಳಲ್ಲಿ ಹೆಚ್ಚು ಪಾತ್ರಗಳನ್ನು ಮಾಡುವ ಅಭ್ಯಾಸ ತನಗೆ ಸಿಕ್ಕ ಸರ್ಕಾರಿ ಕೆಲಸವನ್ನು ಅರ್ಧಕ್ಕೆ ಬಿಟ್ಟು ತನ್ನ ಕನಸನ್ನು ಬೆನ್ನತ್ತಿ ಗುರುವಿನ ಮಾರ್ಗದರ್ಶನ ಪಡೆದು ಇಂದು ತಮಿಳಿನ ಸೂಪರ್ ಸ್ಟಾರ್ ಆದರೂ ಅವರೇ ರಜನಿಕಾಂತ್. ರಜನಿಕಾಂತ್ ಅವರು ಸಂಖ್ಯೆಯ ೦೩ರ ಪ್ರಭಾವವೇ.! ಅವರು ಒಂದು ಸ್ಟೈಲ್ ಹುಟ್ಟು ಹಾಕಿದ ವ್ಯಕ್ತಿ, ವ್ಯಕ್ತಿತ್ವ. ಸಂಖ್ಯೆ ಮೂರು ಪ್ರಭಾವ ಏಕಾಗ್ರತೆಯನ್ನು ಬಲವಾಗಿಸಿರುತ್ತದೆ.

 

 

ಗುರುವಿನ ಸಂಕಲ್ಪ ಗುರುವಿನ ಅಭೂತಪೂರ್ವವಾದ ಶಕ್ತಿ ಅದ್ಭುತ ನೀವು.! ನಿಮ್ಮನ್ನು ಸರಿಯಾದ ರೀತಿಯಲ್ಲಿ, ಪಾಸಿಟಿವ್ ಹಾದಿಯಲ್ಲಿ ಬಳಸಿಕೊಂಡರೆ ನೀವು ಸಾಧನೆಯ ಮೆಟ್ಟಿಲನ್ನು ಯಾವ ಮಟ್ಟಕ್ಕೆ ಬೇಕಾದರೂ ಏರಬಹುದು. ೦೩ರ ಸಂಖ್ಯೆಯ ವ್ಯಕ್ತಿಗಳಲ್ಲಿ ಜನ್ಮತಃ ಒಂದು ಪ್ರತಿಭೆ ಇರುತ್ತದೆ. ಆದರೆ ಅದನ್ನು ನೀವು ಹುಡುಕಬೇಕು ನಿಮ್ಮಲ್ಲಿರುವ ಪಾಸಿಟಿವ್ ಗುಣಗಳನ್ನು ಬಳಸಿಕೊಂಡರೆ ಜಗತ್ ಪ್ರಸಿದ್ಧಿಯನ್ನು ಪಡೆದುಕೊಳ್ಳುವ ಶಕ್ತಿ ನಿಮಗಿರಲಿದೆ. ಗುರುವಿನ ಪ್ರಭಾವ ನಿಮಗೆ ಹೆಚ್ಚಿರಲಿದೆ. ಗುರುತತ್ವಕ್ಕೆ ನಿಮ್ಮ ಶಕ್ತಿಯನ್ನು ಜೋಡಿಸಿದರೆ ಅದೊಂದು ಅದ್ಭುತ.

 

 

ಸಂಖ್ಯೆ ಮೂರು ಎಂದರೆ ಪರಶುರಾಮ ಎಂದೇ ಅರ್ಥ, ದ್ರೋಣಾಚಾರ್ಯರು, ಭೀಷ್ಮಾಚಾರ್ಯರು ಅವರಲ್ಲಿರುವ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ನಿಮ್ಮ ಬಲವನ್ನು ಅರ್ಥ ಮಾಡಿಕೊಂಡರೆ ನೀವು ಯುಗ ಪುರುಷರೇ ನಿಮಗೆ ಸರಿಸಾಟಿಯಾಗಿ ಯಾರೂ ಇರುವುದಿಲ್ಲ ಅಂತ ವರ್ಚಸ್ಸು ತಾಕತ್ತು ನಿಮಗಿರಲಿದೆ.

LEAVE A REPLY

Please enter your comment!
Please enter your name here