ಶ್ರೀ ರವಿಶಂಕರ ಗೂರುಜಿ ಅವರು ನಾಲ್ಕರ ಸಂಖ್ಯೆಯಲ್ಲಿ ಹುಟ್ಟಿರುವ ವ್ಯಕ್ತಿಗಳ ವಿಶೇಷತೆಗಳ ಬಗ್ಗೆ ಇಲ್ಲಿ ತಿಳಿಸಿಕೊಟ್ಟಿದ್ದಾರೆ. ನಾಲ್ಕರ ವ್ಯಕ್ತಿಗಳಿಗೆ ಅತ್ಯದ್ಭುತ ಶಕ್ತಿ ಇರುತ್ತದೆ. ಅಂದರೆ ಅದು ನಿಮ್ಮ ಮನಸ್ಸು, ಏಕಾಗ್ರತೆ, ಏಕಾಗ್ರತೆಯಿಂದ ನಿಂತರೆ ಯಾವ ಕೆಲಸವನ್ನು ಬೇಕಾದರೂ ಸಾಧಿಸಿ ಕೊಳ್ಳುತ್ತೀರಿ. ಆದರೆ ನಿಮ್ಮ ಮನಸ್ಸು ಚಂಚಲ ಆಗುತ್ತದೆ, ಅಡ್ಡದಾರಿ ಸಂಪಾದನೆ, ದುಡ್ಡು, ಶಾರ್ಟ್ ಕಟ್ ರೀತಿಯಲ್ಲಿ ಹೋಗುವುದು, ಅಡ್ಡಿ ಆತಂಕಗಳು ನಿಮಗೆ ಮೊದಲೇ ಇರುತ್ತದೆ.
ನಿಮ್ಮನ್ನು ದುರಭ್ಯಾಸದ ದಾಸನಾಗಿ ಮಾಡಬಹುದು. ನೀವು ಬಲಾಢ್ಯರು, ಪಾಸಿಟಿವ್ ವ್ಯಕ್ತಿಗಳು, ಆದಷ್ಟು ಅದ್ಭುತ ಚಿಂತನೆಗಳನ್ನು ಮಾಡುವ ವ್ಯಕ್ತಿಗಳ ಜೊತೆ ಇರಲು ಪ್ರಯತ್ನಿಸಿ ಬಹಳ ಒಳ್ಳೆಯದಾಗುತ್ತದೆ.
ನಿಮ್ಮ ಅಂತರಾತ್ಮದ ಶಕ್ತಿಯನ್ನು ಸರಿಯಾಗಿ ಉಪಯೋಗಿಸಿಕೊಂಡರೆ, ನೀವು ಶ್ರೇಷ್ಠ ವ್ಯಕ್ತಿಗಳಾಗುತ್ತಿರ. ಯಾವುದೇ ಕಾರಣಕ್ಕೂ ದ್ವೇಷದ ಕಿಚ್ಚನ್ನು ಯಾರೊಂದಿಗೂ ಸಾಧಿಸುತ್ತಾ ಕೊರಗಬೇಡಿ. ನಿಮ್ಮ ದ್ವೇಷದ ಪ್ರತೀಕಾರವನ್ನು ಕೆಲಸದಲ್ಲಿ ವ್ಯಕ್ತಪಡಿಸಿದರೆ ದೊಡ್ಡ ಆಲದ ಮರವಾಗಿ ನಿಂತು ಕೊಳ್ಳುತ್ತೀರಿ. ರಾಹುವಿನ ಪೂರ್ಣ ಪ್ರಭಾವ ನಿಮ್ಮ ಮೇಲಿರುತ್ತದೆ.
ನಿಮ್ಮಲ್ಲೊಂದು ಉಗ್ರತ್ವ, ವೈರತ್ವ ಇರಲಿದೆ ನೆನಪಿಟ್ಟುಕೊಳ್ಳಿ. ಸೋಲಿನಲ್ಲೂ ಗೆಲುವನ್ನು ಕಾಣುವ ತಾಕತ್ತು ೦೪ರ ಸಂಖ್ಯೆಯಲ್ಲಿ ಇರುವವರಿಗೆ ಇರುತ್ತದೆ. ನಿಮ್ಮಲ್ಲಿ ಹುಮ್ಮಸ್ಸು, ಖುಷಿ, ಜೋಷ್ ಸದಾ ಜೋರಾಗಿರಲಿದೆ.
೦೪,೧೩,೨೧,೩೧ ಸಂಖ್ಯೆಯಲ್ಲಿ ಹುಟ್ಟಿದವರ ವ್ಯಕ್ತಿತ್ವದಲ್ಲಿ ಮ್ಯಾಜಿಕ್, ಚರಿತ್ರೆ ನಿರ್ಮಾಣ ಮಾಡುವ ತಾಕತ್ತು ನಿಮ್ಮೊಳಗಿದೆ. ನೀವು ಮಾಡಬೇಕು ಎಂದು ನಿಂತುಕೊಂಡರೆ ಯಾವ ರಂಗವಾದರೂ, ಯಾವುದಾದರೂ ಕೆಲಸವನ್ನು ಸಂಪೂರ್ಣವಾಗಿ ಮುಗಿಸುತ್ತೀರಿ. ಸಂಖ್ಯೆ ೦೪ರ ಪ್ರಭಾವದಲ್ಲಿ ನಿಮಗೆ ಬಲವಿದ್ದರೆ ನೀವು ಅದ್ವಿತೀಯರು.
ಒಂದು ರೀತಿ ವಿಷಕನ್ಯ, ವಿಷ ಕೊಟ್ಟರೂ ಅಮೃತವಾಗಿ ಪರಿವರ್ತಿಸುತ್ತೀರ, ಆ ಶಕ್ತಿ ನಿಮ್ಮಲ್ಲಿರುತ್ತದೆ. ಅವಮಾನ, ಅಪಮಾನ, ಸಮಸ್ಯೆ ಸಂಖ್ಯೆ ೦೪ರ ವ್ಯಕ್ತಿಗಳಿಗೆ ಹೆಚ್ಚಾಗಿ ಬರುತ್ತದೆ. ಆದರೆ ಅದನ್ನು ಮೆಟ್ಟಿ ನಿಲ್ಲುವ ನಿಮ್ಮ ಶಕ್ತಿಯ ಬಗ್ಗೆ ಹೇಳುವ ಮಾತಿಲ್ಲ.! ಅಷ್ಟು ತಾಕತ್ತು ನಿಮಗಿದೆ. ಸರಿಯಾಗಿ ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಂಡು ಸಾಮರ್ಥ್ಯದಿಂದ ಪ್ರದರ್ಶಿಸಿದರೆ ನಿಮ್ಮನ್ನು ತಡೆಯುವ ಶಕ್ತಿ ಯಾರಿಗೂ ಇರುವುದಿಲ್ಲ.