ಸಂಖ್ಯೆ ೦೨ರ ಪ್ರಭಾವ.!

0
211

ಶ್ರೀ ರವಿಶಂಕರ್ ಗುರೂಜಿ ಅವರು ಸಂಖ್ಯೆ ೦೨ರ ಪ್ರಭಾವವನ್ನು ವಿಶೇಷವಾಗಿ ತಿಳಿಸಿಕೊಟ್ಟಿದ್ದಾರೆ. ಸಂಖ್ಯೆ ಎರಡು ಅಂದರೆ ಚಂದ್ರ ಭಾವ.! ಚಂದ್ರ ಉಚ್ಚಂಗತ ಮನಸ್ಸಿನಲ್ಲಿ ಏಕಾಗ್ರತೆ ಮೂಡಿಸುತ್ತದೆ. ಚಂದ್ರ ನೀಚತ್ವಕ್ಕೆ ತಿರುಗಿದರೆ ವ್ಯಗ್ರತ್ವ ಕಾಡುತ್ತದೆ. ವಿಪರೀತ ಸಿಟ್ಟು, ವಿಪರೀತ ಕೋಪ, ವಿಪರೀತವಾದ ಉನ್ಮಾದ, ಆತ್ಮಹತ್ಯೆ, ಆಕ್ಸಿಡೆಂಟ್, ಇಂಜುರಿ ಈ ರೀತಿಯ ವ್ಯಗ್ರತ್ವ ಇರುವ ವ್ಯಕ್ತಿ ತಮ್ಮ ನಿಲುವುಗಳನ್ನು ದಿಢೀರ್ ತೆಗೆದುಕೊಂಡು ದುಡುಕುತ್ತಾರೆ.

 

 

ಒಂದು ಪಾಸಿಟಿವ್, ಒಂದು ನೆಗೆಟಿವ್ ಎರಡು ಮುಖಗಳು ನಿಮಗಿರಲಿದೆ. ಚಂದ್ರನ ಪ್ರಭಾವಕ್ಕೆ ಒಳಗಾದವರಲ್ಲಿ ಒಳ್ಳೆತನ, ವ್ಯಗ್ರತ್ವ ಎರಡು ಇರುತ್ತದೆ. ಮುಸೋಲಿನಿ, ಹಿಟ್ಲರ್ ಇವರೆಲ್ಲ ಸಂಖ್ಯೆ ಎರಡರಲ್ಲಿಯೇ ಹುಟ್ಟಿದ್ದು. ಇಡಿ ಪ್ರಪಂಚವನ್ನು ಆಳೂವ ತಾಕತ್ತು ಅವರಿಗಿತ್ತು.

 

 

ಸಂಖ್ಯೆ ಎರಡರ ವ್ಯಕ್ತಿಗಳು ತಾವು ಅಂದುಕೊಂಡಿದ್ದನ್ನು ಸಾಧಿಸಿಕೊಳ್ಳುವ ತಾಕತ್ತು ಇರುತ್ತದೆ. ಕೆಲವರಿಗೆ ಮಾತನಾಡುವ ಚಟ ಹೆಚ್ಚು. ತಮ್ಮ ಮಾತು ಯಾರು ಕೇಳಲ್ಲ ಎಂಬ ಚಿಂತೆ ಅವರಲ್ಲಿ ಕಾಡುತ್ತಿರುತ್ತದೆ. ಹಾಗಾಗಿ ವಿಪರೀತ ಮಾತು, ಅವರ ಮಾತಿನಲ್ಲಿ ಯೋಗ್ಯತೆ ಇರುವುದಿಲ್ಲ. ಯಾರು ತಪ್ಪು ಮಾಡದ ವ್ಯಕ್ತಿಗಳಿಲ್ಲ.! ತಪ್ಪು ಸರಿ ಎರಡು ಮನುಷ್ಯನ ಮೇಲೆ ಸಾಮಾನ್ಯ.

 

 

ನಿಮ್ಮಲ್ಲಿ ಅಸಾಮಾನ್ಯ ಶಕ್ತಿ ಅಡಗಿದೆ ಅದನ್ನು ಮಾರ್ಗದರ್ಶಕರಾಗಿ ಪರಿವರ್ತಿಸಿಕೊಳ್ಳಿ. ಸಾಮಾನ್ಯ ವ್ಯಕ್ತಿ ಉನ್ನತ ಮಟ್ಟವನ್ನು ಪಡೆದುಕೊಳ್ಳುವ ತಾಕತ್ತು ಸಂಖ್ಯೆ ಎರಡರ ಪ್ರಭಾವ. ಸೋಲಿನಿಂದ ಮನೆ ಕಟ್ಟಿಕೊಳ್ಳುವ ಶಕ್ತಿ ನಿಮ್ಮಲ್ಲಿದೆ, ಜೊತೆಗೆ ತುಂಬಾ ಸೋಲನ್ನು ಮನಸ್ಸಿಗೆ ಗಂಭೀರವಾಗಿ ತೆಗೆದುಕೊಳ್ಳುತ್ತೀರಿ. ಆ ರೀತಿಯ ಪ್ರಭಾವ ಸಂಖ್ಯೆ ೦೨ರಲ್ಲಿ ಹುಟ್ಟಿದವರಿಗೆ ಇರುತ್ತದೆ.

LEAVE A REPLY

Please enter your comment!
Please enter your name here