ಸಂಕ್ರಾಂತಿ ಹಬ್ಬದ ಸಿದ್ಧತೆಗಳು.!

0
284

ಸಂಕ್ರಾಂತಿ ಎಂದರೆ ಅದೊಂದು ಸಂಸ್ಕಾರದ ಹಬ್ಬ. ಸಂಸ್ಕಾರ ಕ್ರಾಂತಿ ಎನ್ನುವಂಥದ್ದು ನಮ್ಮ ಭಾರತೀಯರು ಪ್ರತಿಯೊಂದನ್ನು ಪೂಜೆ ಮಾಡಿಯೇ ಹೆಜ್ಜೆ ಇಡುತ್ತಿದ್ದದು, ಇವತ್ತು ನಮ್ಮಲ್ಲಿ ಅದನ್ನು ಬಿಟ್ಟು ಬಿಟ್ಟಿದ್ದೇವೆ. ಪಶು, ಪಕ್ಷಿ ಮರ ಗಿಡ ಎಲ್ಲದಕ್ಕೂ ಒಂದು ಪೂಜೆ ಇಟ್ಟು ನಮಸ್ತೆ ಮಾಡುತ್ತಿದ್ದೇವು. ಆದರೆ ಇಂದು ಅದನ್ನೆಲ್ಲ ಮರೆತು, ನಮ್ಮದೇ ಒಂದು ಸ್ವಾರ್ಥಕ್ಕೆ ಬದುಕುತ್ತಿದ್ದೇವೆ. ಪ್ರಕೃತಿಯಲ್ಲಿ ನೋಡಿ ನಮಗೋಸ್ಕರ ಕೆರೆ, ಗಿಡ, ಗಾಳಿ, ಮರ ಎಲ್ಲವನ್ನೂ ಭಗವಂತ ಇಟ್ಟಿದ್ದಾನೆ. ಇಂದಿನ ಸಂಸ್ಕಾರಗಳನ್ನು ನಾವು ಬಿಟ್ಟು ಬಿಟ್ಟಿದೇವೆ.

 

ಯಾರು ಹಾಳಾದರೂ, ಹೇಗಾದರೂ ಸರಿ ನಾವು ಬದುಕಲೇಬೇಕು ಎಂಬ ಸ್ವಾರ್ಥಕ್ಕೆ ವಿಕೃತವಾಗಿ ಬದುಕುತ್ತಿದ್ದಾನೆ. ಸರ್ವನಾಶದ ಅಂಚಿನಲ್ಲಿ ತನ್ನನ್ನು ತಾನೇ ಇಟ್ಟುಕೊಂಡಿದ್ದಾನೆ. ತನ್ನ ಜಾಗವನ್ನು ತಾನೇ ರೂಪಿಸಿಕೊಳ್ಳುತ್ತಿದ್ದಾನೆ. ನಮ್ಮ ಹಿರಿಯರು ಪ್ರತಿಯೊಂದನ್ನು ತಲೆಯಲ್ಲಿ ಇಟ್ಟುಕೊಂಡು, ಮುಂದಾಲೋಚನೆಯನ್ನು ಮಾಡಿ ನಮಗೆ ಪ್ರತಿಯೊಂದು ಸಂಸ್ಕಾರವನ್ನು ಹಬ್ಬದ ಮೂಲಕ ತಿಳಿಸಿಕೊಡುತ್ತಿದ್ದರು. ಪ್ರಕೃತಿಯ ಒಂದೊಂದು ಅತ್ಯವಶ್ಯಕ ಮೂಲಗಳನ್ನು ನಮಗೆ ಹಬ್ಬದ ಮುಖೇನ ಪರಿಚಯಿಸಿ ಕೊಡುತ್ತಿದ್ದರು. ಇಂದು ಅದನ್ನೆಲ್ಲ ಬಿಟ್ಟು ನಮ್ಮದೇ ಸ್ವಂತ ಕೆಲಸ, ಸ್ವಾರ್ಥತೆಯಿಂದ ಬದುಕುತ್ತಿದ್ದೇವೆ.

 

ನಾವು ತಿನ್ನುವ ಊಟವೂ ಕೂಡ ಇಂದು ಕಲಬೆರಕೆ ಆಗೋಗಿದೆ. ನಮ್ಮ ಹಿರಿಯರು ಬಹಳ ಗಟ್ಟಿಮುಟ್ಟಾಗಿ ಇರುತ್ತಿದ್ದರು. ಯಾಕೆಂದರೆ ತಾವು ಬೆಳೆದ ಆಹಾರವನ್ನು ಶುದ್ಧವಾಗಿ ಉಪಯೋಗಿಸುತ್ತಿದ್ದರು. ಆದರೆ ಇಂದು ಎಲ್ಲವೂ ಕಲಬೆರಕೆ ಅನಾರೋಗ್ಯದಿಂದ ಬಳಲುತ್ತಿದ್ದೇವೆ ಮತ್ತು ಇದರ ಹಿಂದೆ ಬಿದ್ದಿದ್ದೇವೆ. ಭೋಗ ಎಂದರೆ ಐಶ್ವರ್ಯ, ಐಶ್ವರ್ಯ ಎಂದರೆ ಆರೋಗ್ಯ, ಆಲೋಚನೆ, ನಿಮ್ಮ ಚಿಂತನೆ, ನಿಮ್ಮ ಮನಸ್ಸು ಇದು ಮಾತ್ರ ಬೋಗ ಎಂದು ಹೇಳುತ್ತಾರೆ ವಿನಃ ಹಣವನ್ನಲ್ಲ.! ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಫ್ರಿಡ್ಜ್ ನೀರನ್ನು ಕುಡಿಯಬೇಡಿ, ಫ್ರಿಡ್ಜ್ನಲ್ಲಿಟ್ಟ ಆಹಾರವನ್ನು ತಿನ್ನಬೇಡಿ.!

 

ಪ್ರತಿಯೊಂದಕ್ಕೂ ಮಡಿಕೆಯನ್ನು ಉಪಯೋಗಿಸಿ, ಮಡಿಕೆಯ ನೀರು ಕುಡಿಯಿರಿ, ಮಡಿಕೆಯಲ್ಲಿ ಆಹಾರ ತಯಾರಿಸಿ, ಮಡಿಕೆಯ ಒಂದು ವ್ಯವಸ್ಥೆಯನ್ನು ರೂಪಿಸಿಕೊಳ್ಳಿ. ಇದರಿಂದ ನಿಮ್ಮ ಆರೋಗ್ಯ ಬಹಳ ಉತ್ತಮವಾಗಿರುತ್ತದೆ. ಆದಷ್ಟು ನಿಮ್ಮ ಮನೆಯಲ್ಲಿಯೇ ಕೆಲವೊಂದು ವಸ್ತುಗಳನ್ನು ತಯಾರಿಸಿಕೊಳ್ಳಬಹುದು, ಚಿಕ್ಕದಾಗಿ ಬಳಸಿಕೊಳ್ಳಬಹುದು ಇದರ ಬಗ್ಗೆ ಹಾಗೂ ಈ ಒಂದು ಬೋಗಿ ಹಬ್ಬಕ್ಕೆ ಶ್ರೀ ರವಿಶಂಕರ್ ಗುರೂಜಿಯವರು ವಿನೂತನವಾಗಿ ಹೊಸ ಯೋಜನೆಗಳನ್ನು ಜನರಿಗೆ ಪರಿಚಯಿಸುತ್ತಿದ್ದಾರೆ ಈ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಇಂದಿನ ಸಂಚಿಕೆಯ ವಿಡಿಯೋ ವೀಕ್ಷಿಸಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ನಿಮ್ಮ ದಿನ ಚೆನ್ನಾಗಿದೆ. ಹಬ್ಬದ ವಾತಾವರಣ, ಸ್ವಲ್ಪ ಖರ್ಚು, ಓಡಾಟ, ದೈವ ಕಾರ್ಯ, ಪೂಜಾ ಕಾರ್ಯ ಮನೆಯನ್ನು ಶುದ್ಧಿ ಮಾಡಿಕೊಳ್ಳುವ ಒಂದು ದಿನ ಯೋಚನೆ ಮಾಡಿಕೊಳ್ಳಿ ಒಳ್ಳೆಯದಾಗುತ್ತದೆ.

 

ವೃಷಭ– ಕುಟುಂಬದ ಜವಾಬ್ದಾರಿ, ಯಾರದ್ದೊ ಸ್ತ್ರೀ ವಿಚಾರದಲ್ಲಿ ಸಣ್ಣ ಎಳೆದಾಟ, ಅತ್ತೆ, ಮಾವ, ಚಿಕ್ಕಮ್ಮ, ನಾದಿನಿ, ಇವರ ಜೊತೆ ಸಣ್ಣ ತಳಮಳ, ಸ್ತ್ರೀ ವಿಚಾರವಾಗಿ, ಸ್ತ್ರೀ ಅನಾರೋಗ್ಯದ ಸಮಸ್ಯೆಗಳಲ್ಲಿ ಒಂದು ಬಳಲಿಕೆ ಉಂಟು. ಮನೆಯಲ್ಲಿ ಕೃಷ್ಣನ ವಿಗ್ರಹಕ್ಕೆ ತುಳಸಿ ಅರ್ಪಿಸಿ ಸೇವಿಸಿ.

 

ಮಿಥುನ– ಚಂದ್ರ ಚೆನ್ನಾಗಿದ್ದಾನೆ. ಕೇತು ಸಾರದಲ್ಲಿದ್ದರೂ ಕೂಡ ಚೆನ್ನಾಗಿದೆ. ವಿಶೇಷವಾಗಿ ಭಾಗ್ಯಸ್ಥಾನದಲ್ಲಿ ಇರುವ ಶುಕ್ರ ರಾಹು ಸಂಧಿ ಬೇರೆ! ಬೇಕಾದ ಖರ್ಚು, ಓಡಾಟ, ಹಬ್ಬಕ್ಕೆ ಈಗಲೇ ಒಂದಿಷ್ಟು ಎಳ್ಳು- ಬೆಲ್ಲ, ಅವರೆಕಾಯಿ ಎಲ್ಲವನ್ನೂ ತಂದಿಟ್ಟುಕೊಳ್ಳುವ ಒಂದು ದಿನ.

 

 

ಕಟಕ-ಹಬ್ಬದ ಸಿದ್ಧತೆ ಮಾಡಿಕೊಳ್ಳಿ ಒಂದು ಗೋ ಪೂಜೆ ಕೂಡ ಸಿದ್ಧತೆ ಮಾಡಿಕೊಳ್ಳಿ ಒಳ್ಳೆಯ ಸುದ್ದಿ ಕೇಳುತ್ತೀರಿ. ಕುಟುಂಬ ಜವಾಬ್ದಾರಿ, ಓಡಾಟ, ಸುತ್ತಾಟ, ಒಂದು ರೀತಿ ಗಾಬರಿ ಪಡಿಸಿದರೂ ಯಾವ ರೀತಿಯ ತೊಂದರೆ ಇಲ್ಲ. ಅಲಂಕಾರಕ್ಕೋಸ್ಕರ ಖರ್ಚು ವೆಚ್ಚ ಆಗಲಿದೆ.

 

ಸಿಂಹ– ಯಾಕೋ ಬೆಳಗ್ಗೆ ಮಂದಗತಿಯಲ್ಲಿ ಸಾಗುತ್ತೀರಿ. ಆರೋಗ್ಯದಲ್ಲಿ ಸ್ವಲ್ಪ ತಳಮಳ, ಅನ್ನಿಸುತ್ತದೆ. ಒಂದು ಶುದ್ಧ ತುಳಸಿಯನ್ನು ತೆಗೆದುಕೊಂಡು ಅದನ್ನು ತೊಳೆದು ಬಿಸಿ ನೀರಿನಲ್ಲಿ ಹಾಕಿ ಕುದಿಸಿ, ಬೆಂದ ಬೆಂಕಿಯಲ್ಲಿ ಕುದಿಸಿ, ನಂತರ ಅದರ ಬೇಗೆಯನ್ನು ತೆಗೆದುಕೊಳ್ಳಿ. ತಲೆಭಾರ, ಶೀತ ಎಲ್ಲವೂ ಕಡಿಮೆಯಾಗುತ್ತದೆ. ಗಣಪತಿಯ ಆರಾಧನೆಯನ್ನು ಮಾಡಿಕೊಳ್ಳಿ ಶುಭವಾಗಲಿದೆ.

 

ಕನ್ಯಾ– ಹಬ್ಬದ ವಾತಾವರಣ, ಖುಷಿ, ಆಕಸ್ಮಿಕ ದೈವದರ್ಶನ, ದೈವಾನುಗ್ರಹದ ಒಂದು ಸಂಕಲ್ಪ! ಸ್ವಲ್ಪ ಖರ್ಚು, ಸೊಂಟ ನೋವು, ಬೆನ್ನುನೋವು ಇರಲಿದೆ ಜಾಗರೂಕತೆ.

 

ತುಲಾ– ದೈವ ಕಾರ್ಯಗಳಲ್ಲಿ ಪ್ರಗತಿ ನಿಮಗೆ. ಯಾವುದೋ ದಾನ, ಧರ್ಮ, ಪೂಜೆ, ಸಂಕ್ರಾಂತಿ ಹಬ್ಬ ಅಂದ್ರೆ ಪೊಂಗಲ್ ಮಾಡಿ ಹಂಚುವುದು. ವಯಸ್ಸಾದವರಿಗೆ ಬಡ ಮಕ್ಕಳಿಗೆ ಕಿಚಡಿ ರೀತಿಯಲ್ಲಿ ಮಾಡಿ ಅವರಿಗೆ ಹಂಚಿ ಬಹಳ ದೈವಾನುಗ್ರಹ ದೊರೆಯಲಿದೆ.

 

ವೃಶ್ಚಿಕ– ವಿಶೇಷವಾದಂಥ ದಿನ, ದೈವ ನಿಮಿತ್ತ, ಧಾರ್ಮಿಕ ಕಾರ್ಯ, ಅನಾಥಾಶ್ರಮ, ವೃದ್ಧಾಶ್ರಮ, ವೇಧ, ಧಾರ್ಮಿಕ ಸಂಸ್ಥೆ, ಸ್ಕೂಲ್, ಯಾರಿಗೂ ದಾರಿ ತೋರಿಸುವಂತಹ ಕೆಲಸ ಕಾರ್ಯಗಳು ತೊಡಗಿಸಿಕೊಂಡಿದ್ದರೆ ವಿಶೇಷ ಪ್ರಗತಿಯ ದಿನ ಮಾಡಿ ಇನ್ನಷ್ಟು ಒಳ್ಳೆಯದಾಗಲಿದೆ.

 

ಧನಸ್ಸು– ತಂದೆ,ತಾಯಿ, ಅತ್ತಿಗೆ, ನಾದಿನಿ, ಹಿರಿಯರು ,ಸ್ತ್ರೀಗೆ ಸಂಬಂಧಿಸಿದ ರೋಗ ಸಮಸ್ಯೆಗಳು, ಬಾಧೆಗಳು, ಕಿರಿಕಿರಿ, ಕಲಾವಿದರಿಗೆ ಹೊರೆ ಅನ್ನಿಸುತ್ತದೆ. ಸ್ವಲ್ಪ ವಿಷ್ಣು ಸಹಸ್ರನಾಮವನ್ನು ಕೆಳ ತಕ್ಕಂತ ಕೆಲಸ ಮಾಡಿ, ಕಲಾವಿದರಿಗೆ ಬಟ್ಟೆ, ಹೂವು ,ಹಣ್ಣು, ವ್ಯಾಪಾರಿಗಳು ಒಂದು ಮಟ್ಟಿಗೆ ಲಾಭವನ್ನು ನೋಡಕ್ಕಂತ ದಿನ.

 

ಮಕರ– ಕೊಡುವುದು, ತೆಗೆದುಕೊಳ್ಳುವುದು ಆ ವಿಚಾರದಲ್ಲಿ ಜಾಗರೂಕತೆ. ಪ್ರಯಾಣದಲ್ಲಿ ಸ್ವಲ್ಪ ಎಳೆದಾಟ, ಜಾಗರೂಕತೆ ಏನೋ ಆತಂಕ ಪಡುವಂತಹ ವಿಚಾರ ಏನಿಲ್ಲ! ಸ್ವಲ್ಪ ತುಳಸಿಯನ್ನು ನೀರಿನಲ್ಲಿ ಕುದಿಸಿ, ಸೋಸಿ ನಂತರ ಆ ನೀರನ್ನು ಸೇವಿಸಿ ಶೀತದಿಂದ ಕೆಮ್ಮಿನಿಂದ ಮುಕ್ತವಾಗಬಹುದು.

 

ಕುಂಭ– ಹಬ್ಬದ ಚಿಂತೆ, ಮನೆಯ ಚಿಂತೆ, ಕುಟುಂಬದ ಚಿಂತೆ, ಜವಾಬ್ದಾರಿ ಚಿಂತೆ ಒಂದು ಸಣ್ಣ ತೊಳಲಾಟ ಇರುತ್ತದೆ. ಸಂಕ್ರಾಂತಿ ನಂತರ ನಾಗಾಲೋಟ ಅದರಿಂದ ಆತಂಕಕ್ಕೆ ಒಳಗಾಗಬೇಡಿ, ಸಿದ್ಧತೆ ಮಾಡಿಕೊಳ್ಳಿ ಒಂದೆರಡು ಗೋವು, ಹಸು ಇವುಗಳ ಪೂಜೆಗೆ ಸಿದ್ಧತೆ ಮಾಡಿಕೊಳ್ಳಿ. ಮನೆಗೆ ಲಕ್ಷ್ಮಿ, ಹೆಸರು, ಅಧಿಕಾರ ಹುಡುಕಿಕೊಂಡು ಬರುತ್ತದೆ ಆ ಸಮಯ ಬಂದಿದೆ ಒಳ್ಳೆಯದಾಗಲಿದೆ.

 

ಮೀನ– ಸ್ವಲ್ಪ ಮಕ್ಕಳ ಆರೋಗ್ಯದ, ಬಗ್ಗೆ ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕತೆ ಎಚ್ಚರ ವಹಿಸಿ. ಬೆಳಗ್ಗೆ ಶಿವನ ಹೆಸರಿನಲ್ಲಿ ಕಿಚಿಡಿ ಗಂಜಿಯನ್ನು ನೈವೇದ್ಯಕ್ಕೆ ಇಟ್ಟು ಪ್ರಸಾದವಾಗಿ ಪೂಜೆ ಮಾಡಿ ಅನಂತರ ಸೇವಿಸುವ ಕೆಲಸ ಮಾಡಿ ಶುಭವಾಗಲಿದೆ. ಆಯಿತೆಂದರೆ ಮೂಕ ಪ್ರಾಣಿಗಳು, ಪಕ್ಷಿಗಳಿಗೆ ಪ್ರಸಾದವನ್ನು ಹಂಚುವಂತ ಕೆಲಸ ಮಾಡಿ ಒಳ್ಳೆಯದಾಗುತ್ತದೆ.

LEAVE A REPLY

Please enter your comment!
Please enter your name here