ಸ್ನೇಹಿತನಿಗೆ ನಾಯಿ ಕಣ್ಣು….ರ..ಕಣ್ಣು…ಮು…ಕಣ್ಣು ಎಂದು ದೃಷ್ಠಿ ತೆಗೆದ ಸಂಜನಾ ಗ್ರಲಾನಿ

0
192

ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್​​​​ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ಅಧಿಕಾರಿಗಳು ನಟಿ ರಾಗಿಣಿ ದ್ವಿವೇದಿ, ರಾಗಿಣಿ ಸ್ನೇಹಿತ ರವಿಶಂಕರ್, ಸಂಜನಾ ಗಲ್ರಾನಿ ಫ್ರೆಂಡ್ ರಾಹುಲ್ ಹಾಗೂ ಇನ್ನಿತರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಕಳೆದ ಒಂದು ವಾರದಿಂದ ಸಂಜನಾ ಗಲ್ರಾನಿ ನನಗೆ ಯಾವುದೇ ನೋಟೀಸ್ ಬಂದಿಲ್ಲ ಎಂಬ ಕಾರಣಕ್ಕೆ ಸ್ವಲ್ಪ ಆರಾಮವಾಗಿ ಇದ್ದರು. 3 ದಿನಗಳ ಹಿಂದೆ ತಮ್ಮ ಮುದ್ದಿನ ನಾಯಿಗಳಾದ ಸುಲ್ತಾನ್, ಶೇರ್​ಖಾನ್​ಗೆ ಸ್ನಾನ ಮಾಡಿಸುತ್ತಾ ಕಾಲ ಕಳೆದಿದ್ದರು. ಪ್ರಕರಣದಲ್ಲಿ ತಮ್ಮ ಹೆಸರನ್ನು ಹೇಳಿದ ಪ್ರಶಾಂತ್ ಸಂಬರ್ಗಿಯನ್ನು ಬೈಯ್ಯುತ್ತಿದ್ದ ಸಂಜನಾ ಗಲ್ರಾನಿಗೆ ಇಂದು ಬೆಳಗ್ಗೆ ಶಾಕ್ ಕಾದಿತ್ತು. ಸಿಸಿಬಿ ಅಧಿಕಾರಿಗಳು ಸಂಜನಾ ವಾಸಿಸುತ್ತಿದ್ದ ಸಾಯಿತೇಜ ಅಪಾರ್ಟ್​ಮೆಂಟ್ ಮೇಲೆ ದಾಳಿ ಮಾಡಿ ಸುಮಾರು 5 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ್ದಾರೆ. ನಂತರ ಹೆಚ್ಚಿನ ವಿಚಾರಣೆಗಾಗಿ ಅಧಿಕಾರಿಗಳು ನಟಿಯನ್ನು ಸಿಸಿಬಿ ಆಫೀಸಿಗೆ ಕರೆದೊಯ್ದಿದ್ದಾರೆ.

ಇನ್ನು ಸಂಜನಾ ಯಾವಾಗಲೂ ಬಾಯಿ ಬಿಟ್ಟರೆ ಇಂಗ್ಲೀಷ್​​ ಮಾತನಾಡುತ್ತಿದ್ದಾಕೆ. ಅವರು ಮಾತನಾಡುತ್ತಿದ್ರೆ ಪಾಪ ಕನ್ನಡ ಇನ್ನೂ ಕಲಿತಿಲ್ಲವೇನೋ ಎನ್ನಿಸುತ್ತಿತ್ತು. ಆದರೆ ರಾಹುಲ್ ಬರ್ತಡೇ ವಿಡಿಯೋವೊಂದರಲ್ಲಿ ನಾಯಿ ಕಣ್ಣು..ರ….ಕಣ್ಣು….ಮು…ಕಣ್ಣು ಎಂದು ಹೇಳುತ್ತಾ ಸ್ನೇಹಿತನಿಗೆ ದೃಷ್ಟಿ ತೆಗೆಯುತ್ತಿದ್ದನ್ನು ನೋಡಿದರೆ ಎಲ್ಲರಿಗೂ ಆಶ್ಚರ್ಯವಾಗುವುದು ಖಂಡಿತ. ಈ ವರ್ಷ ಜನವರಿಯಲ್ಲಿ ಸಂಜನಾ ಆಪ್ತ ಎಂದೇ ಹೇಳುವ ರಾಹುಲ್ ಹುಟ್ಟುಹಬ್ಬವನ್ನು ಸಂಜನಾ ತಮ್ಮ ಅಪಾರ್ಟ್ಮೆಂಟ್​​​ನಲ್ಲೇ ಸೆಲಬ್ರೇಟ್ ಮಾಡಿದ್ದರು. ಈ ವೇಳೆ ಕೇಕ್ ಕಟ್ ಮಾಡಿಸಿ ರಾಹುಲ್​​ಗೆ ಕೇಕ್ ತಿನ್ನಿಸಿ, ಶುಭ ಕೋರಿ ಆತನಿಗೆ ದೃಷ್ಟಿ ಕೂಡಾ ತೆಗೆದಿದ್ದಾರೆ ಸಂಜನಾ ಗಲ್ರಾನಿ. ವಿಡಿಯೋ ನೋಡಿದವರು ಅವರಿಗೆ ಅಷ್ಟು ಚೆನ್ನಾಗಿ ಕನ್ನಡ ಬರುತ್ತಾ ಎಂದುಕೊಳ್ಳುತ್ತಿದ್ದಾರೆ.

ಮತ್ತೊಂದು ಆಶ್ಚರ್ಯದ ವಿಚಾರವೆಂದರೆ ಈ ವಿಡಿಯೋದಲ್ಲಿ ಇರುವ ವ್ಯಕ್ತಿಯೊಬ್ಬರನ್ನು ಸಂಜನಾ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ರಾಹುಲ್​​ ವಿಚಾರಣೆಗೆ ಸಂಬಂಧಿಸಿದಂತೆ ಅವರ ತಂದೆಯವರನ್ನು ಮಾಧ್ಯಮದವರು ಮಾತನಾಡಿಸಿದಾಗ, ನನಗೆ ಆರೋಗ್ಯ ಸರಿ ಇಲ್ಲದಿದ್ದಾಗ ಸಂಜನಾ ಹಾಗೂ ಆಕೆ ಪತಿ ನನಗೆ ಬಹಳ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ನಿನ್ನೆ ಸಿಸಿಬಿ ಪೊಲೀಸರು ಸಂಜನಾ ಅವರನ್ನು ಕರೆದೊಯ್ದಾಗ ಕೂಡಾ ಸ್ಥಳೀಯರು ಸಂಜನಾ ಬಗ್ಗೆ ಆರೋಪಿಸಿದ್ದಾರೆ.

ಸಂಜನಾ ಪಾರ್ಟಿ ಪಾರ್ಟಿ ಎಂದುಕೊಂಡು ನೆರೆಹೊರೆಯವರಿಗೆ ಬಹಳ ಕಿರಿಕಿರಿಯುಂಟುಮಾಡುತ್ತಿದ್ದರು. ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕಾರ್ಡಿಯಾಲಜಿಸ್ಟ್ ಆಗಿ ಕೆಲಸ ಮಾಡುವ ಆ ವ್ಯಕ್ತಿ ಸಂಜನಾ ಮನೆಗೆ ಆಗ್ಗಾಗ್ಗೆ ಬಂದು ಹೋಗುತ್ತಿದ್ದರು ಎಂದು ಆರೋಪಿಸಿದ್ದಾರೆ. ಆದರೆ ನಿಜ ಏನು ಎಂಬುದನ್ನು ಸಂಜನಾ ಹೇಳಬೇಕು. ಸದ್ಯಕ್ಕೆ ಸಂಜನಾರನ್ನು ರಾಗಿಣಿಯನ್ನು ಇರಿಸಲಾಗಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲೇ ಇರಿಸಲಾಗಿದೆ. ಈ ಪ್ರಕರಣ ಎಲ್ಲಿಗೆ ಬಂದು ಮುಟ್ಟಲಿದೆಯೋ ಕಾದು ನೋಡಬೇಕು.

LEAVE A REPLY

Please enter your comment!
Please enter your name here