ನಟಿ ಸಂಜನಾ ಮದುವೆ ಸಿಕ್ರೇಟ್ ಬಯಲು; ಹಾರ್ಟ್ ಸ್ಪೆಷಲಿಸ್ಟ್ ನ ಹೃದಯ ಕದ್ದ ಗಲ್ರಾಣಿ

0
419

ಬಾಲಿವುಡ್ ನಿಂದ ಹಿಡಿದು ಸ್ಯಾಂಡಲ್ ವುಡ್ ವರೆಗೂ ಇದೀಗ ಮಾದಕ ವಸ್ತುಗಳದ್ದೇ ಸುದ್ದಿ, ದಿನದಿಂದ ದಿನಕ್ಕೆ ಮಾಯಾನಗರಿಯ ಮಾದಕ ಲೋಕದ ನಶೆಯಲ್ಲಿ ತೇಲಾಡಿದ ತಾರೆಯರ ಪಟ್ಟಿಯೇ ಬಹಿರಂಗವಾಗುತ್ತಿದೆ. ಒಂದೆಡೆ ದೇಶಾದ್ಯಂತ ಮಹಾಮಾರಿ ಕೊರೊನಾ ಸೋಂಕು ತನ್ನ ಅಟ್ಟಹಾಸವನ್ನು ಮುಂದುವರೆಸುತ್ತಿದೆ. ಇನ್ನೊಂದೆಡೆ ಚಿತ್ರರಂಗದಲ್ಲಿನ ಡ್ರಗ್ಸ್ ಜಾಲದ ನಂಟಿನ ಕುರಿತು ದಿನಕ್ಕೊಂದು ಸುದ್ದಿಗಳು ಸ್ಫೋಟಗೊಳ್ಳುತ್ತಿವೆ. ಮತ್ತೊಂದೆಡೆ ಮಾದಕ ದ್ರವ್ಯದ ಜತೆ ನಂಟಿರುವ ಬಗ್ಗೆ ಆರೋಪಗಳನ್ನು ಹೊತ್ತಿರುವ ಸ್ಯಾಂಡಲ್ ವುಡ್ ನಟಿಮಣಿಯರ ಕುರಿತು ಹಲವಾರು ಕುತೂಹಲಕಾರಿ ವಿಷಯಗಳು ಹೊರಬರುತ್ತಿರುತ್ತಿದೆ.

ಹೌದು. ಕನ್ನಡ ಚಿತ್ರರಂಗದಲ್ಲೂ ಡ್ರಗ್ಸ್ ಜಾಲದ ನಂಟು ಪ್ರಕರಣ ಈಗಾಗಲೇ ರಾಜ್ಯದ ಜನತೆಯನ್ನು ಆತಂಕಕ್ಕೀಡುಮಾಡಿದೆ ಮಾತ್ರವಲ್ಲ ದಿನದಿಂದ ದಿನಕ್ಕೆ ಈ ಪ್ರಕರಣ ಹಲವಾರು ತಿರುವುಗಳನ್ನು ಪಡೆದುಕೊಳ್ಳುತ್ತಿರುವುದು ಕುತೂಹಲಗಳನ್ನು ಇಮ್ಮಡಿಗೊಳಿಸಿದೆ. ಮಾದಕ ಜಾಲದ ನಂಟಿನ ಆರೋಪ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ವಶದಲ್ಲಿರುವ ನಟಿ ಸಂಜನಾ ಗಲ್ರಾಣಿ ಕುರಿತು ಇನ್ನಷ್ಟು ರಹಸ್ಯಗಳು ಬಯಲಾಗುತ್ತಿವೆ. ತನಗೆ ಮದುವೆಯೇ ಆಗಿಲ್ಲ ಎಂದು ಹೇಳುತ್ತಿದ್ದ ನಟಿ ಸಂಜನಾ ಅವರ ವಿವಾಹದ ರಹಸ್ಯ ಇದೀಗ ಬಯಲಾಗಿದೆ.

ನಟಿ ಸಂಜನಾ ಗಲ್ರಾಣಿ ವೈದ್ಯರೊಬ್ಬರನ್ನು ವಿವಾಹವಾಗಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿಸ್ಟ್ ಆಗಿರುವ ಡಾ.ಅಜಿಜ್ ಜತೆ ಸಂಜನಾ ರಹಸ್ಯವಾಗಿ ವಿವಾಹವಾಗಿದ್ದಾರೆ. ಈ ವಿವಾಹದಲ್ಲಿ ಕೇವಲ 20 ಜನರು ಮಾತ್ರ ಭಾಗಿಯಾಗಿದ್ದರು. ವೈದ್ಯನ ಜತೆಗೆ ಮದುವೆಯಾಗಿದ್ದರೂ ನಟಿ ತನ್ನ ವಿವಾಹದ ಬಗ್ಗೆ ರಹಸ್ಯವಾಗಿಟ್ಟಿದ್ದೇಕೆ ಎಂಬುದು ತಿಳಿದುಬಂದಿಲ್ಲ.

ಡ್ರಗ್ಸ್ ಮಾಫಿಯಾ ಜತೆ ನಂಟು ಆರೋಪ ಪ್ರಕರಣ ಸಂಬಂಧ ಇತ್ತೀಚೆಗೆ ಮಾಧ್ಯಮಗಳ ಜತೆ ಮಾತನಾಡಿದ್ದ ಸಂಜನಾ ನನಗಿನ್ನೂ ಮದುವೆಯಾಗಿಲ್ಲ. ಅನಗತ್ಯವಾಗಿ ಈ ಪ್ರಕರಣದ ಜತೆ ನನ್ನ ಹೆಸರನ್ನು ಲಿಂಕ್ ಮಾಡುತ್ತಿರುವುದು ಏಕೆ? ಈ ರೀತಿ ಪ್ರಕರಣದಲ್ಲಿ ನನ್ನ ಮೇಲೆ ಆರೋಪ ಮಾಡಿದರೆ ಮುಂದೆ ನಾನು ಮದುವೆಯಾಗಿ ಹೋಗುವುದಾದರು ಹೇಗೆ? ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಪ್ರಕರಣ ಸಂಬಂಧ ಸಂಜನಾ ನಿವಾಸದ ಮೇಲೆ ಸಿಸಿಬಿ ದಾಳಿ ನಡೆದಿದ್ದ ಸಂದರ್ಭದಲ್ಲಿ ಸಂಜನಾ ತಂದೆ ನೀಡಿದ ಹೇಳಿಕೆಯೊಂದು ಅಚ್ಚರಿಗೆ ಕಾರಣವಾಗಿತ್ತು. ನನಗೆ ಅನಾರೋಗ್ಯದ ಸಂದರ್ಭದಲ್ಲಿ ಸಂಜನಾ ಪತಿಯೇ ತನಗೆ ಚಿಕಿತ್ಸೆ ನೀಡಿದ್ದರು ಎಂದಿದ್ದರು. ಈ ಹೇಳಿಕೆ ಸಂಜನಾ ಡಾಕ್ಟರ್ ಒಬ್ಬರನ್ನು ವಿವಾಹವಾಗಿದ್ದು ನಿಜವೆಂಬ ಸಂಗತಿಗೆ ಇನ್ನಷ್ಟು ಪುಷ್ಠಿ ನೀಡಿದಂತಿತ್ತು. ಇದೀಗ ಸಂಜನಾ ಹಾಗೂ ಡಾಕ್ಟರ್ ವಿವಾಹದ ಫೋಟೋ ವೈರಲ್ ಆಗಿದ್ದು, ಸಂಜನಾ ಮದುವೆ ಸಿಕ್ರೇಟ್ ಬಯಲಾಗಿದೆ.

LEAVE A REPLY

Please enter your comment!
Please enter your name here