ಈ ವಾರ ತೆರೆಗೆ ಅಪ್ಪಳಿಸಲಿದೆ ಸ್ಯಾಂಡಲ್‍ವುಡ್‍ನ `5′ ಪ್ರಮುಖ ಚಿತ್ರಗಳು..!!

0
156

ಕನ್ನಡ ಚಿತ್ರರಂಗ ಬೇರೆ ಭಾಷೆ ಸಿನಿಮಾಗಳಿಗಿಂತ ಯಾವ ರೀತಿಯಲ್ಲೂ ಕಡಿಮೆಯಿಲ್ಲ ಎಂಬುದನ್ನು ಈಗಾಗಲೇ ನಿರೂಪಿಸಿದೆ. ಆದರ ಬಗ್ಗೆ ಎರಡನೇ ಮಾತೆ ಇಲ್ಲ.! ಎನ್ನಬಹುದು. ಪ್ರತಿ ವಾರವು ಕನ್ನಡ ಚಿತ್ರಗಳು ಪ್ರೇಕ್ಷೆಕರಿಗೆ ಭರಪೂರ ಮನರಂಜನೆ ನೀಡಲು ವಾರಕ್ಕೆ ಸಾಮಾನ್ಯವಾಗಿ 2-3 ಸಿನಿಮಾಗಳು ಬರುತ್ತಿದ್ದವು. ಆದರೆ ಈ ವಾರ 5 ಕನ್ನಡ ಚಿತ್ರಗಳು ಏಕಕಾಲಕ್ಕೆ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿರುವುದು, ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹಾಗೂ ಕೂತೂಹಲ ಮೂಡಿಸಿದೆ ಎನ್ನಬಹುದು.ಕನ್ನಡ ಚಿತ್ರಗಳು ಬೇರೆ ಭಾಷೆಗಳ ಸಿನಿಮಾಗಳ ಜೊತೆ ಪೈಪೋಟಿ ನೀಡಬೇಕು ಅದರೆ ವಾರದಲ್ಲಿ ತರೆಕಾಣುವ ನಮ್ಮ ಕನ್ನಡ ಚಿತ್ರಗಳೇ ನಮ್ಮ ಭಾಷೆ ಚಿತ್ರಗಳ ಜೊತೆ ಸೆಣಸಾಡುವಂತೆ ರೂಪುಗೊಳ್ಳುತ್ತಿದೆ.

ಈ ವಾರ 5 ಕನ್ನಡದ ಬಹುನಿರೀಕ್ಷಿತ ಚಿತ್ರಗಳು ರಾಜ್ಯಾದಂತ ಭರ್ಜರಿಯಾಗಿ ಬಿಡುಗಡೆಗೊಳ್ಳುತ್ತಿದೆ. ವಿನಯಾ ಬಾಲಾಜಿ ನಿರ್ದೇಶಿಸಿರುವ ನನ್ನ ಪ್ರಕಾರ' ಚಿತ್ರ ಸಂಪೂರ್ಣವಾಗಿ ಸಸ್ಪೆನ್ಸ್, ಥ್ರೀಲರ್ ಚಿತ್ರವಾಗಿದೆ. ಸಿನಿಮಾದ ಮೂಲ ಉದ್ದೇಶ ನಾವು ಮಾಡಿದ ಕರ್ಮ ನಮ್ಮನ್ನು ಕಾಡಲಿದೆ ಎಂಬುದನ್ನು ವಿನಯ್ ಅವರು ಈ ಚಿತ್ರದ ಮೂಲಕ ಹೇಳಲು ಹೊರಟ್ಟಿದ್ದಾರೆ ಎನ್ನಬಹುದು. ಮುಖ್ಯಭೂಮಿಕೆಯಲ್ಲಿ ಪ್ರಿಯಾಮಣಿ, ಕಿಶೋರ್, ಮಯೂರಿ, ನಿರಂಜನ್ ದೇಶ್‍ಪಾಂಡೆ, ಗಿರೀಜಾ ಲೋಕೇಶ್, ಪ್ರಮೋದ್ ಶೆಟ್ಟಿ ಮತ್ತು ಆರ್ಜುನ ರಾಜ್ ನಟಿಸಿದ್ದಾರೆ.

ಈ ಚಿತ್ರಕ್ಕೆ ಗುರುರಾಜ್ ಅವರು ಬಂಡವಾಳ ಹೂಡಿದ್ದಾರೆ. ಜಗ್ಗೇಶ್ ಅವರ ಪುತ್ರ ಗುರುರಾಜ್ ನಾಯಕನಾಗಿ ನಟಿಸಿರುವವಿಷ್ಣು ಸರ್ಕಲ್’ ಚಿತ್ರ ಇದೇ ಶುಕ್ರವಾರ ಬಿಡುಗಡೆಗೊಳ್ಳುತ್ತಿದೆ. ಮತ್ತೊಂದೆಡೆ ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸಿರುವ ಚೊಚ್ಚಲ ಸಿನಿಮಾ ರಾಂಧವ' ಕೂಡ ಚಿತ್ರಮಂದಿರಕ್ಕೆ ವಿಶೇಷವಾಗಿ ಲಗ್ಗೆ ಇಡುತ್ತಿದೆ. ಪ್ರೇಕ್ಷಕರಿಗೆ ಸಸ್ಪೆನ್ಸ್ ಮೂಲಕ ಜೀವನದ ಒಂದು ಘಟನೆಯನ್ನು ತಿಳಿಸಲು ಹೊರಟಿದೆವಿಜಯರಥ’ ಚಿತ್ರ. ಕಡೆಯದಾಗಿ `ಕಲ್ಪನ ವಿಲಾಸಿ’ ಎಂಬ ಚಿತ್ರವು ಪಾಳು ಬಂಗಲೆಯ ಸುತ್ತ ಹುಟ್ಟಿಕೊಂಡಿರುವ, ಒಬ್ಬಳು ರಾಣಿಯ ಕಥೆಯಾಗಿದೆ. ಈ ಸಿನಿಮಾ ಪ್ರೇಕ್ಷಕರ ಎದರು ಹಾರರ್, ಥ್ರೀಲರ್ ಜಾನರ್‍ನಲ್ಲಿ ಮೂಡಿಬರಲಿದೆ. ಒಟ್ಟಿನಲ್ಲಿ ಕನ್ನಡ ಚಿತ್ರ ರಸಿಕರನ್ನು ಮನರಂಜಿಸಲು ಈ 5 ಚಿತ್ರಗಳು ಏಕಕಾಲಕ್ಕೆ ಭರ್ಜರಿಯಾಗಿ ಎಂಟ್ರಿ ಕೊಡಲು ಸಿದ್ಧವಾಗಿದೆ ಎಂದು ಹೇಳಬಹುದು.

LEAVE A REPLY

Please enter your comment!
Please enter your name here