ಅಕಾಲಿಕ ಮರಣ ಹೊಂದಿದ ಚಂದನವನದ ತಾರೆಯರು !

0
472

ಒಮ್ಮೆ ಕನ್ನಡ ಸಿನಿರಂಗದ ತಾರೆಯರನ್ನು ನೆನೆಸಿಕೊಂಡರೆ ದಶಕಗಳ ಕಾಲ ಸಿನಿಮಾ ರಂಗವನ್ನು ಆಳಿದ ಸುಂದರ ಮುಖದ ತಾರೆಯರು ಭಾರತಾದ್ಯಂತ ಮಿಂಚಿ ಮರೆಯಾಗಿದ್ದಾರೆ. ಕೆಲವು ನಟರು ಅಪಘಾತದಲ್ಲಿ ಸಾವನಪ್ಪಿದರೇ, ಕೆಲವು ನಟಿಮಣಿಯರು ಅತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಇಹ ಲೋಕ ತ್ಯಜಿಸಿದ್ದಾರೆ. ಅದು ಆತ್ಮಹತ್ಯೆಯೋ ಅಥವಾ ಕಿರುಕುಳದಿಂದ ಸಾವನಪ್ಪಿದ್ದಾರೊ ಅದು ನಿಗೂಢವಾಗಿಯೆ ಇದೆ.. ಹೀಗೆ ಅಕಾಲಿಕ ಮರಣ ಹೊಂದಿದ ತಾರೆಯರ ಪಟ್ಟಿಯನ್ನು ತಿಳಿದುಕೊಳ್ಳಲು ಮುಂದೇ ಓದಿ.

 

 

ಚಂದನವನದ ಮಿನುಗುತಾರೆ ಎಂದರೆ ಕಲ್ಪನಾ, ಇವರನ್ನು ಅಭಿಮಾನಿಗಳ ನೆಚ್ಚಿನ ನಟಿ ಮತ್ತು ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿದ ಕನ್ನಡದ ಶ್ರೇಷ್ಠ ನಟಿಯೆಂದು ಗುರುತಿಸಲಾಗಿದೆ. ಕನ್ನಡದ ಕಣ್ಮಣಿ ಡಾ.ರಾಜ್ ಕುಮಾರ್ ಅವರ ಜೊತೆ ಹಲವು ಚಿತ್ರದಲ್ಲಿ ನಟಿಸಿದ ಅವರು, ಕನ್ನಡ ಜೊತೆಗೆ ತಮಿಳು, ತೆಲುಗು, ತುಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿ ಯಶಸ್ವಿಯಾಗಿರುವ ಹೆಗ್ಗಳಿಕೆ ಕಲ್ಪನಾ ಅವರಿಗೆ ಸೇರುತ್ತದೆ. ಖಿನ್ನತೆಯಿಂದ ನರಳುತ್ತಿದ್ದ ಈ ಮಿನುಗುತಾರೆ 1979 ಮೇ 12 ರಂದು (35 ವಯಸ್ಸು) ಬೆಳಗಾವಿಯ ಸಂಕೇಶ್ವರ ಹತ್ತಿರದ ಐಬಿಯಲ್ಲಿ 56 ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡರು !

 

 

ಕನ್ನಡದ ಮುದ್ದು ಮುಖದ ಚೆಲುವೆ ಎಂದರೆ ನಟಿ ಮಂಜುಳಾ ರೋಮ್ಯಾಂಟಿಕ್ ಮತ್ತು ಬಜಾರಿ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಇವರು ಕನ್ನಡ ಸೇರಿದಂತೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನೂರಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. 70 ಮತ್ತು 80 ದಶಕದಲ್ಲಿ ಕನ್ನಡ ಚಲನಚಿತ್ರರಂಗದ ಯಶಸ್ವಿ ಮತ್ತು ಪ್ರಮುಖ ನಟಿಯಾಗಿದ್ದ ಕುಮಾರಿ ಮಂಜುಳಾ 1986 ಸೆಪ್ಟೆಂಬರ್ 12 ರಂದು (31 ವಯಸ್ಸು) ಗ್ಯಾಸ್ ಸಿಲಿಂಡರ್ ಸ್ಪೋಟದಲ್ಲಿ ನಿಧನರಾಗುತ್ತಾರೆ.

 

 

ಕನ್ನಡ ಚಿತ್ರರಂಗದ ಮರೆಯಲಾರದ ಮಾಣಿಕ್ಯ ಎಂದರೆ ಶಂಕರ್ ನಾಗ್, ಕನ್ನಡ ಭಾಷೆ ಮತ್ತು ಚಿತ್ರರಂಗಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡ ಇವರು ಅಲ್ಪ ಸಮಯದಲ್ಲೇ ಕನ್ನಡಿಗರ ಮನ ಗೆದ್ದು, ಚಿತ್ರರಸಿಕರ ಮನಸ್ಸಿನಲ್ಲಿ ಅಚ್ಚೆಯಾಗಿ ಉಳಿದುಕೊಂಡಿರುವ ಸಾಂಗ್ಲಿಯಾನ, ಅಭಿಮಾನಿಗಳ ವಜ್ರಮುಷ್ಠಿ ಎಂದೇ ಹೇಳಬಹುದು.. ಕನ್ನಡ ಚಿತ್ರರಂಗದ ತಂತ್ರಜ್ಞರು, ನಿರ್ದೇಶಕರು ಈಗಲೂ ಸಹ ಶಂಕ್ರಣ್ಣ ಅವರನ್ನು ನೆನೆಯುತ್ತಾರೆ. 1990 ಸೆಪ್ಟೆಂಬರ್ 30 ರಂದು ಕನ್ನಡಿಗರಿಗೆ ಸಹಿಸಿಕೊಳ್ಳಲಾರದ ದಿನ, ತನ್ನ ಪತ್ನಿಯೊಂದಿಗೆ ದಾವಣಗೆರೆ ಹತ್ತಿರ ಕಾರಿನಲ್ಲಿ ಚಲಿಸುವಾಗ ಕಾರು ಅಪಘಾತದಲ್ಲಿ ನಿಧನರಾಗುತ್ತಾರೆ (35 ವಯಸ್ಸು).

 

 

ಕನ್ನಡ ಚಿತ್ರರಂಗ ಕಂಡ ಸುಂದರ ನಟ ಎಂದರೆ ಸುನೀಲ್, ಕನ್ನಡದ ಚಾಕ್ಲೆಟ್ ಹೀರೊ ಎಂದೇ ಖ್ಯಾತರಾಗಿದ್ದ ಇವರು ವೃತ್ತಿ ಜೀವನವನ್ನು ಪ್ರಾರಂಭಿಸಿದ ಕೆಲವೇ ಕೆಲವು ವರ್ಷದಲ್ಲಿ ಕರುನಾಡ ಮನೆ ಮಾತಾಗಿದ್ದರು ಈ ಮುದ್ದು ಮುಖದ ಪೋರ. ನಟಿಸಿದ್ದು ಬೆರಳೆಣಿಕೆ ಸಿನಿಮಾವಷ್ಟೆ ಆದರೆ ಸಂಪಾಧಿಸಿದ್ದು ಲಕ್ಷಾಂತರ ಅಭಿಮಾನಿಗಳನ್ನು. ಚಿತ್ರೀಕರಣವನ್ನು ಮುಗಿಸಿ ನಿರ್ಮಾಪಕ ಸಚಿನ್ ಮಲ್ಯ ಮತ್ತು ಮಾಲಶ್ರೀ ಅವರ ಜೊತೆ ಬೆಂಗಳೂರಿಗೆ ಹಿಂತಿರುಗಿ ಬರುವ ವೇಳೆ 1994 ಜುಲೈ 24 ರಂದು ಬಾಗಲಕೋಟೆಯ ಬಳಿ ಕಾರು ಅಪಘಾತದಲ್ಲಿ ಸಾವನಪ್ಪುತ್ತಾರೆ (ವಯಸ್ಸು 30)

 

 

ಮೂಲತಃ ಆಂಧ್ರ ಪ್ರದೇಶದವರಾದ ಸಿಲ್ಕ್ ಸ್ಮಿತಾ ಅವರು 1979ರಲ್ಲಿ ವಂಡಿಚಕ್ಕರಂ ಎಂಬ ತಮಿಳು ಚಿತ್ರದಲ್ಲಿ ಸಿಲ್ಕ್ ಎಂಬ ಪಾತ್ರವನ್ನು ನಿರ್ವಹಿಸಿ ಎಲ್ಲರ ಗಮನ ಸೆಳೆದರು. 80ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದು, 17 ವರ್ಷಗಳ ವೃತ್ತಿ ಜೀವನದಲ್ಲಿ ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳ ಚಿತ್ರರಂಗದಲ್ಲಿ 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಖಿನ್ನತೆಯಿಂದ ಬಳಲುತ್ತಿದ್ದ ಸ್ಮಿತಾ 1996 ಸೆಪ್ಟೆಂಬರ್ 23 ರಂದು ಚೈನ್ನೈನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಾರೆ.(ವಯಸ್ಸು 35)

 

 

ನಿವೇದಿತಾ ಜೈನ್, ಅಭಿನಯಿಸಿದ್ದು, ಕೇವಲ ಏಳು ಚಿತ್ರಗಳಲ್ಲಿ, ಆದರೆ ಅವರ ಸುಂದರವಾದ ಮುಖದಿಂದ ಆಗಿನ ಕಾಲದ ಯುವಕರ ನಿದ್ದೆ ಗೆಡಿಸಿದ್ದರು ಶಿವರಾಂಜಿನಿ ಚಿತ್ರದ ಮೂಲಕ ನಟನೆಗೆ ಪಾದರ್ಪಣೆ ಮಾಡಿದ ಅವರು 1994 ರಲ್ಲಿ ಮಿಸ್ ಬೆಂಗಳೂರು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ವಿಪರ್ಯಾಸವೆಂದರೆ 1998 ಮೇ 17 ರಂದು ತಮ್ಮ ಮನೆಯ ಎರಡನೇ ಮಹಡಿಯಿಂದ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾದರು. ಸುಮಾರು 25 ದಿನಗಳವರೆಗೆ ಕೋಮಾದಲ್ಲಿದ್ದ ನಂತರ ಕೊನೆಯುಸಿರೆಳೆದರು. ( ವಯಸ್ಸು 19)

 

 

ಭಾರತ ಚಿತ್ರರಂಗ ಕಂಡ ಸೌಂದರ್ಯವತಿ ಮತ್ತು ಪ್ರತಿಭಾವಂತ ನಟಿ ಎಂದರೆ ಸೌಂದರ್ಯ. ಕನ್ನಡ ಸೇರಿದಂತೆ ತೆಲುಗು,ತಮಿಳು,ಹಿಂದಿ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ 90ರ ದಶಕದ ಟಾಪ್ ನಟಿಯಾಗಿ 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. 2004 ಏಪ್ರಿಲ್ 17 ರಂದು ತಮ್ಮ ಸಹೋದರನ ಜೊತೆ ಬೆಂಗಳೂರು ಹತ್ತಿರ ವಿಮಾನ ಅಪಘಾತದಲ್ಲಿ ಸಾವನಪ್ಪಿದರು (32 ವಯಸ್ಸು)

 

 

ನಿನಗೋಸ್ಕರ, ಲವಲವಿಕೆ, ನಲ್ಲ, ಸ್ಪರ್ಶ ಚಿತ್ರಗಳ ಮೂಲಕ ಗುರುತಿಸಿ ಕೊಂಡಿದ್ದ ನವೀನ್ ಮಯೂರ್ 2010 ಅಕ್ಟೋಬರ್ 3 ರಂದು ಜಾಂಡೀಸ್ ಕಾಯಿಲೆಯಿಂದ  ನಿಧನರಾಗುತ್ತಾರೆ!

ಈ ಸಿನಿತಾರೆಯರ ಅಕಾಲಿಕ ಮರಣವನ್ನು ಚಿತ್ರರಂಗದವರು ಮತ್ತು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ.

-ಸುಮನ್ ಪಿ ಶರ್ಮ

LEAVE A REPLY

Please enter your comment!
Please enter your name here