ಸ್ಯಾಂಡಲ್‍ವುಡ್ `ಮೋಹಕ ತಾರೆ’ಗೆ ಕೂಡಿ ಬಂದಿದೆ ಕಂಕಣ ಭಾಗ್ಯ.!

0
137

ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆಯಾಗಿ ಮಿಂಚಿದ್ದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ’ಗೆ ಇದೀಗ ಕಂಕಣ ಭಾಗ್ಯ ಕೂಡಿ ಬಂದಿದೆ. ಆಭಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಾಣೆ ಮಾಡಿದ್ದ ರಮ್ಯಾ, ತಮ್ಮ ಮೊದಲ ಸಿನಿಮಾದಲ್ಲೆ ಕನ್ನಡಿಗರ ಮನ ಗೆಲ್ಲುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದರು. ಪ್ರತಿಯೊಂದು ಸಿನಿಮಾದಲ್ಲೂ ವಿನೂತನವಾಗಿ ನಟಿಸುವ ಮೂಲಕ ಕನ್ನಡಿಗರಿಗೆ ಹೆಚ್ಚು ಹತ್ತಿರವಾರೂ. ಆದಾದ ಬಳಿಕ ಸಿನಿಮಾದಿಂದ ಧಿಡೀರ್ ದೂರವಾದ ರಮ್ಯಾ ರಾಜಕೀಯದತ್ತ ಮುಖ ಮಾಡಿದರು. 2013ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮಂಡ್ಯ ಸಂಸದೆಯಾಗಿ ಕಾರ್ಯ ನಿರ್ವಹಸಿದರು. ಬಳಿಕ 2014ರ ಲೋಕಸಭಾ ಚುನಾವಣೆಯಲ್ಲಿ ಸೋತು ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆಯಾಗಿ ಕೆಲಸ ಮಾಡಿದರು.

ಕಳೆದ ಒಂದು ವರ್ಷದಿಂದ ಎಲ್ಲೂ ಸದ್ದು ಮಾಡದ ರಮ್ಯಾ, ಇದೀಗ ತಮ್ಮ ಬಹುಕಾಲದ ಸ್ನೇಹಿತ ರಫೇಲ್ ಅವರನ್ನು ಮದುವೆಯಾಗಲಿದ್ದಾರೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಇಗ ಬಿಸಿ ಬಿಸಿ ಚರ್ಚೆಯಾಗುತ್ತಿದೆ ಎನ್ನಬಹುದು. ರಮ್ಯಾ ಅವರ ಅಭಿಮಾನಿಗಳಿಗೂ ಇದೊಂದು ರೀತಿ ಶಾಕಿಂಗ್ ನ್ಯೂಸ್ ಎಂದೇ ಹೇಳಬಹುದು. ತಮ್ಮ ಗೆಳೆಯ ರಫೆಲ್ ಜೊತೆಗೆ ದುಬೈನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here