ಪಬ್ಲಿಕ್ ಎಂಟರ್ಟೈಮೆಂಟ್ 2005 ಕಾಯ್ದೆಗೆ ಉಲ್ಲಂಘಿಸಿದ ಸುಮಾರು 107 ಪಬ್ಗಳನ್ನು ಪರಾವನೆಗೆ ರದ್ದುಗೊಳಿಸಿರುವುದಾಗಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೇಲ್ ತಿಳಿಸಿದ್ದರು. ಇನ್ನು ಪೋಲೀಸರ ಕಣ್ಣು ತಪ್ಪಿಸಿ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದರೆ,ಕಾನೂನಿನ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸಂದೀಪ್ ಪಾಟೇಲ್ ಎಚ್ಚರಿಕೆಯನ್ನು ನೀಡಿದ್ದರು.
ನಿಯಮ ಉಲ್ಲಂಘಿಸಿ ಮಧ್ಯರಾತ್ರಿಯವರೆಗೂ ಪಬ್ ನಡೆಸುತ್ತಿದ್ದ ರೋಹನ್ ಪೊಲೀಸರ ವಶಕ್ಕೆ !

ಬೆಂಗಳೂರಿನಲ್ಲಿ ನಿಯಮ ಬಾಹಿರವಾಗಿ ನಡೆಸುತ್ತಿದ್ದ ಪಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಪಬ್ ಮಾಲೀಕರಾದ ಸ್ಯಾಂಡಲ್ ವುಡ್ ನಟ ರೋಹನ್ ರನ್ನು ವಶಕ್ಕೆ ಪಡೆದಿದ್ದಾರೆ.
ನಿಯಮ ಮೀರಿ ಬೆಳಗ್ಗಿನ ಜಾವ 3 ಗಂಟೆಯವರೆಗೂ ಪಬ್ ಮತ್ತು ಡಿಸ್ಕೋಥೆಕ್ ನಡೆಸುತ್ತಿರುವ ಹಿನ್ನೆಲೆಯಲ್ಲಿ ಲೀ ಮೆರಿಡಿಯನ್ ಹೋಟೆಲ್ ನಲ್ಲಿ ನಟ ರೋಹನ್ ಒಡೆತನದ ಶುಗರ್ ಫ್ಯಾಕ್ಟರಿ ಪಬ್ ಮೇಲೆ ದಾಳಿ ನಡೆದಿದೆ.
ಪರವಾನಗಿ 5 ತಿಂಗಳ ಹಿಂದೆ ಮುಗಿದ್ದರೂ ಇನ್ನೂ ನವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಬ್ ಮಾಲೀಕ ನಟ ರೋಹನ್ ಮತ್ತು ಮ್ಯಾನೇಜರ್ ಶಶಿಕುಮಾರ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.