ನಡುರಸ್ತೆಯಲ್ಲಿ ಪತ್ನಿಯನ್ನು ಥಳಿಸಿ ತವರಿಗೆ ಅಟ್ಟಿದ ಸ್ಯಾಂಡಲ್ ವುಡ್ ನಟ…

0
1444

ಚಂದನವನದಲ್ಲಿ ಜಾಸ್ತಿ ಆಗ್ತಾ ಇವೆ ಈ ರೀತಿಯ ಕೇಸುಗಳು.ಸಪ್ತಪದಿ ತುಳಿದ ಧರ್ಮ ಪತ್ನಿಯ ಮೇಲೆ ನಟ ಪೌರುಷವನ್ನು ತೋರಿಸಿದ್ದಾರೆ. ನಡು ರಸ್ತೆಯಲ್ಲಿ ಪತ್ನಿಯನ್ನು ಥಳಿಸಿ ತವರಿಗೆ ಅಟ್ಟಿದ್ದಾರೆ ಈ ನಟ. ಯಾರು ಆ ರಿಯಲ್ ಖಳನಾಯಕ???
ಕಡ್ಡಿಪುಡಿ, ಹುಲಿರಾಯ, ಕಪಟ ನಾಯಕ ಸೂತ್ರಧಾರಿ ಸಿನಿಮಾದ ನಟ ಬಾಲು ನಾಗೇಂದ್ರ ಈ ರೀತಿ ಹೆಂಡತಿ ಜೊತೆ ಕಿರಿಕ್ ಮಾಡಿಕೊಂಡಿರುವ ವ್ಯಕ್ತಿ.ಹೆಂಡತಿ ತವರು ಮನೆಗ ಹಣ ನೀಡುತ್ತಿರುವುದನ್ನು ಸಹಿಸೋಕೆ ಆಗದೆ ಇಷ್ಟು ಕೀಳಾಗಿ ನಡೆದುಕೊಂಡಿದ್ದಾನೆ ಈ ನಟ. ಈ ಮಹಾಶಯ ಪ್ರತಿದಿನ ಹೆಂಡತಿಯನ್ನು ಕೆಲಸಕ್ಕೆ ಬಿಡುವಾಗ ರಸ್ತೆಯುದ್ದಕ್ಕೂ ಥಳಿಸಿಕೊಂಡು ಹೋಗ್ತಾ ಇದ್ದನಂತೆ, ಸದ್ಯ ಹೆಂಡ್ತಿ ಮಗುವನ್ನು ಹೊಡೆದು ತವರಿಗೆ ಅಟ್ಟಿದ್ದಕ್ಕೆ ಈ ನಟನಾ ವಿರುದ್ಧ ಬಸವನಗುಡಿ ಮಹಿಳಾ ಠಾಣೆಗೆ ನೊಂದ ಪತ್ನಿ ದೂರನ್ನು ಕೂಡ ಕೊಟ್ಟಿದ್ದಾರೆ.ಈ ನಟನ ವಿರುದ್ಧ ಸದ್ಯ ಐಪಿಸಿ ಸೆಕ್ಷನ್ 498 ‘ಎ’ ಅಡಿ ಇದೀಗ ಕೇಸ್ ದಾಖಲಾಗಿದೆ.

ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಈ ನಟ 2008 ರಲ್ಲಿ ರೇಡಿಯೋ ಜಾಕಿ ಆಗಿದ್ದಂತಹ ಸಂದರ್ಭದಲ್ಲಿ ಅವನ ಹಾಗೆಯೇ ರೇಡಿಯೋ ಜಾಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿ ಮೇಲೆ ಪ್ರೀತಿಯಾಗಿ ಮನೆಯವರ ಒಪ್ಪಿಗೆ ಮೇರೆಗೆ 2013ರಲ್ಲಿ ಇವರಿಬ್ಬರೂ ಮದುವೆಯಾಗ್ತಾರೆ. ಅಂದಿನಿಂದಲು ಈತ ಕಿರುಕುಳವನ್ನು ಕೊಡುತ್ತಿದ್ದಾನೆ ಎಂದು ದೂರಿನಲ್ಲಿ ನೊಂದ ಮಹಿಳೆ ತಿಳಿಸಿದ್ದಾರೆ. ನಾನು ಕೆಲಸದಲ್ಲಿ ದುಡಿದಂತಹ ಹಣದಲ್ಲಿ 8,000ರೂ ಗಳನ್ನು ನನ್ನ ತವರು ಮನೆಗೆ ಪ್ರತಿ ತಿಂಗಳು ನೀಡುತ್ತಿದ್ದೆ, ಅದನ್ನು ನನ್ನ ಪತಿ ಸಹಿಸುತ್ತಿರಲಿಲ್ಲ , ಹಣವನ್ನು ನೀಡಬೇಡ ಎಂದು ನನ್ನ ಬಳಿ ಸುಮಾರು ಬಾರಿ ಜಗಳವಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈತ ಯಾವುದೇ ಕೆಲಸಕ್ಕೂ ಹೋಗುತ್ತಿರಲಿಲ್ಲ ನನ್ನನ್ನು ಕೆಲಸಕ್ಕೆ ಬಿಡಲು ಬರುವಾಗ ಪ್ರತಿನಿತ್ಯ ರಸ್ತೆಯಲ್ಲಿ ನನ್ನನ್ನು ಥಳಿಸುತ್ತಿದ್ದ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನನಗೆ ಕೆಲಸದ ನಡುವೆ ವಿದ್ಯಾಭ್ಯಾಸಕ್ಕೆ ಟೈಮ್ ಸಿಗುತ್ತಿಲ್ಲ ಆಗಾಗಿ ಕೆಲಸವನ್ನು ಬಿಡುತ್ತಾನೆ ಎಂದು ಹೇಳಿದಾಗಲು ಸಹ ಆತ ನನಗೆ ಹಲ್ಲೆಯನ್ನು ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅದಲ್ಲದೆ ಈತ ನನ್ನಿಂದ ಸುಮಾರು 1.5 ಲಕ್ಷ ಹಣವನ್ನು ಪಡೆದಿದ್ದಾನೆ , ಆ ಹಣವನ್ನು ಕೇಳಿದಂತಹ ಸಮಯದಲ್ಲೂ ಕೂಡ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದೀಗ ನನ್ನನ್ನು ಹಾಗೂ ನನ್ನ ಮಗು ಇಬ್ಬರ ಮೇಲೂ ಹಲ್ಲೆ ಮಾಡಿ ತವರು ಮನೆಗೆ ಹೋಗುವಂತೆ ಹೇಳಿ ಬೈದು, ಹೊಡೆದು ಮನೆಯಿಂದ ಹೊರಗೆ ಹಾಕಿದ್ದಾರೆ. ಸದ್ಯ ನಾನು ಹಾಗೂ ನನ್ನ ಮಗು ತವರು ಮನೆಯಲ್ಲಿ ಇದ್ದೇವೆ , ದಯಮಾಡಿ ಇವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರ ನೀಡಿದ್ದಾರೆ.
ಈ ವಿಷಯವಾಗಿ ಈಗಾಗಲೇ ಎರಡು ಮೂರು ಬಾರಿ ಈ ನಟನನ್ನು ಮಹಿಳಾ ಪೊಲೀಸ್ ಠಾಣೆಯವರು ವಿಚಾರಣೆಯನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here