ಡಿಜೆ, ಕೆಜೆ ಹಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಸಂಪತ್ ಗೆ ಸಿಸಿಬಿ ಡ್ರಿಲ್

0
54

ಬೆಂಗಳೂರು: ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದ ಪ್ರಮುಖ ಆರೋಪಿ (A51) ಸಂಪತ್ ರಾಜ್ ನನ್ನು ಸಿಸಿಬಿ ಡ್ರಿಲ್ ಮಾಡುತ್ತಿದೆ. ಡಿಜೆ ಹಳ್ಳಿ ಕೆಜೆ ಹಳ್ಳಿಯಲ್ಲಿ ನಡೆದ ಪ್ರಕರಣ ಕೋಮಿನ ನಡುವೆ ನಡೆದ ಗಲಭೆ ಅಲ್ಲ, ಅದು ರಾಜಕೀಯ ಗಲಭೆ ಎಂಬ ವಿಚಾರ ಡಿಜೆ, ಕೆಜೆ ಹಳ್ಳಿ ಗಲ್ಲಿ ಗಲ್ಲಿಯಲ್ಲೂ ಹೊಗೆಯಾಡುತ್ತಿತ್ತು. ರಾಜಕೀಯ ಭವಿಷ್ಯಕ್ಕಾಗಿ ಹಾಲಿ‌ ಶಾಸಕ ಅಖಂಡ ಶ್ರೀನಿವಾಸ್ ಮನೆಗೂ ಕೊಳ್ಳಿ ಇಟ್ಟಲ್ಲಿ ಸಂಪತ್ ರಾಜ್ ಕೈವಾಡ ಇದೆ ಎಂಬ ಸುದ್ದಿ ಯಾವಾಗ ಪೊಲೀಸರ ಕಿವಿಗೆ ಬಿತ್ತೋ ಆಗಲೇ ಮಾಜಿ ಮೇಯರ್ ಸಂಪತ್ ರಾಜ್ ಮೇಲೆ (ಸಿಸಿಬಿ) ಸಿಟಿ ಕ್ರೈಂ ಬ್ರ್ಯಾಂಚ್ ಪೊಲೀಸರು‌ ಒಂದು ಕಣ್ಣಿಟ್ಟಿದ್ದರು. ಜೊತೆಗೆ ಗಲಭೆ ಸಂದರ್ಭದಲ್ಲಿ ಸಂಪತ್ ಅವರ ನಡವಳಿ ಮೇಲೂ ಪೊಲೀಸ್ ಇಲಾಖೆ ಗಮನ ಇಟ್ಟಿದ್ದು, ಗಲಭೆಯ ಪ್ರಮುಖ ಆರೋಪಿ‌ ಎಂದು ಗುರುತಿಸಿತ್ತು.

ಆದರೆ ಕೋವಿಡ್ 19 ಕಾರಣ ನೀಡಿದ್ದ ಸಂಪತ್ ರಾಜ್‌ 22 ದಿನ ನಾಪತ್ತೆಯಾಗಿದ್ದರು. ಮಾಜಿ ಮೇಯರ್ ಸಂಪತ್ ರಾಜ್ ನನ್ನು ಬಂಧಿಸದ ಕಾರಣ ಪೊಲೀಸ್ ಕಾರ್ಯದ ವಿರುದ್ಧ ಹೈಕೋರ್ಟ್ ಅಸಮಧಾನ ವ್ಯಕ್ತಪಡಿಸಿತ್ತು. ಇನ್ನು ಪೊಲೀಸರ ಮೂಲದ‌ ಮಾಹಿತಿ ಪ್ರಕಾರ, ಮಾಜಿ ಮೇಯರ್‌ ಸಂಪತ್, ತಮಿಳು ನಾಡು, ಕೇರಳದ ಕೆಲ ಊರುಗಳಲ್ಲಿ ತಲೆ ಮರೆಸಿಕೊಂಡಿದ್ದರಂತೆ. ಹೀಗೆ ತಲೆಮರೆಸಿಕೊಂಡಿದ್ದವರು ಸೋಮವಾರ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನ ಬೆನ್ಸನ್ ಟೌನ್ ಬಳಿಯ ಸ್ನೇಹಿತನ ನಿವಾಸಕ್ಕೆ ಬರುವ ಸಂದರ್ಭದಲ್ಲಿ ಮಾಹಿತಿ ಕಲೆ ಹಾಕಿದ ಪೊಲೀಸರು ಸಂಪತ್ ರಾಜ್ ನನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇಷ್ಟು ದಿನ ಕಣ್ಮರೆಯಾಗಿದ್ದು ಯಾಕೆ..? ಗಲಭೆ ನಂತರ ಫೋನ್ ಸ್ವಿಚ್ ಹಾಫ್ ಮಾಡಿದ್ದು ಯಾಕೆ..? ಎಂಬ ಕುರಿತು ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆ ನಂತರ ಅನೇಕ ವಿಚಾರಗಳು ಹೊರ ಬೀಳಲಿವೆ ಎನ್ನಲಾಗಿದೆ.

“ತಪ್ಪಿತಸ್ಥರಿಂದಲೇ ನಷ್ಟ ಭರಿಸಿ”

ಸಂಪತ್ ಬಂಧನಕ್ಕೆ ಸಂತಸ ವ್ಯಕ್ತಪಡಿಸಿದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ನನಗಾದ ಅನ್ಯಾಯ ಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ ಎಂದರು. ಪ್ರಕರಣದಲ್ಲಿ ಭಾಗಿಯಾದ ಮೂರು ಜನರಿಗೂ ಶಿಕ್ಷೆ ಆಗಲೇ ಬೇಕು. ತಪ್ಪಿತಸ್ಥರಿಂದಲೇ ನಷ್ಟ ವಸೂಲಿ ಮಾಡಬೇಕು ಎಂದು ತಿಳಿಸಿದರು.

ವಿವಾದಿತ ಪೋಸ್ಟ್ ಒಂದಕ್ಕೆ ಸಂಬಂದಿಸಿ ಆಗಸ್ಟ್ 11 ಡಿಜೆ, ಕೆಜೆ ಹಳ್ಳಿಯಲ್ಲಿ ಗಲಭೆ ನಡೆದಿತ್ತು. ಒಂದು ಗುಂಪು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಹಾಗೂ ಅವರ ಸಹೋದರಿಯ ಮನೆ ಧ್ವಂಸ ಮಾಡಿತ್ತು. ಈ ಪ್ರಕರಣ ಸಂಬಂಧಿಸಿ 421 ಮಂದಿಯನ್ನು ಪೊಲೀಸರು‌ ಬಂಧಿಸಿದ್ದರು. ಇದರಲ್ಲಿ ಪ್ರಮುಖ ಆರೋಪಿ ಸಂಪತ್ ರಾಜ್ ಎಂದು ಗುರುತಿಸಲಾಗಿತ್ತು.

ಮಕ್ಕಳ ಜ್ಞಾಪಕ ಶಕ್ತಿ, ಏಕಾಗ್ರತೆ, ಚುರುಕುತನ ಮತ್ತು ಕೌಶಲ್ಯ ಅಭಿವೃದ್ಧಿ ವೃದ್ಧಿಸಲು ಆಯುರ್ವೇದದ ಉತ್ಪನ್ನವಾದ ‘ಬ್ರಹ್ಮ ಶಂಕರ ‘ ಪರಿಹಾರ ಒದಗಿಸುತ್ತದೆ . ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ನುರಿತ ಮತ್ತು ಅನುಭವಿ ಆಯುರ್ವೇದದ ತಜ್ಞ ವೈದ್ಯರ ಸಹಾಯದಿಂದ ನಿರಂತರ ಸಂಶೋಧನೆಗೆ ಪ್ರೋತ್ಸಾಹ ನೀಡಿದ ಪರಿಣಾಮವಾಗಿ ನೈಸರ್ಗಿಕವಾಗಿ ಬ್ರಹ್ಮ ಶಂಕರ ರೂಪುಗೊಂಡಿದೆ.

ಬ್ರಹ್ಮ ಶಂಕರದಲ್ಲಿ ಪ್ರಧಾನವಾಗಿ ಬ್ರಾಹ್ಮೀ ಎಲೆ, ಮಂಡೂಕ ಪರಿಣಿ,ಶಂಖ ಪುಷ್ಟಿ, ಅಶ್ವಗಂಧ,ಮಾಲ್ಕಂಗನಿ,ಜಟಮಾನಸಿ,ತಗರ್ ಅಥವಾ ಸುಗಂಧ ಬಾಲಾ, ಅಮೃತ ಬಳ್ಳಿ,ಸಂಜೆ,ವೀಟ್ ಜರ್ಮ್ ಅಥವಾ ಗೋಧಿ ಭ್ರೂಣವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಸಂಪೂರ್ಣ ನೈಸರ್ಗಿಕವಾಗಿ ಬ್ರಹ್ಮಶಂಕರದಲ್ಲಿ ಸೇರಿಸಿರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿದೆ.ಬ್ರಾಹ್ಮೀ ಎಂದರೆ ಸರಸ್ವತಿ . ಮಕ್ಕಳು ಬ್ರಾಹ್ಮೀ ಮುಹೂರ್ತದಲ್ಲಿ ಓದಿದರೆ ಮರೆಯುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.ಮಕ್ಕಳ ದೇಹ ಬಹಳ ಸೂಕ್ಷ್ಮವಾಗಿದ್ದು ಬಹುಬೇಗ ಜ್ವರ,ಕೆಮ್ಮು,ಸೋಂಕುಗಳಿಗೆ ತುತ್ತಾಗುತ್ತಾರೆ.ಬ್ರಹ್ಮಶಂಕರ ನಿಮ್ಮ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅವರನ್ನು ಸಧೃಡ ರನ್ನಾಗಿ ಮಾಡುತ್ತದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು.

ಒಂದು ಆರೋಗ್ಯವಂತ, ಜ್ಞಾನವಂತ , ಬುದ್ಧಿವಂತ ಸಮಾಜಕ್ಕಾಗಿ ‘ಬ್ರಹ್ಮ ಶಂಕರ ‘ ನಿಮ್ಮ ಮಕ್ಕಳಿಗೆ ಅತ್ಯವಶ್ಯಕವಾಗಿದೆ

BUY NOW

LEAVE A REPLY

Please enter your comment!
Please enter your name here