ಫ್ಯಾಂಟಮ್ ಸಿನಿಮಾದಲ್ಲಿ ಕಿಚ್ಚ ಸುದೀಪ್​ಗೆ ಜೋಡಿಯಾಗಿ ಸಮಂತಾ ಅಕ್ಕಿನೇನಿ

0
244

ಕಾಲಿವುಡ್ ಮತ್ತು ಟಾಲಿವುಡ್​ನಲ್ಲಿ ಬಿಜಿಯಾಗಿರುವ ನಟಿ ಸಮಂತಾ ಸ್ಯಾಂಡಲ್​ವುಡ್​ಗೂ ಬರ್ತಾರೆ ಎಂಬ ಮಾತು ಗಾಂಧಿನಗರದಲ್ಲಿ ಆಗಾಗ ಕೇಳಿಬರುತ್ತಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಅಂದರೆ ‘ಫ್ಯಾಂಟಮ್ ಸಿನಿಮಾದಲ್ಲಿ ‘ಕಿಚ್ಚ’ ಸುದೀಪ್​ಗೆ ಜೋಡಿಯಾಗಿ ಸಮಂತಾ ಆಗಮಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ!

 

 

ನಟಿ ಸಮಂತಾ ಇಲ್ಲಿಯವರೆಗೂ ಕನ್ನಡದ ಒಂದೇ ಒಂದು ಸಿನಿಮಾದಲ್ಲಿ ನಟಿಸಿಲ್ಲ. ಇತ್ತೀಚೆಗೆ ಅವರಿಗೆ ಬಾಲಿವುಡ್​ನಿಂದಲೂ ಆಫರ್ ಬಂದರೂ ಅದನ್ನು ಅಷ್ಟೇ ನಯವಾಗಿ ತಳ್ಳಿಹಾಕಿದ್ದರು. ಈಗ ಮೊದಲ ಬಾರಿ ಕನ್ನಡಕ್ಕೆ ಅವರನ್ನು ಕರೆತರುವ ಕೆಲಸ ತೆರೆಮರೆಯಲ್ಲಿ ‘ಫ್ಯಾಂಟಮ್ ಬಳಗ ಮಾಡುತ್ತಿದೆ. ಚಿತ್ರದ ನಿರ್ವಪಕ ಜಾಕ್ ಮಂಜು, ಸಮಂತಾ ಅವರನ್ನು ಅಪ್ರೋಚ್ ಮಾಡುವ ಸಿದ್ಧತೆಯಲ್ಲಿದ್ದು, ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದರೆ ಕನ್ನಡಕ್ಕೆ ಸಮಂತಾ ಆಗಮಿಸಿದರೂ ಅಚ್ಚರಿ ಪಡಬೇಕಿಲ್ಲ.

 

 

ಈಗಾಗಲೇ ‘ರಂಗಿತರಂಗ’ ಮತ್ತು ‘ರಾಜರಥ’ ಸಿನಿಮಾ ನಿರ್ದೇಶನ ಮಾಡಿ ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಅನೂಪ್ ಭಂಡಾರಿ, ‘ಫ್ಯಾಂಟಮ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಸುದೀಪ್ ಜತೆಗೆ ‘ಬಿಲ್ಲ ರಂಗ ಭಾಷ’ ಸಿನಿಮಾ ಮಾಡುವುದಾಗಿ ಹೇಳಿ ಫಸ್ಟ್​ಲುಕ್ ಸಹ ಬಿಡುಗಡೆ ಗೊಳಿಸಿದ್ದರು ಅನೂಪ್. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ಮುಂದಕ್ಕೆ ಹೋಯಿತು.

 

 

ಅದರ ಬದಲು ಸೆಟ್ಟೇರಿದ ಸಿನಿಮಾ ‘ಫ್ಯಾಂಟಮ್. ಸದ್ಯ ‘ಫ್ಯಾಂಟಮ್ ಚಿತ್ರದ ಸ್ಕ್ರಿಪ್ಟ್ ಕೆಲಸ ಬಹುತೇಕ ಕೊನೆಯ ಹಂತದಲ್ಲಿದೆ. ಇತ್ತ ‘ಕೋಟಿಗೊಬ್ಬ 3’ ಶೂಟಿಂಗ್​ನಲ್ಲಿ ಸುದೀಪ್ ತೊಡಗಿಸಿಕೊಂಡಿದ್ದಾರೆ. ಅದು ಮುಗಿಯುತ್ತಿದ್ದಂತೆ ‘ಫ್ಯಾಂಟಮ್ ಶುರುವಾಗಲಿದೆ.

 

ಕಿಚ್ಚನ ಜತೆ ನಿರೂಪ್

ಫ್ಯಾಂಟಮ್ ಸಿನಿಮಾ ಸದ್ಯ ಚಿತ್ರೀಕರಣಪೂರ್ವ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಇನ್ನೇನು ಶೀಘ್ರದಲ್ಲೇ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ. ಸದ್ದಿಲ್ಲದೆ ತಾರಾಗಣದ ಆಯ್ಕೆ ಪ್ರಕ್ರಿಯೆಯೂ ನಡೆಯುತ್ತಿದೆ. ಇದೀಗ ಅದೇ ‘ಫ್ಯಾಂಟಮ್ ಬಳಗದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ‘ಫ್ಯಾಂಟಮ್ ಸಿನಿಮಾದಲ್ಲಿ ಸುದೀಪ್ ಜತೆಗೆ ನಿರೂಪ್ ಭಂಡಾರಿ ಸಹ ಮುಖ್ಯಭೂಮಿಕೆಯಲ್ಲಿ ಇರಲಿದ್ದಾರೆ. ಅಸಲಿಗೆ ನಿರೂಪ್ ಮಾಡಬೇಕಿದ್ದ ಪಾತ್ರವನ್ನು ಸುದೀಪ್ ಅಳಿಯ ಸಂಚಿತ್ ಸಂಜೀವ್ ನಿಭಾಯಿಸಬೇಕಿತ್ತು.

 

 

ಆದರೆ, ಅಲ್ಲಿಯೂ ಕೆಲವು ಬದಲಾವಣೆ ಮಾಡಿಕೊಳ್ಳಲು ಚಿತ್ರತಂಡ ನಿರ್ಧರಿಸಿತು. ಚೊಚ್ಚಲ ಸಿನಿಮಾದಲ್ಲಿಯೇ ಸುದೀಪ್ ಜತೆ ಸಂಚಿತ್ ನಟಿಸುವುದು ಬೇಡ, ಬದಲಿಗೆ ಸಂಚಿತ್​ಗಾಗಿಯೇ ಪ್ರತ್ಯೇಕ ಸಿನಿಮಾ ಮಾಡುವ ಬಗ್ಗೆ ತೀರ್ವನವಾಯಿತು. ಅದರಂತೆ ಸದ್ಯ ಸಂಚಿತ್ ಬದಲಿಗೆ ನಿರೂಪ್ ಆಯ್ಕೆ ಅಧಿಕೃತವಾಗಿದೆ.

LEAVE A REPLY

Please enter your comment!
Please enter your name here