ಟೈಗರ್​ ತೋರಿಸಿ ಕಿಕ್​ ಕೊಡಲಿರುವ ಸಲ್ಮಾನ್​

0
135

ಬಾಲಿವುಡ್​ನಲ್ಲಿ ಸಿರೀಸ್​ ಸಿನೆಮಾಗಳ ಸಂಖ್ಯೆ ಹೆಚ್ಚುತ್ತಿದೆ. ಹೌಸ್​ುಲ್​, ಧಮಾಲ್​, ಮಸ್ತಿ, ಗೋಲ್ಮಾಲ್​, ದಬಂಗ್​ ಹೀಗೆ ಸೀರೀಸ್​ ಸಿನೆಮಾಗಳು ತೆರೆಗೆ ಬಂದಿದ್ದು, ನಿರ್ಮಾಪಕರ ಜೇಬನ್ನು ತುಂಬಿಸಿವೆ. ಆ ಸಾಲಿಗೆ ಇದೀಗ ಬಾಲಿವುಡ್​ ಬ್ಯಾಡ್​ಬಾಯ್​ ಸಲ್ಮಾನ್​ ಖಾನ್​ ಸಿನೆಮಾಗಳು ಸೇರ್ಪಡೆಯಾಗುತ್ತಿದೆ. ಸಲ್ಮಾನ್​ ಸೂಪರ್​ ಹಿಟ್​ ಚಿತ್ರಗಳಾದ ಏಕ್​ ಥಾ ಟೈಗರ್​ 3ನೇ ಹಾಗೂ ತೆಲುಗು ರಿಮೇಕ್​ ಚಿತ್ರ ಕಿಕ್​ನ 2ನೇ ಸರಣಿ ಚಿತ್ರ ನಿರ್ಮಾಣಕ್ಕೆ ಸಿದ್ಧತೆಗಳು ನಡೆದಿವೆ. 2014ರಲ್ಲಿ ತೆರೆಕಂಡ ಸಲ್ಮಾನ್​ ಖಾನ್​ ನಟಿಸಿದ ಹಿಂದಿಯ ಕಿಕ್​ ತೆಲುಗಿನ ಸೂಪರ್​ಹಿಟ್​ ಚಲನಚಿತ್ರ ಕಿಕ್​ನ ರೀಮೆಕ್​ ಚಿತ್ರವಾಗಿತ್ತು. ಕಥೆಯಲ್ಲಿ ಕೆಲವೊಂದು ಬದಲಾವಣೆ ಮಾಡಿ ಹಿಂದಿಯಲ್ಲಿ ನಿಮಿರ್ಸಲಾಗಿತ್ತು. ಚಿತ್ರ ಸೂಪರ್​ ಹಿಟ್​ ಆಗಿದ್ದಲ್ಲದೆ, 400 ಕೋಟಿ ದುಡಿದಿತ್ತು. ಇದೀಗ ಅದೇ ಸೀಕ್ವೆಲ್​ನ ಕಿಕ್​ 2 ತೆರೆಗೆ ತರಲು ಸಾಜಿದ್​ ನಾಡಿಯಾದ್​ವಾಲಾ ಸಿದ್ಧತೆ ನಡೆಸಿದ್ದಾರೆ. ತೆಲುಗಿನ ಕಿಕ್​ ಸೀಕ್ವೆಲ್​ನ ಕಿಕ್​ 2 ಕಥೆಯನ್ನೇ ಹಿಂದಿ ಕಿಕ್​ 2 ಹೊಂದಿರಲಿದೆಯೇ ಎಂಬ ಬಗ್ಗೆ ಸಾಜಿದ್​ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.


ಹಿಂದಿಯ ಕಿಕ್​ 2ನಲ್ಲಿ ನಾಯಕರಾಗಿ ಸಲ್ಮಾನ್​ ಮತ್ತು ನಾಯಕಿಯಾಗಿ ಜಾಕ್ವೆಲಿನ್​ ರ್ನಾಂಡೀಸ್​ ಅವರೇ ಇರಲಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಉಳಿದ ತಾರಾಗಣದಲ್ಲಿ ಯಾರ್ಯಾರಿರಲಿದ್ದಾರೆ ಎಂಬುದರ ಬಗ್ಗೆ ಚಚಿರ್ಸಲಾಗುತ್ತಿದೆ. 2021ರ ಡಿಸೆಂಬರ್​ನಲ್ಲಿ ಕಿಕ್​ 2 ತೆರೆಗೆ ತರುವ ಬಗ್ಗೆ ಈಗಾಗಲೆ ಘೋಷಿಸಲಾಗಿದೆ.
ಕಿಕ್​ 2 ರೀತಿಯಲ್ಲಿಯೇ ಸಲ್ಮಾನ್​ ಖಾನ್​ ಮತ್ತೊಂದು ಸರಣಿ ಸಿನೆಮಾ ಏಕ್​ ಥಾ ಟೈಗರ್​ನ ಮೂರನೇ ಅವತರಣಿಕೆಯೂ ತೆರೆಗೆ ಬರಲಿದೆ. ಟೈಗರ್​ ಜಿಂದಾ ಹೈ ನಿರ್ದೇಶಕ ಅಲಿ ಅಬ್ಬಾಸ್​ ಜರ್​ ಈ ಬಗ್ಗೆ ಸ್ಪಷ್ಟಪಡಿಸಿದ್ದು, ಸಲ್ಮಾನ್​ ಮತ್ತು ಕತ್ರೀನಾ ಕೈ್​ ಕಾಂಬಿನೇಷನ್​ನಲ್ಲಿಯೇ ಏಕ್​ ಥಾ ಟೈಗರ್​ನ 3ನೇ ಅವತರಣಿಕೆ ಟೈಗರ್​ 3 ತೆರೆಗೆ ತರಲು ಸಿದ್ಧತೆ ನಡೆಸಲಾಗಿದೆ ಎಂದು ಹಿಂದೆಯೇ ಘೋಷಿಸಿದ್ದರು. ಅದಾದ ನಂತರ ಅದಕ್ಕೆ ಸಂಬಂಧಿಸಿದ ಯಾವುದೇ ಬೆಳವಣಿಗೆ ನಡೆದಿರಲಿಲ್ಲ.

ಇದೀಗ ಚಿತ್ರದ ಬಗ್ಗೆ ಅಚ್ಚರಿಯ ವಿಷಯ ಹೊರಬಿದ್ದಿದ್ದು, ಚಿತ್ರಕ್ಕೆ ಅಲಿ ಅಬ್ಬಾಸ್​ ಸ್ಕ್ರಿಪ್ಟಿಂಗ್​ ಕಾರ್ಯ ನಡೆಸುತ್ತಿದ್ದಾರೆ. ೆಬ್ರವರಿಯಿಂದ ಅಧಿಕೃತ ಶೂಟಿಂಗ್​ ಶುರು ಮಾಡುವ ಲೆಕ್ಕಾಚಾರವಿದೆ. ಕಳೆದೆರಡು ಚಿತ್ರಗಳಂತೆ ಯಶ್​ ರಾಜ್​ ಫಿಲಂ ಬ್ಯಾನರ್​ನಲ್ಲಿಯೇ ಈ ಚಿತ್ರವೂ ಮೂಡಿಬರುವ ಸಾಧ್ಯತೆಗಳಿವೆ.
ಸದ್ಯ ಸಲ್ಮಾನ್​ ವಾಂಟೆಡ್​ ಸಿನೆಮಾದ ಮುಂದುವರಿದ ಭಾಗ ರಾಧೆಗಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನ ಭೀತಿಯಿಂದ ಚಿತ್ರದ ಕಾರ್ಯಗಳು ಕೊಂಚ ಮುಂದೂಲ್ಪಟ್ಟಿದೆ. 2021ರ ಆರಂಭದಲ್ಲಿ ರಾಧೆ ತೆರೆಗೆ ಬರುವ ಸಾಧ್ಯತೆಗಳಿವೆ. ಅದರ ಜೊತೆಗೆ ಕಭಿ ಈದ್​ ಕಭಿ ದಿವಾಲಿ, ಶೇರ್​ ಖಾನ್​ ಚಿತ್ರಗಳ ಮೇಲೂ ಕೆಲಸಗಳು ನಡೆಯುತ್ತಿವೆ.

LEAVE A REPLY

Please enter your comment!
Please enter your name here