ಮೇಕಪ್ ಕಲಾವಿದನ ಮಗನ ಮದುವೆಗೆ ಆಗಮಿಸಿದ ಸಲ್ಮಾನ್ ಖಾನ್

0
181

ಬಾಲಿವುಡ್ ನಟ ಸಲ್ಮಾನ್ ಖಾನ್ ಆಗಾಗ ಸಾಮಾನ್ಯರಂತೆ ನಡೆದುಕೊಂಡು ಅಭಿಮಾನಿಗಳ ಹೃದಯ ಗೆಲ್ಲುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಸಲ್ಮಾನ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

 

ಸಲ್ಮಾನ್ ಖಾನ್ ಮೇಕಪ್ ಆರ್ಟಿಸ್ಟ್ ಮಗನ ಮದುವೆಗೆ ಬಂದು ನವ ಜೋಡಿಗೆ ಶುಭಹಾರೈಸಿದ್ದಾರೆ. ಬಿಡುವಿಲ್ಲದ ಕೆಲಸದ ಮಧ್ಯೆಯೂ ಸಲ್ಮಾನ್ ಮೇಕಪ್ ಕಲಾವಿದ ಗೌರವ್ ನಾಗ್ ಮಗನ ಮದುವೆಗೆ ತೆರಳಿದ್ದರು. ನವ ಜೋಡಿಯೊಂದಿಗೆ ಸಲ್ಮಾನ್ ತೆಗೆಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

 

 

ಸಲ್ಮಾನ್ ಖಾನ್ ಮಾತ್ರವಲ್ಲದೆ, ಗಾಯಕ ಹಿಮೇಶ್ ರೇಶಮಿಯಾ, ನಿರೂಪಕ ಮನೀಶ್ ಪೌಲ್ ಸೇರಿದಂತೆ ಅನೇಕ ಕಲಾವಿದರು ಮದುವೆಗೆ ಆಗಮಿಸಿ ನವಜೋಡಿಗೆ ಶುಭ ಕೋರಿದ್ದಾರೆ.ಸದ್ಯ ಸಲ್ಮಾನ್ ಖಾನ್ ದಬಾಂಗ್ 3 ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here