ವರಮಹಾಲಕ್ಷ್ಮಿ ಹಬ್ಬಕ್ಕೆ ಬಂದ ‘ಸಾಕ್ಷಾತ್ ಲಕ್ಷ್ಮಿ’

0
110

ಏನಪ್ಪಾ ಇದು ಸಾಕ್ಷಾತ್ ಲಕ್ಷ್ಮಿ ಬರ್ತಿದ್ದಾಳೆ ಅನ್ಕೊಂಡ್ರಾ ? ಕನ್ನಡದ ಮೋಸ್ಟ್ ಹೈ ವೋಲ್ಟೇಜ್ ಸಿನಿಮಾ ಅವನೇ ಶ್ರೀಮನ್ನಾರಾಯಣ ಚಿತ್ರದ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.ಈ ಪೋಸ್ಟರ್ನಲ್ಲಿ ಚಿತ್ರದ ನಾಯಕಿ ಶಾನ್ವಿ ಶ್ರೀವಾತ್ಸವ್, ಲಕ್ಷ್ಮಿ ಅವತಾರದಲ್ಲಿ ಮಿಂಚಿದ್ದು, ಚಿತ್ರದ ಮೇಲಿನ ಕುತೂಹಲವನ್ನು ಇನ್ನೂ ಹೆಚ್ಚಿಸಿದ್ದಾರೆ..
ಚಿತ್ರ ಪ್ರಾರಂಭದಿಂದಲೂ ಒಂದಲ್ಲ ಒಂದು ವಿಚಾರದಿಂದ ನಿರೀಕ್ಷೆಗಳನ್ನು ಹೆಚ್ಚಿಸುತ್ತಲೇ ಬಂದಿದೆ. ರಕ್ಷಿತ್ ಶೆಟ್ಟಿಯವರ ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ಚಿತ್ರದ ಟ್ರೈಲರ್ ಇಡೀ ಭಾರತದ ಎಲ್ಲಾ ಚಿತ್ರರಂಗದಲ್ಲೂ ಭಾರಿ ಸದ್ದು ಮಾಡಿತ್ತು ಇನ್ನು ಕಿರಿಕ್ ಪಾರ್ಟಿ ಚಿತ್ರದ ಬಳಿಕ ಅಂದರೆ ಮೂರು ವರ್ಷಗಳ ಬಳಿಕ ಪರಿಪೂರ್ಣ ನಟನೆಯ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ..
ಅಲ್ಲದೆ ಚಿತ್ರದಲ್ಲಿ ರಕ್ಷಿತ್ ಖಾಕಿ ಖದರ್ ನಲ್ಲಿ ಮಿಂಚಲಿದ್ದಾರೆ. ಇದೇ ಮೊದಲ ಬಾರಿಗೆ ಖಾಕಿ ಅವತಾರದಲ್ಲಿ ರಕ್ಷಿತ್ ಅವರು ಬಣ್ಣ ಹಚ್ಚುತ್ತಿದ್ದಾರೆ ..
ಇನ್ನು ಚಿತ್ರ ಕನ್ನಡ ಸೇರಿದಂತೆ ಹಿಂದಿ ತೆಲುಗು ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿದೆ ..
ಇನ್ನು ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಎಚ್ ಕೆ ಪ್ರಕಾಶ್ ಗೌಡ ಬಂಡವಾಳ ಹೂಡಿದ್ರೆ ಸಚಿನ್ ಅವರು ಆಕ್ಷನ್ ಕಟ್ ಹೇಳಿದ್ದಾರೆ..
ಚರಣ್ ರಾಜ್ ಮತ್ತು ಅಜನೀಶ್ ಬಿ ಲೋಕನಾಥ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಅಚ್ಯುತ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಪಾತ್ರವರ್ಗದಲ್ಲಿದ್ದಾರೆ.

LEAVE A REPLY

Please enter your comment!
Please enter your name here