ಹೊಸ ವರ್ಷದಂದು ಕಂಠಪೂರ್ತಿ ಕುಡಿದು ತಡರಾತ್ರಿ ಮನೆಗೆ ಹೋಗೋಣ ಅಂದರೆ ಸರ್ಕಾರ ಹೀಗಾ ಮಾಡೋದು ?

0
168

ಹೊಸ ವರ್ಷವು ಕಳೆದ ವರ್ಷಕ್ಕೆ ವಿದಾಯ ಹೇಳಲು ಮತ್ತು ಹೊಸ ವರ್ಷವನ್ನು ಸ್ವಾಗತಿಸಲು ಸಮಯ ಬಂದಿದೆ ಎಂದು ಸೂಚಿಸುತ್ತದೆ. ಸಾಂಪ್ರದಾಯಿಕವಾಗಿ, ಹೊಸ ವರ್ಷವನ್ನು ಪ್ರತಿ ವರ್ಷ ಮಾರ್ಚ್ ಮೊದಲ ದಿನದಂದು ಆಚರಿಸಲಾಗುತ್ತದೆ. ಆದಾಗ್ಯೂ, ಈ ದಿನಾಂಕವನ್ನು ಜನವರಿ 1 ಕ್ಕೆ ಬದಲಾಯಿಸಲಾಯಿತು. ಏಕೆಂದರೆ ಇದು ಹೆಚ್ಚು ಧಾರ್ಮಿಕ ಮಹತ್ವವನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ.

 

 

ಪ್ರಪಂಚದಾದ್ಯಂತ ಪಾಶ್ಚಿಮಾತ್ಯ ಸಂಸ್ಕೃತಿಯ ಬೆಳವಣಿಗೆಯೊಂದಿಗೆ, ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಜನವರಿ 1 ರಂದು ಹೊಸ ವರ್ಷದ ದಿನವು ಭಾರತದ ಅನೇಕ ಆಚರಣೆಗಳಲ್ಲಿ ಒಂದಾಗಿದೆ. ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಜನವರಿ 1 ರಂದು ಬರುವ ಹೊಸ ವರ್ಷದ ದಿನವನ್ನು ಭಾರತದಲ್ಲಿ ಮೊದಲು ಆಚರಿಸಿದಾಗ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದವು . ಬ್ರಿಟಿಷರು ಭಾರತವನ್ನು ವಸಾಹತುವನ್ನಾಗಿ ಮಾಡಿದಾಗ ಇದನ್ನು ಗಮನಿಸಲಾಗಿದೆ ಎಂದು ಕೆಲವರು ಹೇಳುತ್ತಾರೆ. ಮತ್ತು ಇತರರು ಅದರ ಜನಪ್ರಿಯತೆಯು 1940 ರ ನಂತರವೇ ಅರಳಿತು ಎಂದು ಹೇಳುತ್ತಾರೆ.

 

 

ಇನ್ನು ಹೊಸ ವರ್ಷ ಬಂದರೆ ಸಾಕು ಯುವಕರಿಗೆ ಹಬ್ಬವೋ ಹಬ್ಬ.! ರಾತ್ರೋ ರಾತ್ರಿ ಉದ್ಯಾನನಗರಿ ಬೆಂಗಳೂರಿನ ಪಬ್ ಗಳಲ್ಲಿ ಕಂಠ ಪೂರ್ತಿ ಕುಡಿದು ಸಂಭ್ರಮಿಸುತ್ತಾರೆ. ಅಲ್ಲಲ್ಲಿ ಪಾರ್ಟಿಗಳನ್ನು ಏರ್ಪಡಿಸಿ ನೃತ್ಯ ಹಾಡುಗಳಿಂದ ತುಂಬಿರುತ್ತದೆ. ಈ ಹೊಸ ವರ್ಷದಂದು ಮಧ್ಯ ರಾತ್ರಿಯವರೆಗೂ ಯಾವುದೇ ನಿರ್ಬಂಧವಿಲ್ಲದೆ ಕುಡಿದು ಸಂಭ್ರಮಿಸುತ್ತಿರುತ್ತಾರೆ.

 

 

ಡಿಸೆಂಬರ್ 31 ರಂದು ಪಾರ್ಟಿ ಮಾಡಲು ಉತ್ಸಾಹದಿಂದ ತುದಿಗಾಲಲ್ಲಿ ನಿಂತಿದ್ದಾರೆ.
ಟೂ ವಿಲ್ಲರ್ ಮತ್ತು ಕಾರುಗಳಲ್ಲಿ ಹೋಗುವ ಬದಲು ಪಾರ್ಟಿ ಮುಗಿಸಿ ಮೆಟ್ರೋದಲ್ಲಿ ಮನೆಗೆ ತೆರಳೋಣ ಎಂದುಕೊಂಡಿದ್ದವರಿಗೆ ಬಹಳ ನಿರಾಸೆಯಾಗಿದೆ.

 

 

ಹೌದು, ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಉದ್ಯಾನ ನಗರಿ ಸಜ್ಜಾಗಿದೆ. ಹೀಗಾಗಿ ಬೆಂಗಳೂರಿಗರ ಅನುಕೂಲಕ್ಕಾಗಿ ನ್ಯೂ ಇಯರ್ ಮಿಡ್ ನೈಟ್ 2 ಗಂಟೆಯವರೆಗೆ ಮೆಟ್ರೋ ಸಂಚಾರ ವಿಸ್ತರಣೆ ಮಾಡಿರುವ ಬಿಎಂಆರ್ಸಿಎಲ್ ಇದರ ಜೊತೆಗೆ ಎಚ್ಚರಿಕೆಯನ್ನು ಕೊಟ್ಟಿದೆ. ಮಧ್ಯ ರಾತ್ರಿ ಪಾರ್ಟಿ ಮುಗಿಸಿ ಸ್ನೇಹಿತರ ಜೊತೆ ಟೈಟಾಗಿ ಮೆಟ್ರೋದಲ್ಲಿ ಮನೆ ಸೇರಿಕೊಳ್ಳೋಣ ಎಂದುಕೊಂಡವರಿಗೆ ಸಂಸ್ಥೆ ಬಿಗ್ ಶಾಕ್ ನೀಡಿದೆ !

 

 

ಇತರೆ ರಾತ್ರಿಗಳಲ್ಲೇ ಮೆಟ್ರೋದಲ್ಲಿ ಕುಡುಕರ ಕಾಟ ತಡೆಯಲು ಆಗುತ್ತಿಲ್ಲ. ಇನ್ನು ನ್ಯೂ ಇಯರ್ ದಿನ ಅವರನ್ನು ಹಿಡಿಯಲು ಆಗಲ್ಲ ಅಂತ ಕೆಲ ಮಹಿಳಾ ಸಂಘಟನೆಗಳು ಕುಡುಕರಿಗೆ ಮೆಟ್ರೋದಲ್ಲಿ ಪ್ರವೇಶ ನೀಡಬಾರದು ಎಂದು ದೂರು ಕೊಟ್ಟಿದ್ದಾರೆ. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಬಿಎಂಆರ್ಸಿಎಲ್, ನ್ಯೂ ಇಯರ್ ರಾತ್ರಿ ಕುಡುಕರಿಗೆ ಮೆಟ್ರೋ ಹತ್ತಿಸದಿರಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಹೀಗಾಗಿ ನ್ಯೂ ಇಯರ್ ಪಾರ್ಟಿ ಮುಗಿಸಿ, ಮೆಟ್ರೋ ಕಡೆ ಹೋದರೆ ನಿಮ್ಮನ್ನು ಬಿಟ್ಟುಕೊಳ್ಳುವುದಿಲ್ಲ.

LEAVE A REPLY

Please enter your comment!
Please enter your name here