ಆರಂಭದಿಂದಲೂ ಸಿನಿರಸಿಕರಲ್ಲಿ ಕುತೂಹಲ ಹುಟ್ಟಿಸಿರುವ ಸಾಹೋ ಬರೋಬ್ಬರಿ 300 ಕೋಟಿ ಬಜೆಟ್ ನಲ್ಲಿ ರೆಡಿಯಾಗಿದೆ..
ಈ ಸಿನಿಮಾ ಬಗ್ಗೆ ಕೇವಲ ಟಾಲಿವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ನಿರೀಕ್ಷೆ ಇಟ್ಟುಕೊಂಡಿದೆ. ಈಗಾಗಲೇ ಶ್ರದ್ಧಾ ಅವರು ಗನ್ ಹಿಡಿದು ನಿಂತಿದ್ದ ಪೋಸ್ಟರ್ ಭಾರೀ ವೈರಲ್ ಆಗಿತ್ತು. ಹಾಗೆ ಚಿತ್ರದ ಟ್ರೈಲರ್ ಸಹಿತ ಇಡೀ ವಿಶ್ವಾದ್ಯಂತ ಭಾರೀ ಸದ್ದು ಮಾಡುತ್ತಿದೆ..
ಎರಡು ವರ್ಷಗಳ ಬಳಿಕ ಡಾರ್ಲಿಂಗ್ ಪ್ರಭಾಸ್ ,ಸಾಹೋ ಎಂಬ ಚಿತ್ರದಲ್ಲಿ ಮತ್ತೆ ರಿ ಎಂಟ್ರಿ ತೆಗೆದುಕೊಂಡಿದ್ದಾರೆ ! ಇನ್ನು ಸಾಹೋ ದೊಡ್ಡ ಬಜೆಟ್ನ ಸಿನಿಮಾ! ಆ್ಯಕ್ಷನ್ ಮತ್ತು ರೊಮ್ಯಾಂಟಿಕ್ ಕಥೆಯುಳ್ಳ ಸಾಹು , ತೆಲುಗು ,ತಮಿಳು ಹಿಂದಿ ಸೇರಿದಂತೆ ಮೂರು ಭಾಷೆಯಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ!
ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಸಿನಿಮಾಗೆ , ಸುಜಿತ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ !

ಇನ್ನು ಈ ಚಿತ್ರಕ್ಕೆ ಬಾಹುಬಲಿ ಪ್ರಭಾಸ್ 100 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ! ಈ ಮೂಲಕ ಬಾಲಿವುಡ್ ತಾರೆಗಳನ್ನು ಹಿಂದಿಕ್ಕಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ!
ಈಗ ಚಿತ್ರತಂಡ ಮತ್ತೊಂದು ಪೋಸ್ಟರ್ ಬಿಡುಗಡೆಮಾಡಿದೆ.. ಆದರೆ ಈ ಪೋಸ್ಟರ್ ರಣಬೀರ್ ಕಪೂರ್ ಮತ್ತು ಐಶ್ವರ್ಯಾ ರೈ ಅಭಿನಯಿಸಿದ್ದ ಬಾಲಿವುಡ್ ನ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ನಕಲಿ ಎಂಬಂತೆ ಕಾಣುತ್ತಿದೆ ..
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಸ ಪೋಸ್ಟರ್ ನಲ್ಲಿ ಶ್ರದ್ದಾ ಪ್ರಭಾಸ್ ರವರ ಮಡಿಲ ಮೇಲೆ ಕುಳಿತು ಪರಸ್ಪರ ಒಬ್ಬರೊಬ್ಬರು ಗಟ್ಟಿಯಾಗಿ ಅಪ್ಪಿಕೊಂಡಿದ್ದಾರೆ. ಈ ಪೋಸ್ಟರ್ ಸಖತ್ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವ ಸಮಯದಲ್ಲಿ ಚಿತ್ರತಂಡದವರ ವಿರುದ್ದ ಆರೋಪವೊಂದು ಕೇಳಿಬರುತ್ತದೆ.
‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ವೇಳೆ ಮ್ಯಾಗಜಿನ್ ವೊಂದರ ಫೋಟೊಶೂಟ್ ಗಾಗಿ ಇವರಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ಅಪ್ಪಿಕೊಂಡಿರುವ ರೀತಿಯಲ್ಲಿ ಫೋಟೊಶೂಟ್ ಮಾಡಿಸಿಕೊಂಡಿದ್ದರು.
ಈಗ ಆ pose ಅನ್ನೇ ಸಾಹೋ ಚಿತ್ರತಂಡ ಕಾಪಿ ಮಾಡಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ !
