ಗಗನಯಾತ್ರಿಯ ಸಾವಿನ ರಹಸ್ಯ ಬಚ್ಚಿಡಲು 48 ಕೋಟಿ ರೂ ಲಂಚ.

0
104

ಅಮೆರಿಕದ ನೀಲ್ ಅರ್ಮ್ ಸ್ಟ್ರಾಂಗ್ ರವರು ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು 2012ರಲ್ಲಿ ವೈದ್ಯರ ನಿರ್ಲಕ್ಷದಿಂದ ಮರಣಹೊಂದಿದರು ಎಂದು ಇತ್ತೀಚೆಗೆ ತಿಳಿದುಬಂದಿದ್ದು , ಆಸ್ಪತ್ರೆಯ ಆಡಳಿತ ವಲಯ ಇದನ್ನು ಮುಚ್ಚಿಡಲು ಅರ್ಮ್ ಸ್ಟ್ರಾಂಗ್ ಕುಟುಂಬಕ್ಕೆ ಸುಮಾರು 42 ಕೋಟಿ ಹಣವನ್ನು ನೀಡಿದ ಪ್ರಕರಣ ಬೆಳಕಿಗೆ ಬಂದಿದ್ದು ಅಮೆರಿಕದ ಜನರು ತಲ್ಲಣಗೊಂಡಿದ್ದಾರೆ.
ಅರ್ಮ್ ಸ್ಟ್ರಾಂಗ್ ಅವರು ಹೃದಯದ ರಕ್ತನಾಳದ ಶಸ್ತ್ರಚಿಕಿತ್ಸೆಗೆ 2012ರ ಆಗಸ್ಟ್ ನಲ್ಲಿ ಒಹಿಯೋದ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು ಈ ವಿಷಯಕ್ಕೆ ಸಂಬಂಧಿಸಿದಂತೆ ಕುಟುಂಬದವರು ಕಾನೂನಿನ ಮೊರೆ ಹೋಗಿದ್ದಾರೆ , ಈ ಪ್ರಕರಣವನ್ನು ಮುಚ್ಚಿಡಲು 2014ರಲ್ಲಿ 6 ದಶಲಕ್ಷ ಡಾಲರ್(48 ಕೋಟಿ) ಹಣವನ್ನು ಆಸ್ಪತ್ರೆಯ ಆಡಳಿತ ಮಂಡಳಿಯು ನೀಡಿದೆ ಎಂದು ತಿಳಿದುಬಂದಿದ್ದು . ಹಣವನ್ನು ಅರ್ಮ್ ಸ್ಟ್ರಾಂಗ್ ಅವರ ಮಕ್ಕಳು ಮೊಮ್ಮಗಳಿಗೆ ಹಣವನ್ನು ನೀಡಲಾಗಿತ್ತು, ಪತ್ನಿಗೆ ಹಣ ನೀಡಿರಲಿಲ್ಲ ಈ ಕುರಿತು ಅನಾಮಧೇಯ ವ್ಯಕ್ತಿಯಿಂದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಇದರ ಬಗ್ಗೆ ಸವಿವರವಾದ ವರದಿ ಪ್ರಕಟಣೆಯಾಗಿದೆ.
ತಮ್ಮ ದೇಶಕ್ಕೆ ಹೆಸರು ತಂದ ಆ ವ್ಯಕ್ತಿಯ ದುರ್ಮರಣಕ್ಕೆ ಕಾರಣರಾದ ಆಸ್ಪತ್ರೆಯ ಸಿಬ್ಬಂದಿಗಳ ಬಗೆಗೆ ಜನರು ಆಕ್ರೋಶ ಗೊಂಡಿದ್ದಾರೆ.

LEAVE A REPLY

Please enter your comment!
Please enter your name here