ರೌಡಿ ಬೇಬಿ ಸಾಂಗ್.!

0
277

ಕಾಲಿವುಡ್ ಸ್ಟಾರ ನಟ ಎಂದೇ ಹೆಸರು ಮಾಡಿರುವ ಧನುಷ್ ಹಾಗೂ ಸಾಯಿ ಪಲ್ಲವಿ ಹೆಜ್ಜೆ ಹಾಕಿರುವ ರೌಡಿ ಬೇಬಿ ಹಾಡು ಸದ್ಯ ಭಾರತದ ಟಾಪ್ ಟ್ರೆಂಡಿಂಗ್ ನಲ್ಲಿದೆ. ಹೌದು, ಈಗಾಗಲೇ ಸಾಕಷ್ಟು ದಾಖಲೆ ಹಿಂದಿಕ್ಕಿರುವ ರೌಡಿ ಬೇಬಿ ಮತ್ತೊಂದು ಹೆಸರುಗಳಿಸಿದೆ.

 

ಈ ಸಾಂಗ್ ಕೇಳಿದರೆ ಸಾಕು ಕುಣಿದು ಕುಪ್ಪಳಿಸುವಂತೆ ಮಾಡುವ ರೌಡಿ ಬೇಬಿ ದೇಶದ ನಂ.1 ಟ್ರೆಂಡಿಂಗ್ ನಲ್ಲಿದೆ. ಅಲ್ಲದೇ ಇತ್ತೀಚಿಗೆ ಯೂಟ್ಯೂಬ್ ನಲ್ಲಿ 500 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದು ಅತೀ ಹೆಚ್ಚು ವೀಕ್ಷಣೆ ಕಂಡ ಹಾಡು ಎನ್ನುವ ಹೊಸ ದಾಖಲೆಯನ್ನು ಈ ಹಾಡು ಪಡೆದುಕೊಂಡಿತ್ತು.

 


ಈಗ ರೌಡಿ ಬೇಬಿ ದೇಶದಲ್ಲೆ ಈ ವರ್ಷದ ಟಾಪ್ ಒನ್ ಟ್ರಿಂಡಿಂಗ್ ಹಾಡು ಎನ್ನುವ ಖ್ಯಾತಿ ಗಳಿಸಿದೆ. ರೌಡಿ ಬೇಬಿ ಹಾಡು ಮೊದಲ ಸ್ಥಾನ ಪಡೆದುಕೊಂಡಿದೆ. ಇನ್ನು ಎರಡನೆ ಸ್ಥಾನದಲ್ಲಿ ತನೀಶ್ ಬಾಗ್ಚಿ ಸಂಗೀತ ಸಂಯೋಜನೆ ಮಾಡಿರುವ ಧ್ವಾನಿ ಭಾನುಶಾಲಿ ಮತ್ತು ನಿಖಿಲ್ ಡಿ ಅಭಿನಯದ ವಾಸ್ತೆ ಹಾಡು ಪಡೆದುಕೊಂಡಿದೆ. ಹಾಡಿನ ಮ್ಯೂಸಿಕ್ ಹಾಗೂ ಡ್ಯಾನ್ಸ್ ಬಹಳ ಮುಖ್ಯವಾಗಿದೆ. ಇಳಯರಾಜ ಪುತ್ರ ಯುವನ್ ಶಂಕರ್ ರಾಜ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಪ್ರಭುದೇವ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here