ಅರೆಸ್ಟ್ ಆಗೇ ಬಿಡ್ತಾರಾ ರೋಷನ್ ಬೇಗ್..?

0
49

ಬೆಂಗಳೂರು: ಐಎಂಎ ಕೇಸ್ ನಲ್ಲಿ ಮಾಜಿ ಶಾಸಕ ರೋಷನ್ ಬೇಗ್ ರನ್ನು ವಶಕ್ಕೆ ಪಡೆದು ಸಿಬಿಐ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಯಾವುದೇ ನೋಟಿಸ್ ನೀಡದೇ ನೇರವಾಗಿ ಬೆಳಗ್ಗೆ 11 ಗಂಟೆಗೆ ಶಿವಾಜಿನಗರ ದ ರೋಷನ್ ಬೇಗ್ ನಿವಾಸಕ್ಕೆ ತೆರಳಿದ ಸಿಬಿಐ ಅಧಿಕಾರಿಗಳು ಬೇಗ್ ರನ್ನು ವಶಕ್ಕೆ ಪಡೆದು ಸಿಬಿಐ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಮನ್ಸೂರ್ ಅಲಿ ಖಾನ್ ಆರೋಪ ಏನು..?

ಐಎಂಎ ಸಂಸ್ಥೆ ಮುಖ್ಯಸ್ಥ ಮನ್ಸೂರ್ ಅಲಿ ಖಾನ್ ಆರೋಪ ಹಿನ್ನೆಲೆಯಲ್ಲಿ ಬೇಗ್ ರನ್ನು ಸಿಬಿಐ ವಶಕ್ಕೆ ಪಡೆದಿದೆ ಎನ್ನಲಾಗುತ್ತಿದೆ. ಈ ಮುಂಚೆ ಎರಡು ವೀಡಿಯೋ ಬಿಡುಗಡೆ ಮಾಡಿದ್ದ ಆರೋಪಿ ಮನ್ಸೂರ್ ಅಲಿ ಖಾನ್, ಎಲ್ಲಾ ಹಣ ರೋಷನ್ ಬೇಗ್ ಬಳಿ ಇದೆ. ಸುಮಾರು 400 ಕೋಟಿಯಷ್ಟು ಹಣವನ್ನು ರೋಷನ್ ಬೇಗ್ ಪಡೆದಿದ್ದಾರೆ. ಗಿಪ್ಟ್ ರೂಪದಲ್ಲಿ, ನಾನಾ ರೀತಿಯಲ್ಲಿ ಹಣ ಪಡೆದಿದ್ದಾರೆ. ನಾನಷ್ಟೇ ಆರೋಪಿ ಅಲ್ಲ. ರೋಷನ್ ಬೇಗ್ ಪಾತ್ರ ಇದರಲ್ಲಿ ಇದೆ ಎಂದು ಆರೋಪ ಮಾಡಿ ವೀಡಿಯೋ ಬಿಡುಗಡೆ ಮಾಡಿದ್ದ. ಅಷ್ಟೇ ಅಲ್ಲದೇ, ನಾನು ಕೊಟ್ಟ ಹಣದಿಂದಲೇ ಚುನಾವಣೆ ಎದುರಿಸಿದ್ದರು ಎಂದು ಮನ್ಸೂರ್ ಆರೋಪ ಮಾಡಿದ್ದ.

ಈ ಹಿನ್ನೆಲೆಯಲ್ಲಿ ಎಸ್ ಐ ಟಿ ಬೇಗ್ ರನ್ನು ವಿಚಾರಣೆ ನಡೆಸಿತ್ತು. ಆದ್ರೆ ರೋಷನ್ ಬೇಗ್ ಆ ವೇಳೆ ಈ ಆರೋಪಗಳನ್ನೆಲ್ಲಾ ಅಲ್ಲಗಳೆದಿದ್ದರು. ನಂಗೂ ಮನ್ಸೂರ್ ಗೂ ಯಾವ ಸಂಬಂಧ ಇಲ್ಲ ಎಂದು ವಿರೋಧಿಸಿದ್ದರು. ಅಷ್ಟೇ ಅಲ್ಲ, ತಾವಿದ್ದ ಕಾಂಗ್ರೆಸ್ ಪಕ್ಷದಿಂದ ತಮಗೆ ಬೆಂಬಲ ಸಿಗ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಬಿಜೆಪಿ ಪಕ್ಷಕ್ಕೆ ಸೇರಿ ಕೇಸ್ ನಿಂದ ಬಿಡಿಸಿಕೊಳ್ಳೋ ಪ್ರಯತ್ನವನ್ನೂ ಮಾಡಿದ್ರು. ಬಿಜೆಪಿ, ಸಿಎಂ ಯಡಿಯೂರಪ್ಪ, ಪ್ರಧಾನಿ ಮೋದಿ ಎಲ್ಲರನ್ನೂ ಹೊಗಳಲು ಆರಂಭಿಸಿದ್ದರು. ಆದ್ರೆ ಅದ್ಯಾವ್ದು ಕೈ ಹಿಡಿದಿಲ್ಲ. ಐಎಂಎ ಕೇಸ್ ನಲ್ಲಿ ಬೇಗ್ ಹೆಸರು ಗಟ್ಟಿಯಾಗಿ ಕೇಳಿ ಬಂದ ಹಿನ್ನಲೆಯಲ್ಲಿ ಬಿಜೆಪಿ ಬಾಗಿಲು ಕ್ಲೋಸ್ ಆಗಿತ್ತು. ಇಂದು ನೇರವಾಗಿ ರೋಷನ್ ಬೇಗ್ ನಿವಾಸಕ್ಕೆ ಬಂದ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಐಎಂಎ ಕೇಸ್ ನಲ್ಲಿ ಆ ಕ್ಷೇತ್ರದ ಪಿಎಸ್ ಐ, ಸರ್ಕಲ್ ಇನ್ಸ್ಪೆಕ್ಟರ್ ಸೇರಿದಂತೆ ಕೆಲ ಐಪಿಎಸ್ ಅಧಿಕಾರಿಗಳ ಹೆಸರೂ ಕೇಳಿ ಬಂದಿತ್ತು. ಕೇಸ್ ಆರೋಪದ ಹಿನ್ನಲೆಯಲ್ಲಿ ಪಿಎಸ್ ಐ ಗಳನ್ನ ಅಮಾನತು ಮಾಡಿದ ಸರ್ಕಾರ, ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡದೇ ಹಾಗೇ ಉಳಿಸಿಕೊಂಡಿತ್ತು. ಇದು ಸರ್ಕಾರದ ವಿರುದ್ಧ ವೇ ಸಾಕಷ್ಟು ಗುಮಾನಿ ಸೃಷ್ಟಿಯಾಗಲು ಕಾರಣವಾಗಿತ್ತು.

ಐಎಂಎ ಸಂಸ್ಥೆಯಲ್ಲಿ ಅಲ್ಪಸಂಖ್ಯಾತ ಸಮುದಾಯ ಕ್ಕೆ ಸೇರಿದ ಹೆಚ್ಚು ಮಂದಿ ಹಣ ಹೂಡಿಕೆ ಮಾಡಿದ್ರು. ಹೆಚ್ಚು ಬಡ್ಡಿ ಹಣ ಬರುತ್ತೆ ಎಂಬ ಆಸೆಯಿಂದ ಕಂಪನಿಗೆ ಹೂಡಿಕೆ ಮಾಡಿದ್ದರು. ಕಂಪನಿಯ ಪಾಲುದಾರರು ಆಗ್ತೀರಿ ಎಂದು ನಂಬಿಸುವ ಮೂಲಕ ಹಣ ತೆಗೆದ್ಕೊಳ್ತಾರೆ. ಆದ್ರೆ ಬಡ್ಡಿ ಹಣ ವಾಪಸ್ ಬರದ ಹಿನ್ನೆಲೆಯಲ್ಲಿ ಜನಕ್ಕೆ ಅನುಮಾನ ಬಂದು ಕೇಸ್ ದಾಖಲಿಸಿದ ನಂತರ ಬಹು ಹಗರಣ ಹೊರ ಬೀಳುತ್ತೆ.

LEAVE A REPLY

Please enter your comment!
Please enter your name here