ಪರಪ್ಪನ ಅಗ್ರಹಾರದ ಕ್ವಾರಂಟೇನ್ ಸೆಲ್ ಗೆ ರೋಷನ್ ಬೇಗ್ ಶಿಪ್ಟ್: 14 ದಿನ ನ್ಯಾಯಾಂಗ ಬಂಧನ

0
45

ಬೆಂಗಳೂರು: ಸಿಬಿಐ ವಿಚಾರಣೆ ಬಳಿಕ ರೋಷನ್ ಬೇಗ್ ರನ್ನು ಅಧಿಕಾಗಳು ಬಂಧಿಸಿದ್ದು, ಪರಪ್ಪನ ಅಗ್ರಹಾರ ಕ್ಕೆ ಶಿಫ್ಟ್ ಮಾಡಿದ್ದಾರೆ.

ಸದ್ದಿಲ್ಲದೇ ಬಂದು ಬಲೆಗೆ ಕೆಡವಿದ ಸಿಬಿಐ ಅಧಿಕಾರಿಗಳು

ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಶಾಸಕ ರೋಷನ್ ಬೇಗ್ ಅವರಿಗೆ ಮತ್ತೆ ಸಿಬಿಐ ಬಿಸಿ ಮುಟ್ಟಿಸಿದೆ. ಬೆಳಗ್ಗೆ 11 ಕ್ಕೆ ಬೇಗ್ ಅವರನ್ನು ಸಿಬಿಐ ವಶಕ್ಕೆ ಪಡೆದಿತ್ತು. ವಿಚಾರಣೆ ಬಳಿಕ ಮಾಹಿತಿ ಪಡೆದ ಅಧಿಕಾರಿಗಳು ರೋಷನ್ ಬೇಗ್ ರನ್ನು ಅರೆಸ್ಟ್ ಮಾಡಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ರೋಷನ್ ಬೇಗ್ ಕ್ವಾರಂಟೇನ್ ಸೆಲ್ ಗೆ ಶಿಪ್ಟ್

ಶಿವಾಜಿನಗರ ಕ್ಷೇತ್ರದ ಮಾಜಿ ಶಾಸಕ ರೋಷನ್ ಬೇಗ್ ರನ್ನು ಸುಧೀರ್ಘ ವಿಚಾರಣೆ ನಡೆಸಿದ ಬಳಿಕ ಸೆರೆ ಹಿಡಿಯಲಾಗಿದೆ. ಬೆಳಗ್ಗೆ 11 ರಿಂದ ಬೇಗ್ ರ ವಿಚಾರಣೆ ಪ್ರಾರಂಭ ಮಾಡಿದ ಹೈದರಾಬಾದ್ ವಿಶೇಷ ತನಿಖಾ ತಂಡ
ಕೊರಮಂಗಲದಲ್ಲಿರುವ ಜಡ್ಜ್ ನಿವಾಸದ ಬಳಿ ವಿಚಾರಣೆಗೆ ಹಾಜರು ಪಡಿಸಿತ್ತು. ಸತತ 7 ಗಂಟೆ ವರೆಗೂ ಮಾಹಿತಿ ಕಲೆ ಹಾಕಿ ಬಂಧಿಸಿದ್ದಾರೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸಧ್ಯ ಮಾಜಿ ಶಾಸಕ ರೋಷನ್ ಬೇಗ್ ರನ್ನು ಕ್ವಾರಂಟೇನ್ ಸೆಲ್ ಗೆ ಶಿಪ್ಟ್ ಮಾಡಿದ್ದಾರೆ. ಅಲ್ಲದೇ ರೋಷನ್ ಬೇಗ್ ಗೆ ಮಾಸ್ಕ್, ಸ್ಯಾನಿಟೈಸರ್ ಎಲ್ಲವನ್ನೂ ಅಧಿಕಾರಿಗಳು ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ರೋಷನ್ ಬೇಗ್ ಗೆ ಬಿಪಿ, ಶುಗರ್ ಇದ್ದು, ಜೈಲಲ್ಲೇ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ.

ಬೆಳಗ್ಗಿನಿಂದಲೂ ರೋಷನ್ ಬೇಗ್ ರನ್ನು ಡ್ರಿಲ್ ಮಾಡಿದ ಸಿಬಿಐ ಅಧಿಕಾರಿಗಳಿಗೆ ಅನೇಕ ನಿಖರ ಮಾಹಿತಿ ಸಿಕ್ಕಿದೆ ಎನ್ನಲಾಗುತ್ತಿದೆ. ಐಷಾರಾಮಿ ಕಾರುಗಳೂ ಸೇರಿದಂತೆ ಇನ್ನಿತರ ದುಬಾರಿ ಬೆಲೆಯ ಉಡುಗೊರೆಗಳನ್ನೂ ರೋಷನ್ ಬೇಗ್ ಪಡೆದಿದ್ದಾರೆ ಎಂಬುವುದು ಖಚಿತ ಮಾಹಿತಿ ಸಿಕ್ಕಿವೆ. ಹೀಗಾಗಿಯೇ ಅವರನ್ನು ಬಂಧಿಸಲಾಗಿದೆ. IMA ಕಂಪನಿ ಮತ್ತು ಮನ್ಸೂರ್ ಖಾನ್‌ನಿಂದ ರೋಷನ್ ಬೇಗ್‌ಗೆ ಹಣ ಪಾವತಿಯಾಗಿರುವ ಆರೋಪವಿದೆ. IMA ಹಗರಣದ ಕುರಿತು ಫೋರೆನ್ಸಿಕ್ ಆಡಿಟ್ ನಡೆಸಿದ ವೇಳೆ, ರೋಷನ್ ಬೇಗ್ ಅವರಿಗೆ ಹಣ ಪಾವತಿಯಾಗಿರುವುದು ಕಂಡು ಬಂದಿದೆ. ಇನ್ನೂ ಅನೇಕ ಮಾಹಿತಿ ಕಲೆ ಹಾಕಲು ಸಿಬಿಐ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಇತ್ತ ರಾಜಕೀಯವೂ ಇಲ್ಲ, ಅತ್ತ ಜೈಲೇ ಎಲ್ಲಾ..!

ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳುವ ಕಾರಣಕ್ಕಾಗಿಯೇ ರೋಷನ್ ಬೇಗ್ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂಬ ಆರೋಪ ಕೂಡಾ ಕೇಳಿಬಂದಿತ್ತು. ಆದರೆ, ಟಿಕೆಟ್ ನೀಡದೆ ಕೈಕೊಟ್ಟ ಬಿಜೆಪಿ ನಿಲುವಿನಿಂದ ಬೇಸತ್ತು ಶಿವಾಜಿನಗರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದ ಶಾಸಕ ರೋಷನ್ ಬೇಗ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಸಧ್ಯ ಪರಪ್ಪನ ಅಗ್ರಹಾರದಲ್ಲಿ ಸಿಬಿಐ ಅಧಿಕಾರಿಗಳಿಂದ ಡ್ರಿಲ್ ಗೆ ಒಳಗಾಗಿದ್ದಾರೆ.

LEAVE A REPLY

Please enter your comment!
Please enter your name here