ಮನಸ್ಸಿಗೆ ಬೇಸರವಾದರೇ ಹೊರಬರುವುದು ಬಲು ಕಷ್ಟ. ಅದರಲ್ಲೂ ಪ್ರೀತಿಸಿ ಮೋಸ ಮಾಡಿದರೇ ನಾವು ಹಾಕುವ ಶಾಪ ಮಾತ್ರ ಅಷ್ಟಿಷ್ಟಲ್ಲ. ತಾವು ಪ್ರೀತಿಸುವ ಹುಡುಗಿಯಿಂದ ಮೋಸ ಹೋಗಿರುವ ಹುಡುಗರು ಹುಚ್ಚರಂತೆ ಆಗಿರುವುದನ್ನು ಸಾಕಷ್ಟು ನೋಡಿದ್ದೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಆಗ್ನೇಯ ಚೀನಾದ ಫುಜಿಯಾನ್ ನಲ್ಲಿ ತಾನು ಮದುವೆಯಾಗಬೇಕಾದ ಹುಡುಗಿ ತನಗೆ ಹೇಗೆ ಮೋಸ ಮಾಡಿದ್ದಾಳೆ ಎಂಬುದನ್ನು ಮದುವೆ ಮನೆಯಲ್ಲಿ ವರ ವಿಡಿಯೋ ಸಮೇತ ಅವಳ ಆಟವನ್ನು ಬಯಲು ಮಾಡಿದ್ದಾನೆ.
ಮದುವೆ ಮನೆಯಲ್ಲಿ ವಧುವಾಗಿ ಮಂಟಪದಲ್ಲಿ ನಿಂತಿದ್ದ ಹುಡುಗಿಯು ತನ್ನ ಭಾವನೊಂದಿಗೆ ಸೆಕ್ಸ್ನಲ್ಲಿ ತೊಡಗಿದ್ದ ವಿಡಿಯೋವೊಂದನ್ನು ಮದುವೆ ಮನೆಯಲ್ಲಿ ಹಾಕಲಾಗಿದ್ದ ಬೃಹತ್ ಪರದೆ ಮೇಲೆ ವರನೇ ರಿಲೀಸ್ ಮಾಡಿದ. ಇದೇ ವೇಳೆ ಮದುವೆಗೆ ಆಗಮಿಸಿದ್ದ ಅತಿಥಿಗಳೆಲ್ಲಾ ಇದನ್ನು ಕಂಡು ದಂಗಾಗಿಬಿಟ್ಟಿದ್ದಾರೆ. ಇಷ್ಟೆಲ್ಲಾ ನಡೆದ ಮದುವೆ ಮನೆಯ ಘಟನಾವಳಿಗಳ ವಿಡಿಯೋ ವೈರಲ್ ಆಗಿದೆ.
ಅಕ್ಕನೂ ಗರ್ಭವತಿಯಾಗಿದ್ದ ವೇಳೆ, ತನ್ನ ಭಾವನೊಂದಿಗೆ ದೈಹಿಕ ಸುಖ ಪಡೆಯುತ್ತಿದ್ದ ವಿಡಿಯೋವನ್ನು ಹುಡುಗ ಮದುವೆ ಮನೆಯಲ್ಲಿ ರಿಲೀಸ್ ಮಾಡಿದ್ದಾರೆ. ವಧು ತನ್ನ ಮನೆಯಲ್ಲಿ ಭದ್ರತಾ ಕ್ಯಾಮೆರಾಗಳನ್ನು ಹಾಕಿಸಿದ್ದಳು.
ಮದುಮಗ ಮತ್ತು ಮದುಮಗಳು ಕಳೆದ 2 ವರ್ಷಗಳಿಂದ ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದರು. ಅವರ ಮದುವೆಗೆ ಬಂಧು-ಬಾಂಧವರು ಸಾಕ್ಷಿಯಾಗಿದ್ದರು. ಇಂತಹ ಸಂದರ್ಭದಲ್ಲಿಯೇ ಮದುಮಗ ಪತ್ನಿಯಾಗಬೇಕಿದ್ದವಳ ರಾಸಲೀಲೆಯ ವಿಡಿಯೋವನ್ನು ಮದುವೆ ಹಾಲ್ ನಲ್ಲಿ ಪ್ಲೇ ಮಾಡಿದ್ದಾನೆ. ಈ ಮೂಲಕ ಆಕೆಯ ಬಣ್ಣ ಬಯಲಿಗೆಳೆದಿದ್ದು ಆಕೆಯ ಪಾಡೇನು ಎಂಬುದು ಮಾತ್ರ ಕೈ ಕೈ ಹಿಸಿಕಿಕೊಳ್ಲುವಂತಾಗಿದೆ.