ಕಾಣದ ಪ್ರೇಮ್‍ಗಾಗಿ ಹಂಬಲಿಸಿದ ರೋಮಿಯೋ…ತನ್ನ ನಿಯತ್ತನ್ನು ಪ್ರೂವ್ ಮಾಡಿದ ಶ್ವಾನ

0
283

ಬೀದಿಯಲ್ಲಿರುವ ನಾಯಿಗೆ ನೀವು ಒಮ್ಮೆ ಒಂದು ತುತ್ತು ಅನ್ನ ನೀಡಿ, ಅದು ಎಂದಿಗೂ ನಿಮ್ಮನ್ನು ಮರೆಯುವುದಿಲ್ಲ. ಅಂತದ್ದರಲ್ಲಿ ನೀವು ಸಾಕಿದ , ಪ್ರತಿದಿನ ಅನ್ನ ನೀಡುವ ನಾಯಿ ನಿಮ್ಮನ್ನು ಮರೆಯಲು ಹೇಗೆ ಸಾಧ್ಯ.

 

 

ನೀವು ಪ್ರಾಣಿಗಳನ್ನು ಎಷ್ಟು ಪ್ರೀತಿಸುತ್ತಿರೋ, ಅವೂ ಕೂಡಾ ನಮ್ಮನ್ನು ಅಷ್ಟೇ ಪ್ರೀತಿಯಿಂದ ನೋಡುತ್ತವೆ. ಆದರೆ ಅದು ನಮಗೆ ತಿಳಿಯುವುದಿಲ್ಲ ಅಷ್ಟೇ. ಈ ವಿಡಿಯೋ ನೋಡಿದರೆ ಶ್ವಾನಗಳ ಪ್ರೀತಿ ಏನು ಎಂಬುದು ತಿಳಿಯುತ್ತದೆ. ನಿರ್ದೇಶಕ ಪ್ರೇಮ್ ಹಾಗೂ ನಟಿ ರಕ್ಷಿತ ಮನೆಯಲ್ಲಿ ರೋಮಿಯೋ ಎಂಬ ನಾಯಿ ಇದೆ. ಪ್ರೇಮ್‍ಗಂತೂ ಈ ನಾಯಿ ಎಂದರೆ ಬಹಳ ಇಷ್ಟ. ಸದ್ಯಕ್ಕೆ ಪ್ರೇಮ್ ಮೈಸೂರಿನಲ್ಲಿ ‘ಏಕ್ ಲವ್ ಯಾ’ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಪ್ರೇಮ್ ಸಾಕಿದ ಶ್ವಾನ ಅವರಿಗಾಗಿ ಮನೆಯೆಲ್ಲಾ ಹುಡುಕಾಡಿದೆ.

 

 

ಈ ವಿಡಿಯೋವನ್ನು ರಕ್ಷಿತ ರೆಕಾರ್ಡ ಮಾಡಿದ್ದಾರೆ. ರಕ್ಷಿತಾ ಅವರು ಪ್ರೇಮ್ ಹೆಸರು ಹೇಳಿದರೆ ಸಾಕು, ಈ ಶ್ವಾನ ತನ್ನ ಯಜಮಾನ ಬಂದನೇನೋ ಎನ್ನುತ್ತಾ ಮನೆಯೆಲ್ಲಾ ಹುಡುಕಾಡಿದೆ. ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಪ್ರೇಮ್,’ಜನರೇಷನ್ ಬದಲಾದರೂ…ಎಮೋಷನ್ಸ್ ಮಾತ್ರ ಯಾವತ್ತೂ ಬದಲಾಗುವುದಿಲ್ಲ, ನಾನು ಮೈಸೂರಲ್ಲಿ ಶೂಟಿಂಗ್​​​ನಲ್ಲಿದ್ದೇನೆ. ಆದರೆ ಮನೆಯಲ್ಲಿ ನಮ್ ರೋಮಿಯೋ ಪಾಪ ನನ್ನ ಹುಡುಕುತ್ತಿದ್ದಾನೆ. ‘ನಿಯತ್ತಿಗೆ ಇನ್ನೊಂದ್ ಹೆಸರೇ ನಾಯಿ ಅನ್ನೋ ಮಾತನ್ನು ರೋಮಿಯೋ ನಿಜ ಮಾಡಿದ್ದಾನೆ ಎಂದಿದ್ದಾರೆ.

 

 

LEAVE A REPLY

Please enter your comment!
Please enter your name here