ರೋಹಿಣಿ ಮುಂದ್ರ ರವರ ದಿ 1% ಕ್ಲಬ್ ಪುಸ್ತಕ ಲೋಕಾರ್ಪಣೆ

0
141

ರೋಹಿಣಿ ಮುಂದ್ರ ಅವರ ಪುಸ್ತಕ “ದಿ 1% ಕ್ಲಬ್” ಬೆಂಗಳೂರಿನಲ್ಲಿ ಇಂದು ಅನಾವರಣಗೊಂಡಿತು. ಅತ್ಯುತ್ತಮ ಭಾಷಣಕಾರ್ತಿಯಾಗಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವಿಶೇಷ ವಿಚಾರ ಸಂಕಿರಣಗಳ ಮೂಲಕ ಪ್ರಖ್ಯಾತಿಯಾಗಿರುವ ರೋಹಿಣಿ ಮುಂಡ್ರಾ ತನ್ನ ಮೊದಲ ಪುಸ್ತಕ “ದಿ 1% ಕ್ಲಬ್” ಅನ್ನು ಬೆಂಗಳೂರಿನ ಹೋಟೆಲ್ ರಾಯಲ್ ಆರ್ಕಿಡ್ಸ್ ನಲ್ಲಿ ಬಿಡುಗಡೆ ಮಾಡಿದರು. ಈ ಮೂಲಕ ಉದಯೋನ್ಮುಖ ಲೇಖಕಿಯಾಗಿ ಹೊರಹೊಮ್ಮಿದ್ದು, ಇದು ಇವರ ಸಾಧನೆಯ ಮತ್ತೊಂದು ಗರಿಯಾಗಿ ಸೇರ್ಪಡೆಯಾಗಿದೆ.

ರೋಹಿಣಿ ಮುಂದ್ರ ರವರ ಪುಸ್ತಕವನ್ನು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಾರ್ಯಕರ್ತ ಡಾ.ಅಕ್ಕೈ ಪದ್ಮಶಾಲಿ ಅನಾವರಣಗೊಳಿಸಿದರು ಮತ್ತು ಈ ಸಮಾರಂಭದಲ್ಲಿ ಶ್ರೀ.ಕರುಣಾ ವಿಜಯಕುಮಾರ್ ಜೈನ್, (ಭಾರತೀಯ ಅಂತರರಾಷ್ಟ್ರೀಯ ಕ್ರಿಕೆಟಿಗ) ರವರು ರೋಹಿಣಿ ಮುಂದ್ರ ಅವರ ಪುಸ್ತಕ ಮತ್ತು ಅವರು ನಡೆದುಬಂದ ದಾರಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಕೆಪಿಸಿಸಿಯ ಅತ್ಯುತ್ತಮ ಶಿಕ್ಷಣ ತಜ್ಞ ಮತ್ತು ಪ್ರಧಾನ ಕಾರ್ಯದರ್ಶಿ ಅಗಾ ಸುಲ್ತಾನ್ ಸಹ ಈ ಪುಸ್ತಕ ಬಿಡುಗಡೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಡಾ.ಅಕ್ಕೈ ಪದ್ಮಶಾಲಿಯವರು ರೋಹಿಣಿ ರವರ ಈ ಪ್ರಯತ್ನವನ್ನು ಶ್ಲಾಘಿಸಿದರು. ಆರಂಭಿಕ ಹಂತಗಳಲ್ಲಿನ ತನ್ನ ವೈಫಲ್ಯಗಳನ್ನು ಅನುಭವಗಳಾಗಿ ಪರಿವರ್ತಿಸಿ ಓದುಗರಿಗೆ ಅವರ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಪ್ರೇರಣೆ ನೀಡುವಂತಹ ಬರಹಗಳನ್ನು ಈ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ನುಡಿದರು. ಈ ಸಮಾರಂಭದಲ್ಲಿ ಅವರು ತಮ್ಮ ಆರ್ ಎಂ ಫೌಂಡೇಶನ್ ಅನ್ನು ಉದ್ಘಾಟಿಸಿದರು. ತನ್ನ ಆರ್‌ಎಂ ಫೌಂಡೇಶನ್ ಸಮಾಜದ ದೀನ ದಲಿತರಿಗಾಗಿ ಕೆಲಸ ಮಾಡುತ್ತದೆ ಎಂದು ಅವರು ಅಧಿಕೃತವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಒಟ್ಟು ಆದಾಯದ 40% ಆರ್‌ಎಂ ಫೌಂಡೇಶನ್‌ಗೆ ದೇಣಿಗೆ ನೀಡುವುದಾಗಿ ಅವರು ಘೋಷಿಸಿದರು.

ರೋಹಿಣಿ ತನ್ನ ಕುಟುಂಬ ಮತ್ತು ತಂಡದ ಸದಸ್ಯರನ್ನು ನೆನಪಿಸಿಕೊಳ್ಳುತ್ತಾ ಪೋಷಕರಿಗೆ ವಿಶೇಷ ಧನ್ಯವಾದಗಳನ್ನು ಈ ಸಮಾರಂಭದ ಮೂಲಕ ತಿಳಿಸಿದರು. ಒಂದು ಒಳ್ಳೆಯ ಪುಸ್ತಕ 100 ಸ್ನೇಹಿತರಿಗೆ ಸಮಾನವಾಗಿರುತ್ತದೆ ಎಂದು ಈ ಸಂದರ್ಭದಲ್ಲಿ ನುಡಿದರು.

LEAVE A REPLY

Please enter your comment!
Please enter your name here