ರಾಕಿಂಗ್ ಸ್ಟಾರ್ ಕಂಡರೆ ಅಭಿಮಾನಿಗಳು ಪ್ರೀತಿಯಿಂದ ಕೊಂಡಾಡಲು ಕಾರಣವೇನು.?

0
150

ಕನ್ನಡ ಚಿತ್ರರಂಗವನ್ನು ಬೇರೆ ಭಾಷೆಯ ಚಿತ್ರರಂಗದವರು ಮಾತ್ರವಲ್ಲದೇ ಇಡೀ ಭಾರತ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದಂತ ಏಕೈಕ ಕಲಾವಿದ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್. ಹೌದು, ಕನ್ನಡ ಸಿನಿಮಾಗಳ ಬಗ್ಗೆ ಬಹಳ ಕೇವಲವಾಗಿ ಮಾತನಾಡುತ್ತಿದ್ದ ಹಲವು ಭಾಷೆಗಳ ತಂತ್ರಜ್ಞರು, ಕಲಾವಿದರಿಗೆ ಕನ್ನಡ ಭಾಷೆ, ಕನ್ನಡ ಸಿನಿಮಾ ಎಂದರೇನು ಅದರ ತಾಕತ್ತು ಎಂಥದ್ದು ಎಂಬುದನ್ನು ತಮ್ಮ ಮಾತಿನಲ್ಲಿ ತಿಳಿಸದೇ ತಮ್ಮ ನಟನೆ, ಕಾರ್ಯ ವೈಖರಿಯ ಮೂಲಕ ಅನ್ಯರಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡಿದ್ದು ಇದೇ ರಾಕಿ ಬಾಯ್.! ವಿಶೇಷವಾಗಿ ಕೆಜಿಎಫ್ ಚಾಪ್ಟರ್ 1 ಸಿನಿಮಾ ಮೂಲಕ.

 

 

ಕೆಜಿಎಫ್ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅವರ ಸಿನಿ ಜೀವನದಲ್ಲಿ ದೊಡ್ಡ ಮಹತ್ವದ ತಿರುವು ತಂದುಕೊಟ್ಟ ಸಿನಿಮಾ ಎಂದರೆ ತಪ್ಪಾಗಲಾರದು. 2008 ರಲ್ಲಿ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಪೂರ್ಣ ನಾಯಕ ನಟನಾಗಿ ಹೊರ ಹೊಮ್ಮಿದ ಯಶ್ ತಮ್ಮ ಚೊಚ್ಚಲ ಸಿನಿಮಾದಲ್ಲಿಯೇ ಪ್ರೇಕ್ಷಕರ ಮನಸ್ಸನ್ನು ಗೆದ್ದರು. ಸಿನಿಮಾದಲ್ಲಿ ನಟನಾಗಬೇಕು ಎಂಬ ಮಹಾದಾಸೆಯನ್ನು ಹೊತ್ತುಕೊಂಡಿದ್ದ ಯಶ್ ಅವರು ಏಕಾಏಕಿ ಯಾರಿಂದಲೋ ನಾಯಕನಾಗಿ ನಟಿಸಲಿಲ್ಲ.! ಮೊಗ್ಗಿನ ಮನಸ್ಸು ಚಿತ್ರದಲ್ಲಿ ನಟಿಸುವ ಮುನ್ನ ಧಾರವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಯಶ್ ನಟಿಸುತ್ತಿದ್ದರು. ಯಾವುದೇ ಚಿಕ್ಕ ಪಾತ್ರಗಳು ಸಿಕ್ಕರು ಅದನ್ನು ದೊಡ್ಡ ಪಾತ್ರ ಹಾಗೂ ನನಗೆ ಸಿಕ್ಕ ಅತ್ಯುತ್ತಮ ಅವಕಾಶ ಎಂದು ನಟಿಸಿ ಆ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದರು.

 

 

ಕಿರುತೆರೆಯಲ್ಲಿ ಮೂಡಿಬರುತ್ತಿದ್ದ ಆನೇಕ ಜನಪ್ರಿಯ ಧಾರವಾಹಿಗಳಲ್ಲಿ ಯಶ್ ಅವರಿಗೆ ನಿರ್ದೇಶಕರು ಅತಿಥಿ ಪಾತ್ರಗಳನ್ನು ಕೊಟ್ಟಾಗ ಅದನ್ನು ಖುಷಿಯಿಂದ ಸ್ವೀಕರಿಸಿ ನಟಿಸುತ್ತಿದ್ದರು. ಇದಕ್ಕೆ ಅದ್ಭುತ ಉದಾಹರಣೆ ಎಂದರೆ ಈ ಟಿವಿ ಕನ್ನಡದಲ್ಲಿ ಬಹಳ ಜನಪ್ರಿಯತೆ ಪಡೆದುಕೊಂಡು ಮೂಡಿಬರುತ್ತಿದ್ದ ಸಿಲ್ಲಿ-ಲಲ್ಲಿ ಕಾಮಿಡಿ ಧಾರವಾಹಿಯಲ್ಲಿ ನಟಿಸುತ್ತಿದ್ದರು. ಯಾವುದೇ ಪಾತ್ರವನ್ನು ಕೊಟ್ಟರು ಆ ಪಾತ್ರ ನನ್ನಗೆ ಹೇಳಿ ಮಾಡಿಸಿದ್ದು ಎಂಬ ಆಲೋಚನೆಯಿಂದ ನಟಿಸಿ ಪ್ರತಿಯೊಬ್ಬರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದರು. ಅ ನಂತರ ಅದೇ ಈ ಟಿವಿ ಚಾನೆಲ್ ನಲ್ಲಿ ಆಶೋಕ್ ಕಶ್ಯಪ್ ನಿರ್ದೇಶನದಲ್ಲಿ ಮೂಡಿಬಂದ ನಂದಗೋಕುಲ ಧಾರವಾಹಿಯಲ್ಲಿ ಯಶ್ ಅವರು ನಾಯಕನಾಗಿ ನಟಿಸುತ್ತಾರೆ.

 

 

ದಿನಗಳು ಉರುಳಿದಂತೆ ಯಶ್ ಕೂಡ ಹಲವು ಧಾರವಾಹಿಗಳಲ್ಲಿ ನಟಿಸಿ ತಮ್ಮ ನಟನಾ ಕೌಶಲ್ಯಗಳನ್ನು ಪ್ರದರ್ಶಿಸುತ್ತ ಚಿತ್ರ ನಿರ್ದೇಶಕ, ನಿರ್ಮಾಪಕರ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ. 2008 ರಲ್ಲಿ ಯಶ್ ಅವರನ್ನು ತಮ್ಮ ಸಿನಿಮಾಗೆ ನಾಯಕನಾಗಿ ಮಾಡಿಕೊಳ್ಳಬೇಕು ಎಂದು ನಿರ್ದೇಶಕ ಶಶಾಂಕ್ ಅವರು ಯಶ್ ಅವರನ್ನು ಮೊಗ್ಗಿನ ಮನಸ್ಸು ಚಿತ್ರಕ್ಕೆ ನಾಯಕನಾಗಿ ಆಯ್ಕೆ ಮಾಡುತ್ತಾರೆ. ಅಂದು ಯಶ್ ಅವರು ನಾಯಕನಾಗಿ ನಟಿಸಲು ಅರಂಭಿಸಿದವರು ಇಂದಿಗೂ ಕೂಡ ಉತ್ತಮ ಚಿತ್ರಗಳನ್ನು ಸಿನಿ ಪ್ರೇಕ್ಷಕರಿಗೆ ನೀಡುವ ಮೂಲಕ ನಟಿಸುವ ವೃತ್ತಿಯನ್ನು ಯಶ್ `ಯಶಸ್ವಿ’ಯಾಗಿ ಮುಂದುವರೆಸುತ್ತಿದ್ದಾರೆ. ಸಾಮಾನ್ಯ ಮಧ್ಯಮ ಕುಟುಂಬ ವರ್ಗದಲ್ಲಿ ಹುಟ್ಟಿದ ಯಶ್ ಅವರು ಬಹಳ ಕಷ್ಟಪಟ್ಟು ಜನಸಾಮಾನ್ಯರ ಮಧ್ಯೆ ಶ್ರಮಿಸಿ ಬಂದವರು.

 

 

ಹುಟ್ಟಿನಿಂದಲೂ ಬಹಳ ಉತ್ಸಾಹಿ ಆಗಿದ್ದ ಯಶ್ ಅವರು ಪ್ರತಿಯೊಂದು ಕೆಲಸದಲ್ಲಿ ಬಹಳ ಚುರುಕಾಗಿ ಕಾರ್ಯ ನಿರ್ವಹಸುತ್ತಿದ್ದರು. ಅಂತಯೇ ಇಂದು ಯಶ್ ಅವರು ಆದೇ ಶ್ರದ್ಧೆ, ನಿಷ್ಠೆ, ಭಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ಯಾವುದು ಅವರ ಕೆಲಸದಲ್ಲಿ ಕಿಂಚಿತ್ತು ಕಡಿಮೆಯಾಗಿಲ್ಲ. ಯಶ್ ಅವರಿಗೆ ಸಿನಿಮಾ ರಂಗದಲ್ಲಿ ಮತ್ತಷ್ಟು ಹೈಪ್ ಕೊಟ್ಟಂತ ಸಿನಿಮಾ ಎಂದರೆ ಅದು ಮಿಸ್ಟರ್ ಅಂಡ್ ಮಿಸೆಸ್ಸ್ ರಾಮಾಚಾರಿ ಚಿತ್ರ.! ಈ ಚಿತ್ರದಲ್ಲಿ ಯಶ್ ಅವರ ಅಭಿನಯಕ್ಕೆ, ಡೈಲಾಗ್ ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಜೊತೆಗೆ ಈ ಸಿನಿಮಾ ಅತಿಹೆಚ್ಚು ಲಾಭವನ್ನು ತಂದುಕೊಟ್ಟ ಕನ್ನಡ ಸಿನಿಮಾವಾಗಿತ್ತು. ಇದರ ಜೊತೆಯಲ್ಲೇ ಕನ್ನಡ ಸಿನಿಮಾ ನಟರ ಪೈಕಿ ಯಶ್ ಅವರು ಅತಿ ಹೆಚ್ಚು ಸಂಭಾವನೆ ಪಡೆದ ನಟರಾಗುತ್ತಾರೆ.

 

 

ಪ್ರತಿಯೊಂದು ಸಿನಿಮಾದಲ್ಲೂ ವಿಶೇಷವಾಗಿ ಪಾತ್ರಗಳನ್ನು ಅರಿಸಿಕೊಳ್ಳುತ್ತಿದ್ದ ಯಶ್ ಅವರು ಕನ್ನಡ ಚಿತ್ರರಂಗವನ್ನು ಬೇರೆ ಭಾಷೆಯ ಚಿತ್ರರಂಗದವರು ತಿರುಗಿ ನೋಡಬೇಕು ಎಂದು ಪ್ರತಿಭಾರಿ ಒಂದಲ್ಲ ಒಂದು ಸಂದರ್ಶನಗಳಲ್ಲಿ ಹೇಳಿಕೊಳ್ಳತ್ತಿದ್ದರು. ಅದರಂತಯೇ ಯಶ್ ಅವರು ತಮ್ಮ ಕನಸ್ಸನ್ನು ದೊಡ್ಡ ಮಟ್ಟದಲ್ಲಿ ನನಸ್ಸು ಮಾಡಬೇಕು ಎಂದು ದಿಟ್ಟ ಹೆಜ್ಜೆ ಇಡುತ್ತಾರೆ. ಅದೇ ಕೆಜಿಎಫ್ ಚಾಪ್ಟರ್ 1 ಸಿನಿಮಾ.! ಇಂದು ಕೆಜಿಎಫ್ ಸಿನಿಮಾ ಭಾರತದ ಪ್ರತಿಯೊಂದು ಭಾಷೆಯ ಸಿನಿಮಾ ರಂಗದವರು ಕೂಡ ನೋಡುವಂತೆ ಮಾಡಿದೆ. ಕನ್ನಡ ಸಿನಿಮಾದ ತಂತ್ರಜ್ಞರ ಕೆಲಸ, ಚಾತುರ್ಯತೆ ಪ್ರತಿಯೊಬ್ಬ ಕಲಾವಿದನ ಶ್ರಮದ ಬಗ್ಗೆ ಮಾತನಾಡುವೆ ಹಾಗೆ ಮಾಡಿದೆ.

 

 

ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುವ ಹಾಗೆ ಮಾಡಿದ್ದು, ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ತಂಡ. ಯಶ್ ಅವರು ಕೊಟ್ಟಂತ ಮಾತು, ಇಟ್ಟಂತ ಹೆಜ್ಜೆಯನ್ನು ಯಾವತ್ತು ಹಿಂತೆಗೆದಿಲ್ಲ.! ಅದನ್ನು ಅವರು ಪರಿಪೂರ್ಣವಾಗಿ ಯಶಸ್ಸು ಮಾಡಿಕೊಂಡಿದ್ದಾರೆ. ಅವರ ಕೆಲಸಕ್ಕೆ ತಕ್ಕ ಬೆಂಬಲ ನೀಡಿ ಅವರನ್ನು ಹಂತ ಹಂತವಾಗಿ ಪ್ರೋತ್ಸಾಹಿಸುವ ಮೂಲಕ ಸಾಥ್ ನೀಡಿದ್ದು ಕನ್ನಡಿಗರು. ಯಶ್ ಅವರು ಬರಿ ಸಿನಿಮಾಗಳನ್ನು ಮಾಡುವುದಲ್ಲದೇ ಪ್ರಗತಿಪರ ರೈತಾಪಿ ವರ್ಗದವರೊಡನೆ ನಿಂತು ಅವರಿಗೆ ಸಹಾಯವಾಗಲಿ ಎಂಬ ಚಿಂತನೆಯಿಂದ ಯಶೋ ಮಾರ್ಗ ಸ್ಥಾಪಿಸಿ ಕರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡುತ್ತಾರೆ. ಇದರಲ್ಲಿ ಯಶ್ ಅವರ ಮಹತ್ವ ಉದ್ದೇಶಗಳನು ನಾವು ಗಮನಿಸಬಹುದು.

 

 

ಸದಾ ಸಾಮಾಜಿಕ ಕಳಕಳಿ ಇಟ್ಟುಕೊಂಡು ಕೆಲಸ ಮಾಡುವ ಯಶ್ ಅವರು ಇಂದು ಅಭಿಮಾನಿಗಳ ನೆಚ್ಚಿನ ನಾಯಕನೂ ಹೌದು, ನೆಚ್ಚಿನ ಸಾಮಾನ್ಯ ಮನುಷ್ಯರು ಕೂಡ ಹೌದು. ಯಶ್ ಅವರು ಕನ್ನಡ ಚಿತ್ರರಂಗವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು, ನಮ್ಮ ಕನ್ನಡ ಭಾಷೆಯ ಸಿನಿಮಾಗಳಿಗೂ ಪ್ರಾಮುಖ್ಯತೆ ಸಿಗಬೇಕು ಎಂಬ ನಿಟ್ಟಿನಲ್ಲಿ ಅವರು ನಿರ್ವಹಿಸುತ್ತಿರುವ ಕೆಲಸಗಳಿಗೆ ಕನ್ನಡಿಗರಾಗಿ ನಾವು ಒಂದು ಸಾಥ್ ನೀಡೋಣ. ಯಶ್ ಎಂಬ ಹೆಸರು ಬರಿ ಹೆಸರಲ್ಲ.! ಬದಲು ಕನ್ನಡ ಭಾಷೆಯನ್ನು ಕಟ್ಟುವ ಕೆಲಸದ ಹೊಸ್ತಿಲಲ್ಲಿ ನಿಂತಿರುವ ಪ್ರಮುಖ ಹೆಸರು.! ಸದ್ಯ ಕೆಜಿಎಫ್ 2 ಚಿತ್ರದಲ್ಲಿ ನಿರತರಾಗಿರುವ ಯಶ್ ಅವರು ನರಾಚಿಯ ದೊರೆಯಾಗಿ ಈ ವರ್ಷ ಕನ್ನಡ ಚಿತ್ರರಂಗವನ್ನು ದೇಶದೆಲ್ಲೆಡೆ ಮತ್ತೊಮ್ಮೆ ಪ್ರದರ್ಶಿಸಲಿದ್ದಾರೆ.

 

 

ನರಾಚಿಯ ದೊರೆಯಾಗಿ ಯಶ್ ನಿಂತುಕೊಳ್ಳಲಿದ್ದು, ಕನ್ನಡಕ್ಕೆ ಮತ್ತೊಂದು ಕಿರೀಟವನ್ನು ತಂದುಕೊಡಲಿದ್ದಾರೆ ಎಂಬುದು ಸತ್ಯ. ಯಶ್ ಅವರ ಕೆಜಿಎಫ್ 2 ಚಿತ್ರ ಯಶಸ್ವಿಯಾಗಲಿ ಎಂಬುದು ನಮ್ಮ ಶುಭ ಹಾರೈಕೆ ಹಾಗೂ ಇಂದು ಯಶ್ ಅವರು ತಮ್ಮ 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರು ಮತ್ತಷ್ಟು ಉತ್ತಮ ಸಿನಿಮಾಗಳನ್ನು, ಸಮಾಜಮುಖಿ ಕೆಲಸಗಳನ್ನು ಮಾಡಲಿ ಎಂಬುದು ನಮ್ಮ ಆಶಯ. ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

LEAVE A REPLY

Please enter your comment!
Please enter your name here