ರಾಬರ್ಟ್​ ಸಿನಿಮಾದ ಮರಿ ಟೈಗರ್ ಲುಕ್ ರಿವೀಲ್

0
258

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ವರ್ಷ ಒಂದರ ಮೇಲೊಂದು ಸಿನಿಮಾಗಳನ್ನು ಕೊಡ್ತಿದ್ದಾರೆ. ವರ್ಷದ ಆರಂಭದಲ್ಲಿ ‘ಯಜಮಾನ’ನಾಗಿ ಸದ್ದು ಮಾಡಿದ್ದ ದರ್ಶನ್ ಸದ್ಯ ‘ಕುರುಕ್ಷೇತ್ರ’ದ ಸುಯೋಧನನಾಗಿ ಅಬ್ಬರಿಸುತ್ತಿದ್ದಾರೆ. ಕುರುಕ್ಷೇತ್ರದ ಕಲೆಕ್ಷನ್ ಬರೋಬ್ಬರಿ 100 ಕೋಟಿ ದಾಟಿದ್ದರಿಂದ ದಚ್ಚುಗೆ ಶತಕೋಟಿ ಸರ್ದಾರ ಅನ್ನೋ ಹೊಸ ಬಿರುದೂ ಸಿಕ್ಕಿದೆ. ಶತಕೋಟಿ ಸರ್ದಾರ ದಚ್ಚು ಅಭಿನಯದ ‘ಒಡೆಯ’ ಸಿನಿಮಾ ದೀಪಾವಳಿ ಹಬ್ಬದ ಜೋಷ್ ಹೆಚ್ಚಿಸಲು ಬರಲಿದೆ ಎನ್ನಲಾಗುತ್ತಿದೆ. ಒಡೆಯ ರಿಲೀಸ್ ಆದ್ರೆ ಈ ವರ್ಷ ಡಿ.ಬಾಸ್ ಅಭಿನಯದ 3 ಸಿನಿಮಾಗಳು ತೆರೆಕಂಡಂತಾಗುತ್ತೆ.

ಈ ನಡುವೆ ದಚ್ಚು ತಮ್ಮ ಸಿನಿ ಹಬ್ಬದೂಟದ ರುಚಿ ಹೆಚ್ಚಿಸಲು ಸೈಡ್ಸ್ ರೂಪದಲ್ಲಿ ಹೊಸ ಹೊಸ ಸಿನಿಮಾಗಳ ಸುದ್ದಿಯನ್ನು ನೀಡ್ತಿದ್ದಾರೆ. ದರ್ಶನ್ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ… ಆ ಸಿನಿಮಾಗಳಲ್ಲಿ ರಾಬರ್ಟ್ ಸಿನಿಮಾ ಕೂಡ ಒಂದು. ಡೈರೆಕ್ಟರ್ ತರುಣ್ ಸುದೀರ್ ಮತ್ತು ದಚ್ಚು ಕಾಂಬಿನೇಷನ್​ನ ಹೈ ಬಜೆಟ್ ಮೂವಿ ರಾಬರ್ಟ್​ನಲ್ಲಿ ಜಗಪತಿ ಬಾಬು, ವಿನೋದ್ ಪ್ರಭಾಕರ್ ಮತ್ತಿತರ ಸ್ಟಾರ್​ಗಳು ಸಹ ಇದ್ದಾರೆ. ಡಿ.ಬಾಸ್​ ಗೆ ಜೋಡಿಯಾಗಿ ಆಶಾಭಟ್ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಿದ್ದಾರೆ.

ಮುಖ್ಯವಾಗಿ ಈ ಹಿಂದೆ ವಿನೋದ್ ಪ್ರಭಾಕರ್, ದರ್ಶನ್ ಜೊತೆಗಿನ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ, ವಿನೋದ್ ಲುಕ್ ಹೇಗಿರುತ್ತೆ ಅನ್ನೋದು ಕನ್ಫರ್ಮ್​ ಆಗಿರ್ಲಿಲ್ಲ. ಈಗ ಮರಿ ಟೈಗರ್ ಲುಕ್ ರಿವೀಲ್ ಆಗಿದೆ. ವಿನೋದ್ ಪ್ರಭಾಕರ್ ಕಿವಿಯಲ್ಲಿ ಟಿಕ್ಕಿ, ಹಾಕಿಕೊಂಡು, ಗಡ್ಡ ಬಿಟ್ಟಿರೋ, ಬ್ಲೇಡ್​ ಹೆಡ್​ ಕಟ್ ಹೇರ್​ಸ್ಟೈಲ್​ನಲ್ಲಿರುವ ಫೋಟೋ ರಿಲೀಸ್ ಆಗಿದ್ದು, ಸಖತ್ತಾಗಿ ಕಾಣ್ತಿದ್ದಾರೆ. ವಿನೋದ್ ಹೊಸ ಲುಕ್​ಗೆ ಫ್ಯಾನ್ಸ್​​ ಫುಲ್ ಫಿದಾ ಆಗಿದ್ದಾರೆ.

ಇನ್ನು ದರ್ಶನ್ ಕೂಡ ಡಬಲ್ ಶೇಡ್​ನಲ್ಲಿ ಕಾಣಿಸಿಕೊಳ್ತಿದ್ದು, ಸದ್ಯ ದರ್ಶನ್ ಮತ್ತು ನಾಯಕಿ ಆಶಾ ಭಟ್​ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿದೆ. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here