ರಿಷಿ ಕಪೂರ್ ಭಾನುವಾರ ಶೂಟಿಂಗ್’ಗೆ ಹೋಗುತ್ತಿರಲಿಲ್ಲ, ಯಾಕೆ ಗೊತ್ತಾ?

0
225

ನಟ ರಿಷಿ ಕಪೂರ್ ದೇಶ ಕಂಡ ಅದ್ಭುತ ಕಲಾವಿದ. ಅವರು ನಡೆಯಲು ಪ್ರಾರಂಭಿಸಿದಾಗ ಕನ್ನಡಿಯ ಮುಂದೆ ವಿವಿಧ ರೀತಿಯ ಹಾವಭಾವಗಳನ್ನು ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಸೆಪ್ಟೆಂಬರ್ 4 ರಂದು ಜನಿಸಿದ ರಿಷಿ ಕಪೂರ್, ತಮ್ಮ 50 ವರ್ಷಗಳ ಚಲನಚಿತ್ರ ವೃತ್ತಿಜೀವನದಲ್ಲಿ ಒಂದಕ್ಕಿಂತ ಒಂದು ದೊಡ್ಡ ಚಲನಚಿತ್ರಗಳನ್ನು ಮಾಡಿದರು. ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ಪಡೆದರು. ಅಂದಹಾಗೆ ಇಲ್ಲಿ ರಿಷಿ ಕಪೂರ್ ಬಗ್ಗೆ ಕೆಲವು ವಿಶೇಷ ವಿಷಯಗಳನ್ನು ಕೊಡಲಾಗಿದೆ ಓದಿ…


ರಿಷಿ ಕಪೂರ್ ಭಾನುವಾರ ಕೆಲಸ ಮಾಡಲಿಲ್ಲ
ರಿಷಿ ಕಪೂರ್ ಚಿಕ್ಕಪ್ಪ ಶಶಿ ಕಪೂರ್ ಅವರಂತೆ ಮಾಡಲಿಲ್ಲ. ಭಾನುವಾರ ಅವರು ತಮ್ಮ ಸಮಯವನ್ನು ಕುಟುಂಬಕ್ಕೆ ಮೀಸಲಿಡುತ್ತಿದ್ದರು. ಆದರೆ ಶಶಿ ಕಪೂರ್ಗಿಂತ ಭಿನ್ನವಾಗಿದ್ದರು. ತುಂಬಾ ಶಿಸ್ತಿನ ತಂದೆಯಾಗಿದ್ದರು. ಅವರ ಮಕ್ಕಳೊಂದಿಗೆ ಬಹಳ ಕಡಿಮೆ ಮಾತನಾಡುತ್ತಿದ್ದರು. ರಿಷಿ ಕಿರಿಯವನಾಗಿದ್ದಾಗಲೂ ಕೂಡ ತಂದೆಯ ಮುಂದೆ ಸದ್ದು ಮಾಡಲಿಲ್ಲ.


ಉಡುಗೊರೆಗಳನ್ನು ಕೊಡುವುದು ಇಷ್ಟವಿರಲಿಲ್ಲ
ರಿಷಿ ಸ್ವಲ್ಪ ಜಿಪುಣನೆಂದು ಗುರುತಿಸಿಕೊಂಡಿದ್ದರು. ಜನರಿಗೆ ಉಡುಗೊರೆಗಳನ್ನು ಕೊಡುವುದು ಅವರಿಗೆ ಇಷ್ಟವಿರಲಿಲ್ಲ. ಅವರ ಮಗ ರಣಬೀರ್ಗೆ 16 ವರ್ಷ ವಯಸ್ಸಾಗಿದ್ದಾಗ ಅವರು ತಮ್ಮ ತಾಯಿಯ ಬಳಿ ಕಾರು ಕೇಳಿದರು. ಆಗ ರಿಷಿ ರಣಬೀರ್ಗೆ ನೀನು ಇನ್ನು ಕಾರು ಕೊಳ್ಳುವ ವಯಸ್ಸಿಗೆ ಬಂದಿಲ್ಲ ಎಂದು ಹೇಳಿದ್ದರು. ಅವರಿಗೆ ತಮ್ಮ ಮಕ್ಕಳನ್ನು ಹಾಳು ಮಾಡಲು ಇಷ್ಟವಿರಲಿಲ್ಲ. ಈಗ ಅವರ ಮಕ್ಕಳಾದ ರಿದ್ಧಿಮಾ ಮತ್ತು ರಣಬೀರ್ ಅವರು ತಮ್ಮ ಕಾಲುಗಳ ಮೇಲೆ ತಾವು ನಿಂತಿದ್ದಾರೆಂದರೆ ಅದಕ್ಕೆ ರಿಷಿ ಅವರೇ ಕಾರಣ.


ರಿಷಿ ಕಪೂರ್ ಸ್ವಲ್ಪ ಜಿಪುಣನಾಗಿದ್ದರು
ನೀತು ಸಿಂಗ್ ಒಮ್ಮೆ ರಿಷಿ ಕಪೂರ್ ಅವರ ಬಗ್ಗೆ ಒಂದು ಕುತೂಹಲಕಾರಿ ವಿಷಯವನ್ನು ಹೇಳಿದರು “ಚಿಂಟು ಊಟದ ವಿಚಾರದಲ್ಲಿ ನಮಗೆ ಯಾವತ್ತು ಕಡಿಮೆ ಮಾಡುತ್ತಿರಲಿಲ್ಲ. ನಾವು ನ್ಯೂಯಾರ್ಕ್ಗೆ ಹೋದಾಗ ಅವರು ನನ್ನನ್ನು ದುಬಾರಿ ರೆಸ್ಟೋರೆಂಟ್’ಗಳಿಗೆ ಕರೆದೊಯ್ಯುತ್ತಿದ್ದರು ಎಂಬುದು ಈಗಲೂ ನನಗೆ ನೆನಪಿದೆ. ನೂರಾರು ಡಾಲರ್’ಗಳನ್ನು ಖರ್ಚು ಮಾಡುತ್ತಿದ್ದರು. ಆದರೆ ಅವರು ತಮ್ಮ ಹಣವನ್ನು ಸಣ್ಣಪುಟ್ಟ ಕೆಲಸಗಳಿಗೆ ಖರ್ಚು ಮಾಡುತ್ತಿದ್ದರು. ಒಮ್ಮೆ ನ್ಯೂಯಾರ್ಕ್ನ ನನ್ನ ಅಪಾರ್ಟ್ಮೆಂಟ್ಗೆ ಹಿಂದಿರುಗಿದಾಗ, ನಾನು ಬೆಳಿಗ್ಗೆ ಚಹಾಕ್ಕಾಗಿ ಒಂದು ಬಾಟಲ್ ಹಾಲನ್ನು ಖರೀದಿಸಲು ಬಯಸಿದ್ದೆ. ಆದರೆ ಮಧ್ಯರಾತ್ರಿ ಚಿಂಟು ದೂರದ ಅಂಗಡಿಯೊಂದಕ್ಕೆ ಹೋಗಿ ಹಾಲನ್ನು ಖರೀದಿ ಮಾಡಿದ್ದರು. ಏಕೆಂದರೆ ಅಲ್ಲಿ ಹಾಲು ನಾವಿರುವ ಜಾಗಕ್ಕಿಂತ ಕಡಿಮೆ ಬೆಲೆಯಲ್ಲಿ ದೊರಕುತ್ತಿತ್ತು” ಎಂದು ತಿಳಿಸಿದರು.

ಕಪೂರ್ ಕುಟುಂಬದ ಅತ್ಯಂತ ಭರವಸೆಯ ನಟ
ರಿಷಿ ಕಪೂರ್ ಅವರು ನಟನಾಗಿ ನಟಿಸುವ ಪಾತ್ರಗಳಿಗೆ ಯಾವಾಗಲೂ ನ್ಯಾಯ ಒದಗಿಸಿದ್ದರು. ಲತಾ ಮಂಗೇಶ್ಕರ್ ಅವರು ಕಪೂರ್ ಕುಟುಂಬದ ಅತ್ಯಂತ ಭರವಸೆಯ ನಟ ರಿಷಿ ಕಪೂರ್ ಎಂದು ಹೇಳಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಅವರ ಅಭಿನಯದ ವಿಶೇಷತೆಯೆಂದರೆ ಅವರ ‘ಎಫರ್ಟ್ ಲೆಸ್’.

LEAVE A REPLY

Please enter your comment!
Please enter your name here