ಎಚ್.ಡಿ. ರೇವಣ್ಣಗೆ ಶಾಕ್ ನೀಡಿದೆ ಯಡಿಯೂರಪ್ಪ ನೀಡಿದ ಈ ಆದೇಶ..!

0
306

ಬಿಜೆಪಿ ಸರ್ಕಾರ ರಚನೆಯಾದ ನಂತರ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣಗೆ ಶಾಕ್ ಮೇಲೆ ಶಾಕ್ ನೀಡಲಾಗುತ್ತಿದೆ. ಮೈತ್ರಿ ಸರ್ಕಾರದಲ್ಲಿ ತನ್ನದೇ ದರ್ಬಾರ ನಡೆಸಿದ್ದ ರೇವಣ್ಣಗೆ ಬಿಜೆಪಿ ಸರ್ಕಾರ ಇದೀಗ ಟಾರ್ಗೆಟ್ ಮಾಡಿದ್ಯಾ..? ಎಂಬ ಪ್ರಶ್ನೆಯೂ ಉದ್ಭವಿಸಿದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕೆಎಂಎಫ್ ಚುನಾವಣೆ ಮುಂದೂಡಿ ನಂತರ ಕೆಎಂಎಫ್ ಚುನಾವಣೆಯಲ್ಲಿ ಬಿಜೆಪಿ ಪಾರಮ್ಯ ಸಾಧಿಸುವಂತೆ ಮಾಡಿದ ಯಡಿಯೂರಪ್ಪ ಈಗ ಮತ್ತೊಂದು ದೊಡ್ಡ ಶಾಕ್‍ ಅನ್ನು ಎಚ್.ಡಿ. ರೇವಣ್ಣಗೆ ನೀಡಿದ್ದಾರೆ.

ಹೌದು, ಕೆಎಂಎಫ್ ಚುನಾವಣೆಯಲ್ಲಿ ಸೋಲುವ ಸಾಧ್ಯತೆಯಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ರೇವಣ್ಣ ಕೆಎಂಎಫ್ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದರು. ಆದರೆ ಇದೀಗ ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾಗ ರೇವಣ್ಣ ಅನುಮತಿ ನೀಡಿದ್ದ ಭಾರಿ ದೊಡ್ಡ ಮೊತ್ತದ ಟೆಂಡರ್ ಒಂದನ್ನು ಯಡಿಯೂರಪ್ಪ ಸರ್ಕಾರ ರದ್ದು ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ರಸ್ತೆ ನಿಗಮ ನಿಯಮಿತ ಅಡಿಯಲ್ಲಿ ನಿರ್ಮಾಣ ಮಾಡಲು 87.87 ಕಿ.ಮೀ ಉದ್ದ ಎಲಿವೇಟೆಡ್ ರಸ್ತೆ ನಿರ್ಮಾಣ ಕಾಮಗಾರಿಯ ಟೆಂಡರ್ ಅನ್ನು ಬಿಜೆಪಿ ಸರ್ಕಾರ ರದ್ದು ಮಾಡಿದೆ. ಆ ಮೂಲಕ ರೇವಣ್ಣಗೆ ಟಾಂಗ್ ನೀಡಿದೆ.

ಇನ್ನು 87.87 ಕಿ.ಮೀ ಉದ್ದ ಎಲಿವೇಟೆಡ್ ರಸ್ತೆ ನಿರ್ಮಾಣ ಕಾಮಗಾರಿಯೂ ಬೃಹತ್ ಮೊತ್ತದ ಟೆಂಡರ್ ಇದಾಗಿದ್ದು, ಈಗಾಗಲೇ ಮೊದಲ ಹಂತದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿತ್ತು. ಆದರೆ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಅನುಮಾನದ ಮೇಲೆ ಇಡೀ ಟೆಂಡರ್ ಅನ್ನು ರದ್ದು ಮಾಡಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಿಡಿಸಿದ್ದಾರೆ. ಇನ್ನು ಕ್ರಿಯಾ ಯೋಜನೆ ತಯಾರಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂದು ದೂರುಗಳ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕ್ರಿಯಾ ಯೋಜನೆ ಮತ್ತು ಕಾಮಗಾರಿಯ ಅಂದಾಜು ಮೊತ್ತದ ವರದಿಯನ್ನು ಮತ್ತೆ ತಯಾರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here