ಸ್ವಾಭಿಮಾನಕ್ಕೆ ಧಕ್ಕೆಯಾದರೆ ಇಂದೇ ಶಾಸಕ ಸ್ಥಾನಕ್ಕೆ ರಾಜೀನಾಮೆ:ರೇಣುಕಾಚಾರ್ಯ

0
312

ಸ್ವಾಭಿಮಾನಕ್ಕೆ ಧಕ್ಕೆಯಾದರೆ ಇಂದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಮಾಜಿ ಸಚಿವ, ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಡನೆ ಮಾತನಾಡಿದ ರೇಣುಕಾಚಾರ್ಯ ಚುನಾವಣೆಯಲ್ಲಿ ಸೋತವರಿಗೆ ಮಂತ್ರಿ ಪದವಿ ದಕ್ಕಿದೆ. ಹಾಗೇಕೆ ಮಾಡಿದ್ದಾರೆ? ಗೆದ್ದವರನ್ನೇ ಸಚಿವರಾಗಿಸಬಹುದಿತ್ತು. ಎಂದು ಪರೋಕ್ಷವಾಗಿ ನೂತನ ಸಚಿವ ಲಕ್ಷ್ಮಣ ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ತನಗೆ ಬಿಜೆಪಿ ನಾಯಕರ ಬಗೆಗೆ ಅಥವಾ ಮುಖ್ಯಮಂತ್ರಿ ಯಡಿಯೂರಪ್ಪ ಬಗೆಗೆ ಯಾವ ಅಸಮಾಧಾನವಿಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

ಇನ್ನೊಂದೆಡೆ ರೇಣುಕಾಚಾರ್ಯ ರಾಜೀನಾಮೆ ಹೇಳಿಕೆಯನ್ನು ಉಮೇಶ್ ಕತ್ತಿ, ರಾಮಪ್ಪ ಲಮಾಣಿ ಸಹ ಅನುಮೋದಿಸಿದ್ದು ಸಚಿವ ಸ್ಥಾನ ಅಥವಾ ನಿಗಮ ಮಂಡಳಿ ಅಧ್ಯಕ್ಷ ಪದವಿ ದೊರಕದಿದ್ದಲ್ಲಿ ತಾವೂ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದ್ರೆ.

LEAVE A REPLY

Please enter your comment!
Please enter your name here