ವಿಶ್ವ ಆಹಾರ ದಿನ ನಿಟ್ಟಿನಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ 75ನೇ ವರ್ಷಾಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 75 ರೂ ಮುಖಬೆಲೆಯ ನಾಣ್ಯಗಳನ್ನು ಬಿಡುಗಡೆಮಾಡಿದ್ದಾರೆ. ಈ ನಾಣ್ಯವನ್ನು ಸಾಮಾನ್ಯ ಚಲಾವಣೆಗೆ ಬಳಸುವಂತಿಲ್ಲ. ಕಾರಣ ಇದು ಸ್ಪರಣಾರ್ಥ ನಾಣ್ಯವಾಗಿದೆ. ಆದರೆ ನಾಗರಿಕರು ಬಯಸಿದರೆ ಈ ನಾಣ್ಯಗಳನ್ನು ಪಡೆಯಬಹುದು. ಹಾಗಾದರೆ ಈ ನಾಣ್ಯಗಳು ಭಾರತದಲ್ಲಿ ಮೊದಲು ಆರಂಭವಾದದ್ದು ಯಾವಾಗ? ಈ ನಾಣ್ಯಗಳನ್ನು ಹೇಗೆ ಪಡೆಯಬಹುದು ಎಂಬ ಕೂತುಹಲಕಾರಿ ಮಾಹಿತಿ ಇಲ್ಲಿದೆ.
1964ರಲ್ಲಿ ಭಾರತದಲ್ಲಿ ಮೊದಲಬಾರಿ ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆ ಮಾಡಲಾಯಿತು. ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಚಿತ್ರ ಇರುವ ನಾಣ್ಯ ಇದಾಗಿತ್ತು. ಅವರ ಜನ್ಮದಿನದ ನೆನಪಿಗಾಗಿ ಈ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ನಾಣ್ಯಗಳು ಬೇಕೆಂದರೆ ಐಜಿ ಮಿಂಟ್ ಕೋಲ್ಕತ್ತಾ, ಐಜಿ ಮಿಂಟ್ ಹೈದರಾಬಾದ್ ಹಾಗೂ ಐಜಿ ಮಿಂಟ್ ಮುಂಬೈ ವೆಬ್ ಸೈಟ್ ಗೆ ಹೋಗಿ ಖರೀದಿಸಬಹುದಾಗಿದೆ.
ಸ್ಮರಣಾರ್ಥ ನ್ಯಾಣಗಳನ್ನು ನೀವು ಪಡೆಯಬೇಕೆಂದರೆ ಆನ್ ಲೈನ್ ನಲ್ಲಿ ಮುಂಚಿತವಾಗಿ ಅಂದರೆ 3ರಿಂದ 6 ತಿಂಗಳ ಮೊದಲೇ ಬುಕ್ಕಿಂಗ್ ಮಾಡಬೇಕು. ಇಲ್ಲವೇ ಮುಂಬೈ ಮಿಂಟ್ ಹಚೇರಿಗೆ ಹೋಗಿ ನೇರವಾಗಿ ಅಲ್ಲಿಂದಲೇ ಪಡೆದುಕೊಳ್ಳಬಹುದು. ನಾಣ್ಯ ಹಾಗೂ ಅದ ಬೆಲೆಯನ್ನು ನೋಟಿಸ್ ಬೋರ್ಡ್ ಗೆ ಹಾಕಲಾಗುತ್ತದೆ. ಒಮ್ಮೆಲೆ ಹತ್ತು ಸ್ಮರಣಾರ್ಥ ನಾಣ್ಯ ಖರೀದಿಸುವವರು ಪಾನ್ ಕಾರ್ಡ್ ದಾಖಲೆ ನೀಡಬೇಕು ಅಷ್ಟೆ.