ರೆಡ್ ಬಸ್ ಸ್ಟೋರಿ

0
285

ಫೆಸ್ಬೂಕ್ ,ಟ್ವಿಟ್ಟರ್, ಗೂಗಲ್,ಆಪಲ್ ಮುಂತಾದ ದೊಡ್ಡ ದೊಡ್ಡ ಕಂಪನಿಗಳ ತರ ಇದೊಂದು ಇನೋವೇಟಿವ್ ಐಡಿಯಾ 25 ವರ್ಷದ ಪಣಿoದ್ರನ್ ಸಾಮ್ ಈ ಪ್ರಾಜೆಕ್ಟ್ ಇಂದ 400 ಕೋಟಿ ಹಣ ಪಡೆದಿದ್ದಾನೆ. ಪಣಿoದ್ರನ್ ಸಾಮ್ ಅವರ ಊರು ಆಂಧ್ರಪ್ರದೇಶದ ನಿಜಾಮ ಭಾದ್ ಇವಾಗ ತೆಲಂಗಾಣ ಸ್ಟೇಟ್ ನಲ್ಲಿ ಇದೆ.

ಇವರು ಎಲೆಕ್ಟ್ರಿಕಲ್ ನಲ್ಲಿ ಡಿಗ್ರಿ ಮಾಡಿದ್ದಾರೆ ಹಾಗೂ ಇವರು ಪೋಸ್ಟ್ ಗ್ರಾಜುಯೆಟ್ ಅನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಮಾಡಿದ್ದಾರೆ. ಇವರು ತಮ್ಮ ವಿದ್ಯಾಭ್ಯಾಸ ಮುಗಿಸಿದ್ದು ಬೆಂಗಳೂರಿನಲ್ಲಿ ಟ್ಯಾಕ್ಸಾಸ್ ಇನ್ಸ್ಟ್ರುಮೆಂಟ್ ಕಂಪನಿಯಲ್ಲಿ ಸೀನಿಯರ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಇವರಿಗೆ ಈ ಐಡಿಯಾ ಬಂದಿದ್ದು 2005 ರ ದೀಪಾವಳಿ ಸಮಯದಲ್ಲಿ ಇವರಿಗೆ ಆಗ 25 ವರ್ಷ ವಾಯಸ್ಸಾಗಿತ್ತು. ಇವರು ಮತ್ತು ಇವರ ಸ್ನೇಹಿತರು ದೀಪಾವಳಿ ಸಮಯದಲ್ಲಿ ಊರಿಗೆ ಹೊರಟಿದ್ದರು. ಆಗ ಪಣಿoದ್ರನ್ ಅವರು ಊರಿಗೆ ಹೊರಡಲು ಕೊನೆ ಗಳಿಗೆಯಲ್ಲಿ ಹೊರಟರು ಟ್ರಾಫಿಕ್ ನಿಂದಾಗಿ ಇವರಿಗೆ ಊರಿಗೆ ಹೋಗಲು ಬಸ್ ಟಿಕೆಟ್ ಸಿಗಲಿಲ್ಲ ಬುಕ್ ಮಾಡಲು ಕೂಡ ಇವರಿಗೆ ಆಗಲಿಲ್ಲ. ಯಾವಾಗಲೂ ಬುಕ್ ಮಾಡುತ್ತಿದ್ದ ಏಜೆoಟ್ ಹತ್ತಿರವೇ ಹೋದರು ಆದರೆ ಅಲ್ಲಿ ಅವರಿಗೆ ಟಿಕೆಟ್ ಸಿಗಲಿಲ್ಲ.

ಬೇರೆ ಏಜೆನ್ಟ್ ರನ್ನು ಸಂಪರ್ಕಿಸಿದರು ಆದರೆ ಇವರಿಗೆ ಸೀಟ್ ಸಿಗಲೇ ಇಲ್ಲ. ಇವರಿಗೆ ತುಂಬಾ ಬೇಜಾರ್ ಆಗಿ ತಮ್ಮ ರೂಮಿಗೆ ಹೋದರು. ಆನ್ಲೈನ್ ನಲ್ಲಿ ಬಸ್ ಟಿಕೆಟ್ ಬುಕ್ ಮಾಡುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಕೊಂಡರು ಪಣಿoದ್ರನ್. ನನಗಾದ ಈ ರೀತಿಯ ಸಮಸ್ಯೆ ಮತ್ಯಾರಿಗೂ ಆಗದ ರೀತಿ ಬಸ್ ಟಿಕೆಟ್ ಬುಕ್ ಮಾಡುವ ಸಿಸ್ಟಮ್ ಅನ್ನು ಬಿಲ್ಟ್ ಮಾಡಬೇಕೆಂದು ಕೊಂಡರು. ಟಿಕೆಟ್ ಅನ್ನು ಹೇಗೆ ಮಾರುತ್ತಾರೆ, ಓನರ್ ಗೆ ಅದರಿಂದ ಎಷ್ಟು ಹಣ ಸಿಗುತ್ತೆ, ಏಜೆಂಟರಿಗೆ ಎಷ್ಟು ಪ್ರಾಫಿಟ್ ದೊರೆಯುತ್ತೆ , ಇವಾಗ ಯಾವ ತರ ಟಿಕೆಟ್ ಬುಕ್ ಮಾಡ್ತಾರೆ , ಯವ ಯಾವ ವಿಧಾನಗಳನ್ನು ಟಿಕೆಟ್ ಬುಕ್ ಮಾಡೋಕೆ ಬಳಸುತ್ತಾರೆ ಅನ್ನೋ ಇನ್ಫಾರ್ಮೇಷನ್ ಅನ್ನು ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿಯಿಂದ ತಿಳಿದುಕೊಂಡನು ಇದರ ಬಗ್ಗೆ ಯಾರೂ ಪಣಿ ಅವರಿಗೆ ಹೇಳೇ ಇರಲಿಲ್ಲ.

ಪಣಿರವರು ತಮ್ಮ ಐಡಿಯವನ್ನು ತಮ್ಮ ಗೆಳೆಯರಿಗೆ ಹೇಳಿದರು. ಅವರು ಕೂಡ ಇದನ್ನು ಒಪ್ಪಿಕೊಂಡರು ಮತ್ತು ಐದು ಲಕ್ಷ ರೂಪಾಯಿ ಹಣದ ಬಂಡವಾಳ ಹೂಡಿ ರೆಡ್ ಬಸ್ ಅನ್ನು ಸ್ಟಾರ್ಟ್ ಮಾಡಿದರು. ಅವರ ರೂಮ್ ಅನ್ನೇ ಆಫೀಸ್ ಆಗಿ ಪರಿವರ್ತಿಸಿದರು. ಇದನ್ನು ದೊಡ್ಡ ರೂಪದಲ್ಲಿ ಮಾಡುವ ಐಡಿಯಾ ಇವರಿಗೆ ಇರಲಿಲ್ಲ ಇದನ್ನು ಬಸ್ ಆಪರೇಟರ್ ಗೆ ಮಾರಿ ಯಾವುದಾದರೂ NGO ಗೆ ಕೊಡೋಣ ಎಂದುಕೊಂಡಿದ್ದರು. ಇದನ್ನು ಯಾರು ಕೂಡ ಕೊಂಡುಕೊಳ್ಳಲು ಮುಂದೆ ಬರಲಿಲ್ಲ. ಆಗ ಇಂಟರ್ನೆಟ್ ಕೂಡ ತುಂಬಾ ವಿರಳವಾಗಿತ್ತು. ಎಲ್ಲರೂ ಕೂಡ ಮಾಮೂಲಿ ರೀತಿಯಲ್ಲೇ ಟಿಕೆಟ್ ಬುಕ್ ಮಾಡುತ್ತಿದ್ದರು ಪಣಿ ಮತ್ತು ಅವರ ಫ್ರೆಂಡ್ಸ್ ಬಸ್ ಆಪರೇಟರ್ ಆಫೀಸ್ ಗೆ ಹೋಗಿ ಲಂಚ್ ಟೈಮ್ ನಲ್ಲಿ ಟಿಕೆಟ್ ಬುಕ್ ಮಾಡೋಕೆ ಹೋಗುತ್ತಾರೆ.

ಈ ಸರ್ವಿಸ್ ಅನ್ನು ಜನರು ಕೂಡ ಒಪ್ಪುತ್ತಾರೆ ಇವರ ಆನ್ಲೈನ್ ಬಿಸಿನೆಸ್ ಬೆಳೆಯುತ್ತಾ ಹೋಗುತ್ತದೆ. ಇವರು ವೆಬ್ಸೈಟ್ ಅನ್ನು ಕೂಡ ಎಲ್ಲರಿಗೂ ಸುಲಭವಾಗಿ ಅರ್ತ ಆಗುವ ರೀತಿಯಲ್ಲೇ ಬಿಲ್ಟ್ ಮಾಡಿದ್ದರು. ಸೀಟ್ ರೆಡ್ ಇದ್ರೆ ಬುಕ್ ಆಗಿದೆ ಎಂದು ಇಲ್ಲಾಂದ್ರೆ ಬುಕ್ ಆಗಿಲ್ಲ ಎಂದು ಇದು ಓದು ಬರದವರಿಗೂ ಕೂಡ ಆರಾಮಾಗಿ ಗೊತ್ತಾಗುತ್ತಿತ್ತು ದೇಶದ 15 ರಾಜ್ಯಗಳಲ್ಲಿ ಈ ಸರ್ವಿಸ್ ಅನ್ನು ಜನರು ಬಳಸುತ್ತಿದ್ದಾರೆ 5000 ಕ್ಕೂ ಹೆಚ್ಚು ರೂಟ್ ಗಳಲ್ಲಿ ಈ ಬಸ್ ಟಿಕೆಟ್ ಅನ್ನು ಜನರು ಬುಕ್ ಮಾಡುತ್ತಿದ್ದಾರೆ.

ಕೆಲವು ಏರಿಯಾ ಗಳಿಗೆ ಟಿಕೆಟ್ ಗಳನ್ನು ಹೋಮ್ ಡೆಲಿವರಿ ಕೂಡ ಮಾಡುತ್ತಾರೆ ರೆಡ್ ಬಸ್ ವೆಬ್ಸೈಟ್ 2013 ರಲ್ಲಿ ಕಾಯಬಿಬೊ ಗ್ರೂಪಿಗೆ 400 ಕೋಟಿಗೆ ಮಾರುತ್ತಾರೆ. ಪಣಿ ರವರ ಈ ಐಡಿಯಾ ಪರಿಶ್ರಮದಿಂದ ಅವರಿಗೆ ದುಡ್ಡು ಸಿಗುತ್ತದೆ ಎಂದು ಅವರು ಎಂದುಕೊಂಡೆ ಇರಲಿಲ್ಲ ಅವರ ಶ್ರಮ ಅವರನ್ನು ಶ್ರೀಮಂತರನ್ನಾಗಿ ಮಾಡಿದೆ.

LEAVE A REPLY

Please enter your comment!
Please enter your name here