ನವೆಂಬರ್ 20 ರಂದು ಸಚಿವ ಸಂಪುಟ ಪುನರ್ ರಚನೆ..?

0
71
cm yedyurappa

ಬೆಂಗಳೂರು: ನವೆಂಬರ್ 20 ರಂದು ಸಚಿವ ಸಂಪುಟ ಪುನರ್ ರಚನೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ನಾಯಕ ಬದಲಾವಣೆ ಜೊತೆಗೆ ದಿನಗಳೆದಂತೆ ಸಚಿವ ಸಂಪುಟದ ಪುನರ್ ರಚನೆಯ ಕೂಗು ಬಿಜೆಪಿ ಪಾಳಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಒಂದಷ್ಟು ಮಂದಿ ಸಂಘ ಪರಿವಾರದವರ ಮೊರೆ ಹೋಗಿ ಸಚಿವ ಸ್ಥಾನದ ಬೇಡಿಕೆ ಇಟ್ಟರೆ, ಮತ್ತಷ್ಟು ಮಂದಿ ನೇರವಾಗಿ ಹೈಕಮಾಂಡ್ ಲೆವೆಲ್ ನಲ್ಲೇ ಗೇಮ್ ಪ್ಲೇ ಮಾಡೋದಕ್ಕೆ ರೆಡಿಯಾಗುತ್ತಿದ್ದಾರೆ.

ನವೆಂಬರ್ 3 ಕ್ಕೆ ಉಪಚುನಾವಣೆ ನಡೆಯಲಿದೆ. 10 ರಂದು ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶ ಹೊರ ಬಿದ್ದ ತಕ್ಷಣ ಪಕ್ಷದಲ್ಲಿ ಸಚಿವ ಸಂಪುಟ ರಚನೆಯ ಕಾವು ತೀವ್ರವಾಗಲಿದೆ ಎನ್ನಲಾಗಿದೆ. ಸಚಿವ ಸ್ಥಾನದ ಪಟ್ಟಿಯನ್ನು ಬಿಡುಗಡೆ ಮಾಡಲೇ ಬೇಕಾದ ಅನಿವಾರ್ಯತೆಯಲ್ಲಿ ಸಧ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಿಲುಕಿಕೊಂಡಿದ್ದಾರೆ. ಹೀಗಾಗಿ ಫಲಿತಾಂಶ ನೋಡಿ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಬಿಎಸ್ ಯಡಿಯೂರಪ್ಪ ಹೈಕಮಾಂಡ್ ಗೆ ರವಾನೆ ಮಾಡಲಿದ್ದಾರೆ.

ಈಗಾಗಲೇ ಹೈಕಮಾಂಡ್ ಭೇಟಿ ಮಾಡುವುದಾಗಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ. ಆದ್ರೆ ಸಧ್ಯ ಹೈಕಮಾಂಡ್ ಬಿಹಾರದ ಚುನಾವಣೆಯ ಸಿದ್ದತೆ ಯಲ್ಲಿದೆ. ಈ ಸಂದರ್ಭದಲ್ಲಿ ದೆಹಲಿ ಭೇಟಿ ಅಷ್ಟು ವರ್ಕ್ ಆಗೊದಿಲ್ಲ ಅನ್ನೋದು ಯಡಿಯೂರಪ್ಪ ಅವರಿಗೇ ಗೊತ್ತಿದೆ. ಹೈಕಮಾಂಡ್ ಬಳಿ ಹೋಗಿ ಖಾಲಿ ಕೈಯಲ್ಲಿ ಹಿಂದಿರುಗಿದರೆ ಬಿಜೆಪಿ ನಾಯಕರ ಒತ್ತಡ ಇನ್ನಷ್ಟು ಹೆಚ್ಚಾಗುತ್ತದೆ. ಹೀಗಾಗಿ ಬಿಹಾರ ಚುನಾವಣೆ ಮುಗಿದ ಬಳಿಕ ರಾಜ್ಯದ ಸಚಿವ ಸಂಪುಟದ ಪುನರ್ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ.

ಜಾತಿವಾರು, ಪ್ರಾಂತ್ಯಾವಾರು ಮೆರೆಗೆ ಬಿಎಸ್ ಯಡಿಯೂರಪ್ಪ ಪಟ್ಟಿಯನ್ನು ಸಿದ್ದತೆ ಮಾಡಿಕೊಂಡಿದ್ದಾರೆ.. ಆದ್ರೆ ಬಿಜೆಪಿಯ ಸಧ್ಯದ ಗಂಭೀರ ಸಮಸ್ಯೆ ಎಂದರೆ ಎಲ್ಲರೂ ಸಚಿವ ಸ್ಥಾನಕ್ಕೆ ದುಂಬಾಲು ಬಿದ್ದಿರುವುದು. ಪಕ್ಷದಲ್ಲೇ ಇದ್ದು ಕೆಲಸ ಮಾಡಿದ್ದೇವೆ ನಮಗೆ ಸಚಿವ ಸ್ಥಾನ ಕೊಡಬೇಕು ಎಂದು ಮೂಲ ಬಿಜೆಪಿಗರು ಪಟ್ಟು ಹಿಡಿದರೆ, ನೀವು ಅಧಿಕಾರದಲ್ಲಿರುವುದೇ ನಮ್ಮಿಂದ ಅಂತಾರೆ ವಲಸಿಗ ಬಿಜೆಪಿಗರು. ಉಮೇಶ್ ಕತ್ತಿ, ಮುರುಗೇಶ್ ನಿರಾಣಿಗೆ ಬಿಎಸ್ ಯಡಿಯೂರಪ್ಪ ಸಚಿವ ಸ್ಥಾನ ನೀಡುವುದಾಗಿ ಸಮಾಧಾನ ಮಾಡಿ
ಕಳಿಸಿದ್ದಾರೆ. ಇತ್ತ ಹೆಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ಅವರಿಗೂ ಮಾತು ಕೊಟ್ಟಿದ್ದಾರೆ. ಸಧ್ಯ ಸಿಟಿ ರವಿ ಖಾತೆ ತೆರವಿನಿಂದ ಒಟ್ಟು 7 ಸ್ಥಾನ ಖಾಲಿ ಇದೆ. ಇರದಲ್ಲಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಇನ್ನು ಶಾಸಕ ಯತ್ನಾಳ್ ಹೇಳಿದಂತೆ, ಉಪ ಚುನಾವಣೆ ಮುಗಿದ ಬಳಿಕ ಮುಖ್ಯಮಂತ್ರಿ ಸ್ಥಾನವೂ ಬದಲಾಗಬಹುದು ಎನ್ನುವ ಮಾತು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ.. ಯಡಿಯೂರಪ್ಪ ಅವರಿಗೆ ಈಗಾಗಲೇ ವಯಸ್ಸಾಗಿದೆ. ಇದರ ಜೊತೆಗೆ ರಾಜ್ಯ ಬಿಜೆಪಿಗೆ ಮುಂದಿನ ನಾಯಕನ ಅಗತ್ಯ ಇದೆ. ಹೀಗಾಗಿ ಯಡಿಯೂರಪ್ಪ ಮುಂದಿನ ಚುನಾವಣೆ ವರೆಗೂ ಅಧಿಕಾರದಲ್ಲಿ ಉಳಿಯುವುದು ಡೌಟ್ ಅಂತಿದ್ದಾರೆ ಬಿಜೆಪಿ ನಾಯಕರು.

LEAVE A REPLY

Please enter your comment!
Please enter your name here