ಆರ್ಥಿಕ ಪುನಶ್ಚೇತನ ಎಂಬುದು ಒಂದು ಭ್ರಮೆ ಎಂದ RBI ಗವರ್ನರ್..!

0
1584

ದೇಶದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಕುಸಿಯುತ್ತಿರುವ ಮಧ್ಯೆಯೇ RBI ಗವರ್ನರ್ ಶಕ್ತಿಕಾಂತ್ ದಾಸ್ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಹೇಳಿಕೆಯಿಂದ ಕೇಂದ್ರ ಸರ್ಕಾರ ಭಾರೀ ಮುಜುಗರಕ್ಕೆ ಒಳಗಾಗಿದೆ. ಹೌದು, ಇತ್ತೀಚೆಗೆ ಮಾದ್ಯಮಗಳೊಂದಿಗೆ ಮಾತನಾಡಿದ RBI ಗವರ್ನರ್ ಶಕ್ತಿಕಾಂತ್ ದಾಸ್, ದೇಶದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಪುನಶ್ಚೇತನ ಎಂಬುದು ಕೇವಲ ಭ್ರಮೆ. ದೇಶದ ಆರ್ಥಿಕತೆ ಮುಂದಿನಗಳಲ್ಲಿ ಇನ್ನಷ್ಟು ಹೀನಾಯ ಸ್ಥಿತಿ ತಲುಪಲಿದೆ.

ಕೈಗಾರಿಕಾ ವಲಯ ತೀವ್ರ ಕುಸಿತ ಕಾಣಲಿದ್ದು, ವಿದೇಶ ಹೂಡಿಕೆದಾರರು ದೇಶದಲ್ಲಿನ ತಮ್ಮ ಹೂಡಿಕೆಯನ್ನು ಹಿಂತೆಗೆದುಕೊಳ್ಳಲಿದ್ದಾರೆ ಎಂದು RBI ಗವರ್ನರ್ ಶಕ್ತಿಕಾಂತ್ ದಾಸ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕಳೆದ ಅನೇಕ ದಶಕಗಳ ನಂತರ ಭಾರತದ ಜಿಡಿಪಿ ಅಭಿವೃದ್ಧಿ ದರ ಶೇಕಡಾ 5ಕ್ಕೆ ಕುಸಿತ ಕಂಡಿದ್ದು ಅನಿರೀಕ್ಷಿತ ಬೆಳವಣಿಗೆ. ವೇಗದ ಆರ್ಥಿಕ ಪುನಶ್ಚೇತನ ಕೇವಲ ಊಹಾಪೋಹ. ದೇಶದ ಮತ್ತೆ ವೇಗದ ಆರ್ಥಿಕ ಪುನಶ್ಚೇನ ಹೊಂದಲು ಅನೇಕ ದಶಕಗಳೇ ಬೇಕಾಗುತ್ತವೆ. ವಿವಿಧ ಕ್ಷೇತ್ರಗಳ ಉತ್ಪಾದನಾ ಸಾಮಥ್ರ್ಯ ಕುಸಿತವಾಗಿದ್ದು, ಇದಕ್ಕೆ ಪೂರಕವಾಗಿ ಉದ್ಯೋಗದಲ್ಲೂ ಭಾರೀ ಕಡಿತ ಕಂಡುಬರುತ್ತಿದೆ.

ಇನ್ನು ದೇಶ ಸದ್ಯ ಎದುರಿಸುತ್ತಿರುವ ಆರ್ಥಿಕ ಕುಸಿತದ ಆತಂಕವನ್ನು ಆರ್‍ಬಿಐ ಮೊದಲೇ ಗ್ರಹಿಸಿತ್ತು. ಇದೇ ಕಾರಣಕ್ಕೆ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ಹಾಗೂ ಬೇಡಿಕೆ ಹೆಚ್ಚಿಸುವ ಸಲುವಾಗಿ ರೆಪೋ ದರದಲ್ಲಿ 25 ಮೂಲಾಂಕದಷ್ಟು ಕಡಿತ ಮಾಡಲು ನಿರ್ಧರಿಸಲಾಯಿತು ಎಂದಿರುವ ಶಕ್ತಿಕಾಂತ್ ದಾಸ್ ದೇಶದ ಆರ್ಥಿಕ ಪರಿಸ್ಥಿತಿ ಸದ್ಯದ ಪರಿಸ್ಥಿತಿಯಲ್ಲಿ ಸುಧಾರಣೆ ಹೊಂದಲು ಸಾಧ್ಯವಿಲ್ಲ ಎಂದಿದ್ದಾರೆ.

LEAVE A REPLY

Please enter your comment!
Please enter your name here