ಈ ರಾಶಿಯವರಿಗಿಂದು ಶತ್ರುಗಳಿಂದಲೂ ಲಾಭ

0
533

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ವರ್ಷ ಋತು,  ಭಾದ್ರಪದ ಮಾಸೆ,   ಕೃಷ್ಣ ಪಕ್ಷದ ಅಷ್ಟಮಿ ತಿಥಿ,  ರೋಹಿಣಿ ನಕ್ಷತ್ರ,  ವಜ್ರ ಯೋಗ, ಬಾಲವ  ಕರಣ ಸೆಪ್ಟೆಂಬರ್ 10 ಗುರುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ  ಬೆಳಗ್ಗೆ 10 ಗಂಟೆ 8 ನಿಮಿಷದಿಂದ 11 ಗಂಟೆ  53 ನಿಮಿಷದವರೆಗೂ ಇದೆ.

ಇಂದು  ಕಾಲ ಅಷ್ಟಮಿ ಆತ್ಮಕಾರಕ ಎಂದರೆ ಸೂರ್ಯ. ಸೂರ್ಯನ ಮೇಲೆ ಕುಜ ವಕ್ರವಾಗಿರುವುದರಿಂದ ಉನ್ನತ ಸ್ಥಾನದಲ್ಲಿ ಇರುವವರಿಗೆ ಸಂಕಷ್ಟ. ಸಾಕಷ್ಟು ಅವಮಾನಗಳನ್ನು ಧರಿಸಬೇಕಾಗುತ್ತದೆ. ಎಲ್ಲರನ್ನು ಕಗ್ಗತ್ತಲೆಯಲ್ಲಿ ಕಟ್ಟಿ ಆಕಿರುವ ಪ್ರಭಾವವೇ ಕಾಲಷ್ಟಮಿ. ಮಳೆ ಮತ್ತು ಗಾಳಿಯ ಆರ್ಭಟ ಹೆಚ್ಚಾಗಿರುತ್ತದೆ. ದುಡ್ಡನ್ನು ಅಡ್ಡದಾರಿಯಲ್ಲಿ ಸಂಪಾದನೆ ಮಾಡುವುದು ಹೆಚ್ಚಾಗುತ್ತದೆ. ಅತಿಯಾದ ಆಸೆಯಿಂದ ಮೋಸಕ್ಕೊಳಗಾಗುವ ಸಂಭವವಿದೆ ಎಚ್ಚರಿಕೆ. ಕಾಲಾಷ್ಟಮಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ.

ಸೆಪ್ಟೆಂಬರ್ 10ರಂದು ಹುಟ್ಟಿದವರು ಅಭೇದ್ಯರು. ವಾಕ್ಪಟುತ್ವ ಅದ್ಭುತ ನಿಮ್ಮಲ್ಲಿರುವ ಜ್ಞಾನ ಭಂಡಾರ ಯಥೇಚ್ಛ ವಾದುದು. ಡಾಕ್ಟರ್ ಅಡ್ವೈಸರ್ ಅಡ್ಮಿನಿಸ್ಟ್ರೇಟರ್ ಆಗಿದ್ದರೆ ಗೆಲುವು ಕಟ್ಟಿಟ್ಟ ಬುತ್ತಿ ಅಂತಹ ಅಭೇದ್ಯವಾದ ಶಕ್ತಿ ನಿಮ್ಮಲ್ಲಿದೆ. ಅಪರಿಮಿತವಾದ ಬಲವಿರುತ್ತದೆ.  ನೀವು ಯಾರನ್ನಾದರೂ ಎದುರಾಕಿಕೊಳ್ಳಲು ಹೋಗಿ ಬಿಡುತ್ತೀರಿ.  ನಿಮಗೆ ಅಪರಿಮಿತವಾದ ಬಲ ಕೊಟ್ಟಿರುವುದು ಸರಿಯಾದ ದಾರಿಯಲ್ಲಿ ನಡೆಯಲು. ಸೆಪ್ಟೆಂಬರ 10ರಂದು ಹುಟ್ಟಿದವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಮೇಲಿನ ವಿಡಿಯೋವನ್ನು ನೋಡಿ.

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಸ್ವಲ್ಪ ತಳಮಳ ಆದರೂ ಉದ್ಯೋಗದ ವಿಚಾರದಲ್ಲಿ ಗೌರವ ಪ್ರಗತಿಯನ್ನು ಕಾಣುವಂತಹ ದಿನ.

ವೃಷಭ ರಾಶಿ : ಚಂದ್ರ ಉಚ್ಚಂಗತ ನಾಗಿರುವುದರಿಂದ ಮನಸ್ಸು ಸ್ವಲ್ಪ ಗಲಿಬಿಲಿಗೊಳ್ಳುವುದು. ಮನಸ್ಸಿಗೆ ನೋವಾಗುವಂತಹ ಸನ್ನಿವೇಶ ಸಂಭವಿಸುತ್ತದೆ ಅದನ್ನು ಬಿಟ್ಟು ಮುಂದಕ್ಕೆ ಹೆಜ್ಜೆ ಹಾಕಿ.

ಮಿಥುನ ರಾಶಿ : ಸ್ವಲ್ಪ ಆತುರದ  ಕಾರ್ಯಗಳಿಂದ ವಿಳಂಬವನ್ನು ತಂದಿಟ್ಟು ಕೊಳ್ಳುತ್ತೀರಾ ಅದನ್ನು ಬಿಟ್ಟರೆ ಮಿಕ್ಕಂತೆ ಯಾವುದೇ ತೊಂದರೆ ಇಲ್ಲ.

ಕರ್ಕಾಟಕ ರಾಶಿ : ಮನಸ್ಸು,  ಬುದ್ಧಿ,  ಮೇಧಾ ಶಕ್ತಿ ಎಲ್ಲವೂ ಕೂಡ ಆನಂದಕರವಾಗಿ ರುವಂತಹ ದಿನ. ಅಂದುಕೊಂಡ ಕೆಲಸ ಕಾರ್ಯಗಳೆಲ್ಲವನ್ನು ಸಾಧಿಸುತ್ತೀರಿ.

ಸಿಂಹ ರಾಶಿ : ವೃತ್ತಿ ವ್ಯವಹಾರ ಪರವಾಗಿ ಸ್ವಲ್ಪ ಖರ್ಚು ಆಗುತ್ತದೆ ಅದನ್ನು ಬಿಟ್ಟರೆ ಯಾವುದೇ ರೀತಿಯ ತೊಂದರೆ ಇಲ್ಲ.

ಕನ್ಯಾ ರಾಶಿ : ನಿಮಗೂ ಚಂದ್ರನಿಗೂ ಆಗಿ ಬರುವುದಿಲ್ಲ ಆದ್ದರಿಂದ ಮನಸ್ಸಿಗೆ ಸ್ವಲ್ಪ ಗಲಿಬಿಲಿ ಆತಂಕ, ಮನಸ್ಸಿಗೆ ಹತ್ತಿರವಾದ ವರಿಂದ ಸ್ವಲ್ಪ ತಳಮಳ ನೋವಾಗುವ ಸಂಭವವಿದೆ.

ತುಲಾ ರಾಶಿ : ದೂರದ ವ್ಯವಹಾರ ಕೆಲಸದಲ್ಲಿ ಒತ್ತಡ ಬಿಟ್ಟರೆ ಮಿಕ್ಕಂತೆ ಯಾವುದೇ ರೀತಿಯ ತೊಂದರೆ ಇಲ್ಲ.

ವೃಶ್ಚಿಕ ರಾಶಿ : ತಿಳಿದಿರುವವರ ಜೊತೆ ಮಾಡುತ್ತಿರುವಂತಹ ಪಾಲುದಾರಿಕೆಯ ಕೆಲಸಗಳಲ್ಲಿ,  ಸಂಗಾತಿಯ ಜೊತೆ ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ, ವಿಶೇಷ ಪ್ರಗತಿಯನ್ನು ಕಾಣುವಂತಹ ದಿನ.

ಧನಸ್ಸು ರಾಶಿ : ವಿಪರೀತ ದುಡ್ಡು ವಿಪರೀತ ಹೆಸರು ವಿಪರೀತ ಶಾರ್ಟ್ ಕಟ್ನಲ್ಲಿ ಹೋಗುತ್ತೀರಾ ಎಚ್ಚರಿಕೆ.

ಮಕರ ರಾಶಿ : ತಿಳಿದಿರುವವರ ಜೊತೆ ಚಿಂತಿಸಿ ಆಲೋಚನೆ ಮಾಡಿ ಯೋಜನೆಗಳನ್ನು ಮಾಡಿ ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ   ಅದ್ಭುತವಾದ ಯಶಸ್ಸನ್ನು ಕಾಣುವಂತಹ ದಿನ.

ಕುಂಭ ರಾಶಿ : ಶತ್ರುಗಳಿಂದಲೂ ಕೂಡ ಲಾಭವನ್ನು ನೋಡುವಂತಹ ಅದ್ಭುತವಾದ ದಿನ.

ಮೀನ ರಾಶಿ : ಮಕ್ಕಳ ವಿಚಾರ,  ಹಿರಿಯರ ವಿಚಾರ,  ಅವರ ಹೆಸರಿನಲ್ಲಿ ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ವಿಶೇಷವಾದ ಪ್ರಗತಿ. ಕಲಾವಿದರಾಗಿದ್ದರೆ  ಪ್ರಗತಿಯನ್ನು ಕಾಣುವಂತಹ ಮತ್ತು ಶುಭ ಸುದ್ದಿಯೊಂದನ್ನು ಕೇಳುವಂತಹ ಅದ್ಭುತವಾದ ದಿನ.

All Rights reserved Namma Kannada Entertainment.

LEAVE A REPLY

Please enter your comment!
Please enter your name here