ಮದುವೆಗಳು ನಿಂತು ಹೋಗುತ್ತಿದೆ ಎಂಬ ಒದ್ದಾಟದಲ್ಲಿರುವವರಿಗೆ ಮಾಡಿಸುವಂತಹ ಸಂಕಲ್ಪ

0
504

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ವರ್ಷ  ಋತು,  ಭಾದ್ರಪದ ಮಾಸೆ, ಕೃಷ್ಣ ಪಕ್ಷದ ನವಮಿ ತಿಥಿ,  ಮೃಗಶಿರ ನಕ್ಷತ್ರ, ಸಿದ್ದಿ ಯೋಗ,  ತೈತುಲ ಕರಣ ಸೆಪ್ಟೆಂಬರ್ 11 ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಬೆಳಗ್ಗೆ 6 ಗಂಟೆಯಿಂದ 7 ಗಂಟೆ 40 ನಿಮಿಷದವರೆಗೂ ಇದೆ.

ಸಪ್ತ ಹೆಜ್ಜೆಗಳ ದೋಷವಿದೆ. ಮದುವೆ ಮಾತುಕತೆಗಳು ನಿಂತು ಹೋಗುತ್ತಿವೆ.  ಮದುವೆಗಳು ನಿಂತು ಹೋಗುತ್ತಿದೆ. ಸರಿಯಾದ ಸಂಗಾತಿ ಬರುತ್ತಿಲ್ಲ ಎಂಬ ಒದ್ದಾಟದಲ್ಲಿ ರುವವರಿಗೆ ಒಂದು ಉತ್ತಮವಾದ ಪರಿಸ್ಕಾರವನ್ನು ಗುರೂಜಿ ರವರು ತಿಳಿಸಿಕೊಡಲಿದ್ದಾರೆ. ಸಪ್ತ ಮಂಡಲ ಚಕ್ರ ಇದನ್ನು ಸಾಮಾನ್ಯವಾಗಿ ಮದುವೆ ಆಗದೆ ನಿಂತು ಹೋಗುತ್ತಿರುವ ಪುರುಷರು ಮತ್ತು ಸ್ತ್ರೀಯರಿಗೆ ಮಾಡಿಸುವಂತಹ ಸಂಕಲ್ಪ. ಈ ಸಪ್ತ ಮಂಡಲ ಚಕ್ರವನ್ನು ಒಂದು ಕಂಚಿನ ಪಾತ್ರೆ ಅಥವಾ ರಾಗಿ ಪಾತ್ರೆಯಲ್ಲಿ ಇರಿಸಿ ನೂರ ಎಂಟು ದಿನಗಳ ಕಾಲ ಪುಷ್ಪಾರ್ಚನೆ ಆರಾಧನೆ ಮಾಡಬೇಕು ಇದನ್ನು ಪ್ರಾರಂಭಿಸಲು ಶುಕ್ರವಾರ ಒಳ್ಳೆಯ ದಿನ. ವಿಷ್ಣು ಸಹಸ್ರನಾಮವನ್ನು ಕೇಳುತ್ತಾ ಅದಕ್ಕೆ ಸ್ಪಷ್ಟನೆಯನ್ನು ಮಾಡಬೇಕು. ಸಪ್ತ ಮಂಡಲ ಚಕ್ರದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಕೆಳಗಿನ ವಿಡಿಯೋವನ್ನು ನೋಡಿ.

ಸೆಪ್ಟೆಂಬರ್ 11ರಂದು ಹುಟ್ಟಿದವರು ಸ್ವಾಭಿಮಾನಿಗಳು. ಜನರಿಗೆ ಸೇವೆ ಮಾಡುವಂತಹ,  ಸಂಘವನ್ನು ಕಟ್ಟುವಂತಹ ಅದ್ಭುತವಾದ ಶಕ್ತಿ ನಿಮಗಿದೆ. ಶಶಿ ಮಂಗಳ ಯೋಗ ವಿದೆ ಅಮ್ಮನ ಗುಣಲಕ್ಷಣ ನಿಮಗಿದೆ. ಗೌರವ ಪೂರ್ಣವಾದ ಜೀವನವನ್ನು ನಡೆಸುತ್ತೀರಿ ಅದು ನಿಮಗಿರುವ ಶಶಿಮಂಗಳ ಯೋಗ ದಿಂದ. ಯಾವುದೇ ನೋವುಗಳನ್ನು ಮನಸ್ಸಿಗೆ  ತೆಗೆದುಕೊಳ್ಳಬೇಡಿ. ನಿಮ್ಮ ಕಾರ್ಯಕ್ಷೇತ್ರದ ಕಡೆಗೆ ಮಾತ್ರ ಗಮನ ಕೊಡಿ ಉಳಿದಿದ್ದನ್ನು ಇಗ್ನೋರ್ ಮಾಡಿ.  ಸೆಪ್ಟೆಂಬರ್  11ರಂದು ಹುಟ್ಟಿದವರು ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಮೇಲಿನ ವಿಡಿಯೋವನ್ನು ನೋಡಿ.

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಚೆನ್ನಾಗಿದೆ ತೊಂದರೆ ಏನೂ ಇಲ್ಲ ಆದರೆ ಸ್ವಲ್ಪ ಧೈರ್ಯ ಕಮ್ಮಿ ಹಾಗಾಗಿ ಗಣಪತಿ ಅನುಷ್ಠಾನ ಮಾಡಿಕೊಳ್ಳಿ.

ವೃಷಭ ರಾಶಿ : ಮಾತಿನಲ್ಲೂ ವ್ಯವಹಾರದಲ್ಲೂ ಅಲ್ಲೊಂದು ಬೆಂಕಿ ಕುಟುಂಬದವರ ಮೇಲೆ ಒಂದು ಕಣ್ಣಿಡಿ ಎಚ್ಚರಿಕೆ.

ಮಿಥುನ ರಾಶಿ : ಇವತ್ತು ನೀವು ಸೋತರೆ ಮಾತ್ರ ಗೆಲ್ಲುತ್ತೀರಿ. ವಾಹನದ ವಿಚಾರದಲ್ಲಿ ಎಚ್ಚರಿಕೆ.

ಕರ್ಕಾಟಕ ರಾಶಿ : ವ್ಯವಹಾರ ಭೂಮಿ ಕುಟುಂಬ ಎಲ್ಲ ಕಡೆ ಕಟಕಟ ಎಂಬ ಶಬ್ದ ದಂತೆ ಇರುತ್ತೀರಿ. ಅಪಭ್ರಂಶ ಛಾಯಾ ದುರ್ಗೆಗೆ  ದೀಪ ಹಚ್ಚಿ ನಿನ್ನ ಒಳ್ಳೆಯದಾಗುತ್ತದೆ.

ಸಿಂಹ ರಾಶಿ : ಲಾಭಕರ ವಿಜಯ ಕರವಾದಂತಹ ದಿನ.

ಕನ್ಯಾ ರಾಶಿ : ಕಸ್ಟಮ್,  ಸಿಬಿಐ ಇಂತಹ ಉದ್ಯೋಗದಲ್ಲಿ ಇರುವವರಿಗೆ ಭರ್ಜರಿ ಬೇಟೆ .

ತುಲಾ ರಾಶಿ : ಇಂಜಿನಿಯರ್ಸ್ ಆಗಿದ್ದರೆ ಸ್ವಲ್ಪ ಒತ್ತಡದ ಛಾಯೆ ಪೇಮೆಂಟ್ ಸಮಸ್ಯೆ ಇಲ್ಲವೇ,  ಲೇಬರ್ ಗಳ ಸಮಸ್ಯೆ ಉಂಟಾಗುತ್ತದೆ.

ವೃಶ್ಚಿಕ ರಾಶಿ : ಎರಡರಷ್ಟು ಕೆಲಸಕ್ಕೆ ಒಂದರಷ್ಟು ಮಾತ್ರ ಫಲ ದೊರೆಯುತ್ತದೆ.

ಧನಸ್ಸು ರಾಶಿ : ಡಬ್ಬಲ್ ಕೆಲಸ,  ಡಬಲ್ ಪೇಮೆಂಟ್,  ಹಾಗೆಯೇ ಡಬಲ್ ಖರ್ಚು ಕೂಡ ಆಗುತ್ತದೆ.

ಮಕರ ರಾಶಿ : ಯಾರದ್ದೋ ಪ್ರಚೋದನೆಯಿಂದ ಶಾರ್ಟ್ ಕಟ್ನಲ್ಲಿ ದುಡ್ಡು ಮಾಡಲು ಹೋಗಬೇಡಿ. ಮಿಕ್ಕಂತೆ ಅಭಿವೃದ್ಧಿಯ ದಿನ.

ಕುಂಭ ರಾಶಿ : ತಾಯಿಯ ಆರೋಗ್ಯದ ಕಡೆ,  ಮಕ್ಕಳ ಆರೋಗ್ಯದ ಕಡೆ ಗಮನ ವಹಿಸಿ. ಆರೋಗ್ಯದಲ್ಲಿ ಸಣ್ಣ ಏರುಪೇರುಗಳಾಗುತ್ತವೆ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಿ ಎಲ್ಲವೂ ಒಳ್ಳೆಯದಾಗುತ್ತದೆ.

ಮೀನ ರಾಶಿ : ಅಂದುಕೊಂಡಿರುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವಂತಹ ಅದ್ಭುತವಾದ ದಿನ.

All Rights reserved Namma Kannada Entertainment.

LEAVE A REPLY

Please enter your comment!
Please enter your name here