ಈ ಶನಿವಾರ ಬಿಗ್ ಬಾಸ್ ಮನೆಯಿಂದ ಹೊರಬರಲಿದ್ದಾರೆ ರವಿ ಬೆಳಗೆರೆ ..!

0
99

ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ-7′ ಪ್ರೋಗ್ರಾಮಿನ ಟಿ ಆರ್ ಪಿ ಕಂಟೆಂಟ್ ಎಂದೇ ಬಿಂಬಿತವಾಗಿದ್ದ ರವಿ ಬೆಳಗೆರೆ ಅನಾರೋಗ್ಯದ ಕಾರಣದಿಂದ ಇದೇ ಶನಿವಾರ ಹೊರಬರಲಿದ್ದಾರೆ. ಕಳೆದೆರಡು ದಿನಗಳ ಕೆಳಗಷ್ಟೇ ಬಿಬಿ ಮನೆಯಲ್ಲಿ ರವಿಗೆ ಲೋ ಬಿಪಿಯಿದೆ. ಅವರು ಹೊರಬಂದು ಟ್ರೀಟ್ ಮೆಂಟ್ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಮನೆಯೊಳಗೆ ರವಿ ಬೆಳಗೆರೆ ಇದೀಗ ಜಸ್ಟ್ ಗೆಸ್ಟ್ ಅಷ್ಟೇ. ಅವರು ಶನಿವಾರದವರೆಗೆ ಮಾತ್ರ ಮನೆಯೊಳಗೆ ಕಾಲಕಳೆಯಲಿ ಬಿಗ್ ಬಾಸ್ ಅನುಮತಿ ನೀಡಿದ್ದಾರೆ.
ಬಿಬಿ ಮನೆಗೆ ರವಿ ಬೆಳಗೆರೆ ಎಂಟ್ರಿ ಪಡೆದ ಮೊದಲ ದಿನವೇ ಶುಗರ್ ಲೆವೆಲ್ ನಲ್ಲಿ ವ್ಯತ್ಯಾಸ ಕಂಡುಬಂತು.

ಹಾಗಾಗಿ ಹೊರಗೆ ಹೋಗಿ ಚಿಕಿತ್ಸೆ ಪಡೆದು ವಾಪಸ್ ಬಂದ ಬಳಿಕ ವೈದ್ಯರ ಸಲಹೆ ಮೇರೆಗೆ ರವಿ ಬೆಳಗೆರೆರವರನ್ನು ಆಟದಲ್ಲಿ ಮುಂದುವರೆಸದಿರಲು ಬಿಗ್ ಬಾಸ್ ಬಾಸ್ ತಂಡ ನಿರ್ಧಾರ ಕೈಗೊಂಡಿದೆ. ಇನ್ನು ಕಾರ್ಯಕ್ರಮದಲ್ಲಿಯೇ ರವಿ ಬೆಳಗೆರೆ ಬಗ್ಗೆ ತಿಳಿಸಿದ ಬಿಗ್ ಬಾಸ್ ಡಾಕ್ಟರ್ ಸಲಹೆಯ ಮೇರೆಗೆ ರವಿ ಆಟದಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಶನಿವಾರದವರೆಗಷ್ಟೇ ಅವರು ಈ ಮನೆಯಲ್ಲಿ ಮುಂದುವರೆಯುತ್ತಾರೆ. ಅವರನ್ನು ಅತಿಥಿಯಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ ರವಿ ಬೆಳಗೆರೆಯವರು ಅತಿಥಿಯಾಗಿ ಮನೆಯಲ್ಲಿರುವುದರಿಂದ ನಾಮಿನೇಟ್ ಆಗಿದ್ದ ರವಿಯವರ ವೋಟಿಂಗ್ ಲೈನ್ ಕ್ಲೋಸ್ ಮಾಡಿದೆ.

ಇನ್ನು ಕಾರ್ಯಕ್ರಮದ ಮೊದಲ ದಿನ 6.50 ರ ವೇಳೆಯಲ್ಲಿಎಚ್ಚರಗೊಂಡು ಬಾತ್ ರೂಮ್ ಕಡೆ ಮುಖ ಮಾಡಿದರು. ಇದೇ ವೇಳೆ ರವಿ ಬೆಳಗೆರೆಗೆ ಸುಸ್ತು ಕಾಣಿಸಿಕೊಂಡಿತು. ಮೊದಲೇ ಶುಗರ್ ಪೇಷೆಂಟ್ ಆಗಿರುವ ರವಿ ಬೆಳಗೆರೆ ನನಗೆ ಆಂಬ್ಯುಲೆನ್ಸ್ ಅವಶ್ಯಕತೆ ಇದೆ. ತಕ್ಷಣ ಕಳುಹಿಸಿಕೊಡಿ. ಪ್ಲೀಸ್ ಎಂದು ಕ್ಯಾಮರಾ ಮುಂದೆ ಕೇಳಿಕೊಂಡರು. ಇದಾದ ಬಳಿಕ ರವಿ ಬೆಳಗೆರೆ ಕೋರಿಕೆಗೆ ಸ್ಪಂದಿಸಿದ ಬಿಬಿ ತಂಡ ಅವರಿಗೆ ಟ್ರೀಟ್ ಮೆಂಟ್ ನೀಡಿತು. ಇನ್ನು ಹೊರಗೆ ಹೋದ ರವಿ ಬೆಳಗೆರೆ ಸಂಜೆ 6ಕ್ಕೆ ಮನೆಗೆ ಹಿಂದಿರುಗಿದರು. ಇದೇ ವೇಳೆ ಒಂದು ಸತ್ಯ ಹೇಳ್ತೀನಿ. ನಾನು ನನ್ನ ಫ್ಯಾಮಿಲಿಯನ್ನೂ ಮಿಸ್ ಮಾಡಿಕೊಂಡಿಲ್ಲ. ಆದ್ರೆ ನಿಮ್ಮನ್ನೆಲ್ಲ ತುಂಬಾ ಮಿಸ್ ಮಾಡಿಕೊಂಡೆ ಎಂದು ಸ್ಫರ್ಧಿಗಳಿಗೆ ತಿಳಿಸಿದರು.

ಇನ್ನು ಕಾರ್ಯಕ್ರಮದಲ್ಲಿ ರವಿ ಬೆಳಗೆರೆ ಹೊರಬರುತ್ತಿರುವ ಕುರಿತು ಪ್ರೇಕ್ಷಕ್ಷರು ಬೇಸರ ವ್ಯಕ್ತಪಡಸಿದ್ದು, ಅವರನ್ನು ಬಿಬಿ ಮನೆಯಲ್ಲಿಯೇ ಇಟ್ಟುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಈ ಮಾಹಿತಿ ಇಷ್ಟವಾದರೆ ತಪ್ಪದೆ ಶೇರ್ ಮಾಡಿ ನಿಮ್ಮ ಎಲ್ಲಾ ಸ್ನೇಹಿತರಿಗೂ ಪೇಜ್ ಲೈಕ್ ಮಾಡಲು ತಿಳಿಸಿ. ನಾವು ನೀಡುವ ಮಾಹಿತಿಗಳು ,ಲೇಖನಗಳು ಎಲ್ಲವೂ ಕಾಪಿರೈಟ್ಸ್ ಗೆ ಒಳಪಟ್ಟಿದ್ದು ಕದಿಯುವುದು,ಕಾಪಿ ಪೇಸ್ಟ್ ಅಥವಾ ಬೇರೆ ರೀತಿಯಲ್ಲಿ ನಮ್ಮ ಅನುಮತಿ ಇಲ್ಲದೆ ಬಳಸಿದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು. ಲೈಕ್, ಶೇರ್, ಕಾಮೆಂಟ್ ಮಾಡುವ ಮೂಲಕ ಪ್ರೋತ್ಸಾಹಿಸಿ

LEAVE A REPLY

Please enter your comment!
Please enter your name here