ಬಿಬಿ ಮನೆಯಿಂದ ಹೊರಬಂದ ದಿನವೇ ಈ ವ್ಯಕ್ತಿ ಬಗ್ಗೆ ಪುಸ್ತಕ ಬರೆಯಲು ಮುಂದಾದ ರವಿ ಬೆಳಗೆರೆ ..!

0
683

ಕಾಂಟ್ರವರ್ಸಿಯಲ್ಲೇ ಹೆಸರು ಮಾಡಿದ ಪತ್ರಕರ್ತ ರವಿ ಬೆಳಗೆರೆ ಬಿಗ್‌ಬಾಸ್ ಮನೆಯಿಂದ ಒಂದು ವಾರ ಉಳಿದುಕೊಂಡು ಸದ್ಯ ಹೊರ ಬಂದಿದ್ದಾರೆ. ಸ್ಫರ್ಧಿಯಾಗಿ ತೆರಳಿದ್ದ ರವಿ ಅವರು ಅವರ ಅನಾರೋಗ್ಯದ ಕಾರಣದಿಂದಾಗಿ ಕೇವಲ ಅತಿಥಿಯಾಗಿ ಬದಲಾದರು. ಇಂತಹ ರವಿ ಬೆಳಗೆರೆಯವರಿಗೆ ತಮ್ಮದೇ ಆದ ಫ್ಯಾನ್ ಫಾಲೋಯಿಂದ ಇದೆ. ಅದು ಹೆಚ್ಚು ಅವರ ಬರವಣಿಗೆ ಹಾಗೂ ಮಾತಿನ ಸ್ಟೈಲ್ ಗೆ.

ಇಂತಹ ರವಿ ಬೆಳಗೆರೆಯವರು ಬಿಬಿ ಮನೆಯಿಂದ ನಿನ್ನೆ ಹೊರಬಂದಿದ್ದಾರೆ. ಅವರು ಈಗ ಬಿಗ್‌ಬಾಸ್ ಶೋ ಬಗ್ಗೆ ಪುಸ್ತಕ ಬರೆಯುತ್ತಾರಾ ಅನ್ನೋ ಪ್ರಶ್ನೆ ಈ ಹಿಂದೆಯೇ ಎಲ್ಲರ ತಲೆಯಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಸದ್ದು ಮೂಡಿತ್ತು. ಆದರೆ ಅದು ಉಲ್ಟಾ ಆದಂತಿದೆ. ಅವರು ಬುಕ್ ಬರೆಯಲು ಮುಂದಾಗಿರುವುದು ಬಿಗ್‌ಬಾಸ್ ಬಗ್ಗೆ ಅಲ್ಲ,. ಬದಲಾಗಿ ಬಿಗ್‌ಬಾಸ್ ಮನೆಯಲ್ಲಿದ್ದ ಓರ್ವ ಸ್ಪರ್ಧಿ ಬಗ್ಗೆ. ಈ ಕುರಿತಾಗಿ ನಿನ್ನೆಯ ಕಾರ್ಯಕ್ರಮದಲ್ಲಿ ಅವರೇ ಘೋಷಿಸಿಕೊಂಡಿದ್ದಾರೆ.

ಹೌದು, ಹಿರಿಯ ನಟ ಜೈ ಜಗದೀಶ್ ಚಂದನವನದಲ್ಲಿ ದಶಕಗಳಿಂದಲೂ ತಮ್ಮ ಕಲಾ ನೈಪುಣ್ಯತೆಯಿಂದ ಮನೆಮಾತಾಗಿರುವವರು. ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿದ ಇವರು ಕೇವಲ ನಟರಷ್ಟೇ ಅಲ್ಲ, ನಿರ್ದೇಶಕರು ಕೂಡ ಹೌದು. 600ಕ್ಕೂ ಚಿತ್ರಗಳಲ್ಲಿ ವಿವಿಧ ಭಾಷೆಯಲ್ಲಿ ಅಭಿನಯಿಸಿದ್ದಾರೆ.ಇವರ ನೈಜ ಜೀವನದ ಏಳು – ಬೀಳುಗಳನ್ನು ಬರೆಯಲು ಸದ್ಯ ರವಿ ಬೆಳಗೆರೆ ಮುಂದಾಗಿದ್ದು ನಿನ್ನೆ ಕಾರ್ಯಕ್ರಮದಿಂದ ಹೊರಬರುವ ವೇಳೆ ಖುದ್ದು ಅವರೇ ಘೋಷಿಸಿದ್ದಾರೆ.

ಈ ಮಾಹಿತಿ ಇಷ್ಟವಾದರೆ ತಪ್ಪದೆ ಶೇರ್ ಮಾಡಿ ನಿಮ್ಮ ಎಲ್ಲಾ ಸ್ನೇಹಿತರಿಗೂ ಪೇಜ್ ಲೈಕ್ ಮಾಡಲು ತಿಳಿಸಿ. ನಾವು ನೀಡುವ ಮಾಹಿತಿಗಳು ,ಲೇಖನಗಳು ಎಲ್ಲವೂ ಕಾಪಿರೈಟ್ಸ್ ಗೆ ಒಳಪಟ್ಟಿದ್ದು ಕದಿಯುವುದು,ಕಾಪಿ ಪೇಸ್ಟ್ ಅಥವಾ ಬೇರೆ ರೀತಿಯಲ್ಲಿ ನಮ್ಮ ಅನುಮತಿ ಇಲ್ಲದೆ ಬಳಸಿದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು. ಲೈಕ್, ಶೇರ್, ಕಾಮೆಂಟ್ ಮಾಡುವ ಮೂಲಕ ಪ್ರೋತ್ಸಾಹಿಸಿ.

LEAVE A REPLY

Please enter your comment!
Please enter your name here