ಹುಚ್ಚವೆಂಕಟ್ ಬಗ್ಗೆ ಆಘಾತಕಾರಿ ವಿಷಯ ಹೇಳಿದ ರವಿ ಬೆಳಗೆರೆ!

0
270

ಹುಚ್ಚವೆಂಕಟ್‍ಗೆ ಚಿಕಿತ್ಸೆಯ ಅವಶ್ಯಕತೆಯಿದೆ. ಆತನನ್ನು ಮನರಂಜನೆಗಾಗಿ ಬಳಸಬೇಡಿ. ಆಡಿಕೊಂಡು ನಗಬೇಡಿ ನಮ್ಮ ನಿಮ್ಮಂತೆಯೇ ಬದುಕಲು ಅವಕಾಶ ಮಾಡಿಕೊಡಿ -ರವಿಬೆಳಗೆರೆ
ಸಮಾಜದಲ್ಲಿ ನಡೆಯುತ್ತಿರುವ ಅಂಕು-ಡೊಂಕುಗಳನ್ನು ಕುರಿತು ಯೂಟ್ಯೂಬ್ ಚಾನಲ್ ನಲ್ಲಿ ಹಿರಿಯ ಪತ್ರಕರ್ತ ರವಿಬೆಳೆಗೆರೆ ಅವರು `ಬೆಳ್ ಬೆಳಿಗ್ಗೆ ಬೆಳಗೆರೆ’ ಎಂಬ ಕಾರ್ಯಕ್ರಮ ನಡೆಸುತ್ತಿದ್ದು ಕಳೆದ ಸಂಚಿಕೆಯಲ್ಲಿ ಬೆಳಗೆರೆ ಅವರು ಹುಚ್ಚವೆಂಕಟ್ ಅವರ ಬಗ್ಗೆ ಮಾತನಾಡಿದ್ದಾರೆ ಹಾಗೂ ಅವರ ಬಗ್ಗೆ ಕೆಲವು ಆತಂಕಕಾರಿ ವಿಷಯಗಳನ್ನು ಹೇಳಿದ್ದಾರೆ.

ಇತ್ತೀಚಿಗಷ್ಟೆ ಹುಚ್ಚವೆಂಕಟ್ ಅವರು ಚೆನೈನ ಬೀದಿ ಬೀದಿಗಳಲ್ಲಿ,ಕೊಳಕು ಬಟ್ಟೆ ತೊಟ್ಟು,ಕಾಲಿಗೆ ಚಪ್ಪಲಿ ಇಲ್ಲದೆ,ಹೋಟೆಲ್ ಮಾಲೀಕರ ಬಳಿ ಜಗಳವಾಡುತ್ತಾ ಅಲೆದಾಡುತ್ತಿದ್ದರು.
ನಂತರ ಮಡಿಕೇರಿಯಲ್ಲಿ ಸಾರ್ವಜನಿಕರ ಜೊತೆ ಜಗಳ ಆಡುತ್ತಾ ಅವರ ಕಾರಿನ ಗಾಜುಗಳಿಗೆ ಕಲ್ಲಿನಿಂದ ಹೂಡೆದು ಪೀಸ್ ಪೀಸ್ ಮಾಡಿ ಸ್ಥಳಿಯರಿಂದ ಗೂಸವನ್ನು ಸಹ ತಿಂದಿದ್ದರು.ಇದಿಷ್ಟೇ ಅಲ್ಲದೇ ಮಂಡ್ಯ ಜಿಲ್ಲೆಯ ಪಾಂಡವಪುರ ಹಾಗೂ ಮೈಸೂರಿನ ಪಿರಿಯಾಪಟ್ಟಣದಲ್ಲೂ ರೀತಿ ಜಗಳವಾಡಿ ಧರ್ಮದೇಟು ತಿಂದಿದ್ದರು.ಇದನ್ನು ಗಮನಿಸಿದ ಸಾರ್ವಜನಿಕರು ಇವನಿಗೆ ನಿಜವಾಗಿಯೂ ಹುಚ್ಚು ಹಿಡಿದಿದೆ,ಮಾನಸಿಕ ಕಾಯಿಲೆ ಇದೆ ಎನ್ನುತ್ತಿದ್ದಾರೆ. ಸದ್ಯ ವೆಂಕಟ್ ಪೋಲೀಸರ ವಶದಲ್ಲಿದ್ದಾರೆ.

ವೆಂಕಟ್‍ಗೆ ಏನಾಗಿದೆ ಎಂಬುದು ಯಾರಿಗೂ ಸರಿಯಾಗಿ ತಿಳಿದು ಬಂದಿಲ್ಲ. ಇದನ್ನು ಕಂಡ ರವಿಬೆಳಗೆರೆ ಕೆಲವು ಅಘಾತಕಾರಿ ವಿಷಯವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಹುಚ್ಚ ವೆಂಕಟ್ ಅವರನ್ನು ಸರಿಯಾಗಿ ಗಮನಿಸಿ ಅವನು ನನ್ನ ಸೈನ್ಯ ಪಾಕಿಸ್ತಾನದಲ್ಲಿದೆ,ನನಗೆ ಒಬಾಮ ಪರಿಚಯವಿದೆ, ಎರಡು ರೂಪಾಯಿ ನಾಣ್ಯದಲ್ಲಿರುವ ಬೆರಳುಗಳು ನನ್ನದು,ಹಿಗೇ ಅರ್ಥವಿಲ್ಲದೆ ಮಾತಾನಾಡುತ್ತಾನೆ. ಅವನಿಗೆ ಮಾನಸಿಕ ರೋಗವಿದೆ ಎಂದು ಎಲ್ಲರು ಹೇಳುತ್ತಿದ್ದರು.ನಾನೂ ನಿಜವೆಂದು ಭಾವಿಸಿದ್ದೆ. ಆತರೆ ಅವನ ಬಗ್ಗೆ ವೈದ್ಯರ ಬಳಿ ವಿಚಾರಿಸಿದಾಗ ನನಗೆ ತಿಳಿಯಿತು ಇವನು ಭ್ರಮಾಲೋಕದಲ್ಲಿ ಬಳಲುತ್ತಿದ್ದಾನೆ ಎಂದು.ಇತನಿಗೆ ಎಸ್‍ಕ್ಯೂಜೋಫ್ರೀನಿತಾ’ ಎಂಬ ಕಾಯಿಲೆ ಇದೆ. ಹಿಗೇ ಬಿಟ್ಟರೆ ಅವನು ಯಾರಾನ್ನಾದರೂ ಸಾಯಿಸುತ್ತಾನೆ ಇಲ್ಲಾ ಅವನೇ ಸಾಯುತ್ತಾನೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ. ಮತ್ತು ಇದರ ಬಗ್ಗೆ ಬೆಳಗೆರೆ ಅವರು ಮನೋವೈದ್ಯರನ್ನು ಸಂಪರ್ಕಿಸಿ ಗಂಭೀರವಾಗಿ ಚರ್ಚೆ ಮಾಡಿದ್ದಾರಂತೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here