ಕೋಮಾದಲ್ಲಿದ್ದ ರೋಗಿ ಆಹಾರಕ್ಕಾಗಿ ಕಾಲನ್ನು ಕಚ್ಚಿ ತಿ೦ದ ಇಲಿ ಗಳು

0
104

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ನಿರ್ಲಕ್ಷ್ಯದ ಪ್ರಕರಣಗಳು ಇದೆ ಮೊದಲೇನಲ್ಲಾ, ಆದರೆ ಮಧ್ಯಪ್ರದೇಶದ ರತ್ನಂ ಜಿಲ್ಲಾ ಆಸ್ಪತ್ರೆಯಿಂದ ಹೊರಬಿದ್ದಿರುವ ಆತಂಕಕಾರಿ ನಿರ್ಲಕ್ಷ್ಯವು ಯಾರೊಬ್ಬರನ್ನು ಬೆಚ್ಚಿಬೀಳಿಸುತ್ತದೆ. ಐಸಿಯು ನಲ್ಲಿ ಕೋಮಾದಲ್ಲಿದ್ದ ರೋಗಿಯ ಕಾಲುಗಳನ್ನು ಇಲಿಗಳು ಕಚ್ಚಿ ತಿಂದಿವೆ. ಈ ವಿಷಯ ಹೊರ ಬರುತ್ತಿದ್ದಂತೆ ಆಸ್ಪತ್ರೆಯಲ್ಲಿ ಕೋಲಾಹಲ ಉಂಟಾಗಿದೆ ಮತ್ತು ರೋಗಿಗೆ ಅವಸರದಲ್ಲಿ ಡ್ರೆಸ್ಸಿಂಗ್ ಮತ್ತು ಚಿಕಿತ್ಸೆ ನೀಡಲಾಗಿದೆ.

ಇಲಿಗಳಿಂದ ದಾಳಿಗೊಳಗಾದ ರೋಗಿಯ ಹೆಸರು ಸುರೇಶ್ ಸಿಂಗ್. ಅವರನ್ನು ಎರಡೂವರೆ ತಿಂಗಳ ಹಿಂದೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 8 ರಂದು ರಸ್ತೆ ಅಪಘಾತದಲ್ಲಿ ಸುರೇಶ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ಗಂಭೀರವಾದ ಗಾಯದಿಂದಾಗಿ ಅವರು ಕೋಮಾ ಸ್ಥಿತಿಗೆ ಹೋಗಿದ್ದರು. ಸದ್ಯ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಘಟನೆಗೆ ಕಾರಣವಾದ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಸಿವಿಲ್ ಸರ್ಜನ್ ಡಾ.ಆನಂದ್ ಚಂದೇಲ್ಕರ್ ಸೇರಿ ಮೇಲೆ ಕ್ರಮಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯರು, ಮಳೆಯಿಂದಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಇಲಿಗಳು ಹೆಚ್ಚಿಗಿವೆ, ಆಸ್ಪತ್ರೆಯ ಸಿಬ್ಬಂದಿಗಳು 3 ದಿನಗಳ ಹಿಂದೆಯಷ್ಟೇ ಕೀಟ ನಿಯಂತ್ರಕವನ್ನು ಸಿಂಪಡಿಸಿದೆ ಎಂದು ಹೇಳಿಕೆ ನೀಡಿದ್ದರು. ಸಂಬಂಧ ಪಟ್ಟ ಅಧಿಕಾರಿಗಳು ಕೀಟ ನಿಯಂತ್ರಕಗಳಿಂದ ಸತ್ತ ಇಲಿಗಳ ಫೋಟೋ ಕಳುಹಿಸಲು ಸೂಚಿಸಿದ್ದರು. ಆದರೆ ಅವುಗಳನ್ನು ಆಸ್ಪತ್ರೆ ಸಿಬ್ಬಂದಿ ಅದನ್ನು ಒದಗಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಸಧ್ಯ ನರ್ಸ್, ವೈದ್ಯರು ಹಾಗು ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ಎಂದಿನಂತೆ ರೋಗಿಯೊಂದಿಗೆ ಅವರ ತಂದೆ ರಾಜೇಂದ್ರ ಸಿಂಗ್ ಅವರು ಸಹ ರಾತ್ರಿ ನಿದ್ರೆಗೆ ಜಾರಿದ್ದಾರೆ ಮತ್ತು ಬೆಳಿಗ್ಗೆ ಎಚ್ಚರವಾದಾಗ ಮಗನ ಕಾಲನ್ನು ಇಲಿಗಳು ಕಚ್ಚಿ ರಕ್ತಸ್ರಾವವಾಗಿರುವುದು ಕಂಡು ಬಂದಿದೆ. ಅವರು ತಕ್ಷಣ ಈ ವಿಷಯವನ್ನು ನರ್ಸ್‌ಗೆ ತಿಳಿಸಿದ್ದಾರೆ. ಪರೀಕ್ಷೆಯಲ್ಲಿಯೂ ಸಹ ಇಲಿಗಳು ಕಚ್ಚಿವೆ ಎಂದು ಸಾಭೀತಾಗಿದೆ.

LEAVE A REPLY

Please enter your comment!
Please enter your name here