ರತನ್ ಟಾಟಾ ಸೋತು ಗೆದ್ದ ಯಶಸ್ಸಿನ ಕಥೆ…!

0
372

ರತನ್ ಟಾಟಾ ಇವರು ಟಾಟಾ ಗ್ರೂಪ್ ಆಫ್ ಇಂಡಸ್ಟ್ರೀಯ ಚೇರ್ಮನ್ ಆಗಿದ್ದರು. ಇವರು ತಮಗೆ ಆದ ಅವಮಾನಕ್ಕೆ ತಮ್ಮ ಸಕ್ಸಸ್ ನಿಂದಲೇ ಉತ್ತರ ನೀಡಿದರು. ಆ ಕಥೆಯನ್ನು ಶುರು ಮಾಡುವ ಮೊದಲು ಅವರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ

ರತನ್ ಟಾಟಾ ಅವರು 28 ಡಿಸೆಂಬರ್ 1937 ರಂದು ಸೂರತ್ನಲ್ಲಿ ಜನಿಸಿದರು. ಇವರು 1961 ರಲ್ಲಿ ತಮ್ಮ ಫ್ಯಾಮಿಲಿ ಬ್ಯುಸಿನೆಸ್ ಆದ ಟಾಟಾ ಕಂಪನಿಯನ್ನು ಸೇರಿದ್ದರು. ಮತ್ತು 1991 ರಲ್ಲಿ ಇವರು ಟಾಟಾ ಗ್ರೂಪ್ನ ಚೇರ್ಮನ್ ಆಗಿ ಜವಾಬ್ದಾರಿ ವಹಿಸಿಕೊಂಡರು. ಇವರಿಗೆ ಭಾರತ ಸರ್ಕಾರವು 2000 ಇಸ್ವಿಯಲ್ಲಿ ಪದ್ಮಭೂಷಣ ಹಾಗೂ 2008 ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು. ಎಲ್ಲಕ್ಕಿಂತ ಮಿಗಿಲಾಗಿ ಇವರು ತಮಗೆ ಬಂದ ಪ್ರಾಫಿಟ್ ನಲ್ಲಿ ಶೇಖಡ 60ರಷ್ಟು ಪ್ರಾಫಿಟನ್ನು ಚಾರಿಟಿಗೆ ಧಾನ ಮಾಡ್ತಾರೆ. ಬನ್ನಿ ಈಗ ನಾವು ಹೇಗೆ ಅವರು ತಮ್ಮ ಯಶಸ್ಸಿನಿಂದ ತಮಗೆ ಆದ ಅವಮಾನಕ್ಕೆ ಉತ್ತರ ನೀಡಿದರು ಎಂದು ತಿಳಿದುಕೊಳ್ಳೋಣ.

ಇವರು 1998ರಲ್ಲಿ ಟಾಟಾ ಮೋಟರ್ಸ್ ಅನ್ನು ಸ್ಥಾಪಿಸಿ ಮೊದಲು ಟಾಟಾ ಇಂಡಿಕಾ ಎಂಬ ಕಾರನ್ನು ಲಾಂಚ್ ಮಾಡಿದರು
ಆದರೆ ಇದು ಮಾರ್ಕೆಟ್ನಲ್ಲಿ ಅಷ್ಟೊಂದು ಯಶಸ್ಸನ್ನು ಕಾಣಲಿಲ್ಲ. ಇವರು ಎರಡು ವರ್ಷಗಳ ಕ ಕಾಲ ನಷ್ಟವನ್ನು ಅನುಭವಿಸಿದ್ದರು ಎಲ್ಲರೂ ಇವರಿಗೆ ಕಂಪನಿ ಮಾರಲು ಸಲಹೆ ನೀಡಿದ್ದರು.

ಹಾಗಾಗಿ ಇವರು ತಮ್ಮ ಕಂಪನಿಯನ್ನು ಮಾರಲು ಇಷ್ಟವಿಲ್ಲದಿದ್ದರೂ ಒಪ್ಪಿಕೊಂಡರು. ಕಂಪನಿಯನ್ನು ಮಾರುವ ಸಲುವಾಗಿ ಅಮೆರಿಕದಲ್ಲಿರುವ ಫೋರ್ಡ್ ಕಂಪನಿ ಬಳಿ ಹೋದರು ಅಲ್ಲಿ ಮೀಟಿಂಗ್ ನಲ್ಲಿ ಎಲ್ಲರು ಇವರಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿದರು
ಹಾಗೂ ಫೋರ್ಡ್ ಕಂಪನಿಯ ಚೇರ್ಮನ್ ಆಗಿರುವ ಬಿಲ್ ಫೋರ್ಡ್ ಅವರು “ನಿಮಗೆ ಈ ಬ್ಯುಸಿನೆಸ್ ಬಗ್ಗೆ ನಾಲೆಡ್ಜ್ ಇಲ್ಲ ಅಂದ ಮೇಲೆ ಇಷ್ಟೊಂದು ಹಣ ಖರ್ಚು ಮಾಡಿ ಕಾರನ್ನು ಏನಕ್ಕೆ ಲಾಂಚ್ ಮಾಡಿದ್ರಿ ನಾವು ನಿಮ್ಮ ಮೇಲೆ ಕರುಣೆ ತೋರಿ ನಿಮ್ಮ ಕಂಪನಿಯನ್ನು ಖರೀದಿಸಿ ನಿಮಗೆ ಸಹಾಯ ಮಾಡುತ್ತಿದ್ದೇವೆ ಅಷ್ಟೆ” ಎಂದು ಹಂಗಿಸಿ ಮಾತನಾಡಿದರು ಹಾಗಾಗಿ ರತನ್ ಟಾಟಾ ಅವರು ಆ ಡೀಲ್ ಕ್ಯಾನ್ಸಲ್ ಮಾಡಿ
ಅಂದೇ ಭಾರತಕ್ಕೆ ಮರಳಿದರು .ಬಿಲ್ ಫೋರ್ಡ್ ಆಡಿದ ಮಾತುಗಳಿಂದಾಗಿ ರತನ್ ಟಾಟಾ ಅವರು ಯಾವುದೇ ಕಾರಣಕ್ಕೂ ನಾನು ಕಂಪನಿ ಮಾರುವುದಿಲ್ಲ ಎಂದು ನಿರ್ಧರಿಸಿ ಮತ್ತೆ ಕಂಪನಿಯನ್ನು ಬೆಳೆಸುವುದಕ್ಕಾಗಿ ಪ್ರಯತ್ನಪಟ್ಟರು ಮತ್ತು ಕೆಲವೇ ವರ್ಷಗಳಲ್ಲಿ ಕಂಪನಿಯನ್ನು ಒಳ್ಳೆ ಪೊಸಿಷನ್ ಗೆ ತಂದರು.

ಇನ್ನೊಂದು ಕಡೆ ಫೋರ್ಡ್ ಕಂಪನಿಯು ವರ್ಷದಿಂದ ವರ್ಷಕ್ಕೆ ನಷ್ಟ ಅನುಭವಿಸಲು ಪ್ರಾರಂಭಿಸಿತು
2008 ರಷ್ಟರಲ್ಲಿ ಈ ಕಂಪನಿ ಮುಳುಗಿ ಹೋಗುವ ಪರಿಸ್ಥಿತಿಯನ್ನು ತಲುಪಿತ್ತು. ಆಗ ರತನ್ ಟಾಟಾ ಅವರು ಫೋರ್ಡ್ ಕಂಪನಿಯ ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಖರೀದಿ ಮಾಡುವುದಾಗಿ ಪ್ರಸ್ತಾಪಿಸಿದರು ಹಾಗಾಗಿ ಫೋರ್ಡ್ ಕಂಪನಿಯ ಚೇರ್ಮನ್ ಆದ ಬಿಲ್ ಫೋರ್ಡ್ ಹಾಗು ಅವರ ತಂಡ ಭಾರತದಲ್ಲಿರುವ ಟಾಟಾ ಕಂಪನಿಯ ಹೆಡ್ ಕ್ವಾರ್ಟರ್ಸ್ಗೆ ಬಂದರು ಮೂರು ಗಂಟೆ ಚರ್ಚೆಯ ನಂತರ 2.3 ಬಿಲಿಯನ್ ಡಾಲರ್ಗೆ ಜಾಗ್ವಾರ್ ಲ್ಯಾಂಡ್ ರೋವರ್ ಟಾಟಾ ಕಂಪನಿ ಅಧೀನವಾಗುವುದಾಗಿ ನಿರ್ಧಾರ ಕೊಟ್ಟಿತ್ತು.

ಆಗ ಬಿಲ್ ಫೋರ್ಡ್ ಅವರು ಅಂದು ಹೇಳಿದ ಮಾತನ್ನೇ ಮತ್ತೆ ಹೇಳಿದರು
ಆದರೆ ಈ ಬಾರಿ ರತನ್ ಟಾಟಾ ಪರವಾಗಿತ್ತು” ನೀವು ನಮ್ಮ ಕಂಪನಿಯನ್ನು ಖರೀದಿ ಮಾಡಿ ನಮಗೆ ತುಂಬಾ ಸಹಾಯ ಮಾಡುತ್ತಿದ್ದೀರಾ” ಎಂದು ಹೇಳಿದರು. ಆಗ ರತನ್ ಟಾಟಾ ಅವರು ಮನಸ್ಸು ಮಾಡಿದ್ದರೆ ಬಿಲ್ ಫೋರ್ಡ್ ಅವರಿಗೆ ಅವಮಾನ ಮಾಡಬಹುದಾಗಿತ್ತು
ಆದರೆ ಇವರು ಹಾಗೇ ಮಾಡಲಿಲ್ಲ ಹಾಗಾಗಿ ರತನ್ ಟಾಟಾ ಅವರು ಒಬ್ಬ ಒಳ್ಳೆಯ ಬಿಸಿನೆಸ್ ಮ್ಯಾನ್ ಅಷ್ಟೇ ಅಲ್ಲ ಒಬ್ಬ ಒಳ್ಳೆಯ ವ್ಯಕ್ತಿ ಕೂಡ ಹೌದು.

ಇದೇ ರೀತಿ ನಾವು ಸಹ ನಮಗೆ ಆಗುವ ಅವಮಾನ, ನೋವು , ಕಷ್ಟಗಳನ್ನೆಲ್ಲಾ ಪಾಸಿಟಿವ್ ಆಗಿ ತಗೊಂಡು ಅದನ್ನೇ ಮೋಟಿವೇಟ್ ಮಾಡ್ಕೊಂಡು ನಾವು ನಮ್ಮ ಗುರಿ ಮುಟ್ಟಬೇಕು ಆಗ ಮಾತ್ರ ಹಿಂದೆ ಅವಮಾನ ಮಾಡಿದ ವ್ಯಕ್ತಿಗಳೇ ನಮ್ಮನ್ನು ಸನ್ಮಾನ ಮಾಡ್ತಾರೆ.

ಮತ್ತಷ್ಟು ಇನ್’ಸ್ಪೈರಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ
ಧನ್ಯವಾದಗಳು.

LEAVE A REPLY

Please enter your comment!
Please enter your name here