“ನಮ್ಮ ಮನೆಗೆ ನೀನೇ ಹಿರಿಯ ಮಗಳು, ಹೀಗಾಗಿ ಸ್ವಲ್ವ ಮನೆಯ ಕಡೆಗೂ ಗಮನ ಕೊಡು ಮಗಳೇ” -ರಶ್ಮಿಕಾ ಅಪ್ಪ

0
302

ಟಾಲಿವುಡ್, ಕಾಲಿವುಡ್ ಚಿತ್ರಗಳಲ್ಲಿ ಫುಲ್ ಬ್ಯುಸಿಯಾಗಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ಚಿತ್ರೀಕರಣಕ್ಕಾಗಿ ದಿನಕ್ಕೊಂದು ರಾಜ್ಯಕ್ಕೆ ಓಡಾಡುತ್ತಿದ್ದಾರೆ ಕುಟುಂಬದವರ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಹೀಗಾಗಿ, ’ಮನೆಯ ಕಡೆಗೂ ಗಮನ ಕೊಡು ಮಗಳೇ’ ಎಂದು ಅವರ ತಂದೆ ಹೇಳಿದ್ದಾರೆ.

 

 

ಶನಿವಾರ ಧ್ರುವ ಸರ್ಜಾ ಅಭಿನಯದ‘ಪೊಗರು’ ಶೂಟಿಂಗ್‌ನಲ್ಲಿದ್ದ ರಶ್ಮಿಕಾ, ಭಾನುವಾರ ಚೆನ್ನೈಗೆ ಹೋದರು. ಸೋಮವಾರ ಚೆನ್ನೈಯಿಂದ ನೇರವಾಗಿ ಹೈದರಾಬಾದ್‌ಗೆ ಹೋಗಿದ್ದಾರೆ. ಹೀಗೆ ರಶ್ಮಿಕಾ ದಿನಕ್ಕೊಂದು ರಾಜ್ಯವನ್ನು ಸುತ್ತುತ್ತಿರುವುದರಿಂದ ರಶ್ಮಿಕಾರಿಗೆ ತಮ್ಮ ಮನೆಗೆ ಹೋಗಲು ಸಾಧ್ಯವಾಗಿಲ್ಲ.

 

 

ಇದರಿಂದ ಬೇಸರಗೊಂಡಿರುವ ಅವರ ತಂದೆ, “ನಮ್ಮ ಮನೆಗೆ ನೀನೇ ಹಿರಿಯ ಮಗಳು, ಹೀಗಾಗಿ ಸ್ವಲ್ವ ಮನೆಯ ಕಡೆಗೂ ಗಮನ ಕೊಡು ಮಗಳೇ” ಎಂದು ಹೇಳಿದ್ದಾರೆ.

 

 

ಈ ಬಗ್ಗೆ ರಶ್ಮಿಕಾ ಅವರ ತಾಯಿ ಪ್ರತಿಕ್ರಿಯಿಸಿ, ನಾನು ಯಾವಾಗಲೂ ರಶ್ಮಿಕಾ ಜೊತೆಯಲ್ಲೇ ಇರುತ್ತೇನೆ. ಆದರೆ ಆಕೆಯ ತಂದೆ ಅವಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ. ರಶ್ಮಿಕಾ ಅನೇಕ ಚಿತ್ರಗಳಲ್ಲಿ ನಟಿಸುತ್ತಿರುವುದನ್ನು ನೋಡಿ ನಾನೇ ಆಶ್ಚರ್ಯ ಪಡುತ್ತಿದ್ದೇನೆ. ರಶ್ಮಿಕಾ ನಟಿಸಿದ ಎಲ್ಲಾ ಚಿತ್ರಗಳು ಮುಂದಿನ ವರ್ಷ ಬಿಡುಗಡೆ ಆಗಲಿದೆ. ಹೀಗಾಗಿ ಆ ವರ್ಷ ಅವಳಿಗೆ ತುಂಬಾ ಮುಖ್ಯ. ದೇವರ ಆಶೀರ್ವಾದದಿಂದ ಅವಳಿಗೆ ಉತ್ತಮ ಪಾತ್ರಗಳು ಸಿಗುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here