ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರಗಳಿಗಿಂತ ತೆಲುಗು ತಮಿಳು ಭಾಷೆಯಲ್ಲಿ ಬ್ಯುಸಿಯಾಗಿರುವುದು ತಮ್ಮೆಲ್ಲರಿಗೂ ಗೊತ್ತಿದೆ !
ಕನ್ನಡ ಮಾತನಾಡುವುದು ಬಹಳ ಕಷ್ಟ ಎಂದು ಹೇಳಿಕೆ ನೀಡಿದ್ದ ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡಪರ ಸಂಘಟನೆಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.. ಹಾಗೂ ಇನ್ಮುಂದೆ ಕನ್ನಡದಲ್ಲಿ ರಶ್ಮಿಕಾ ಸಿನಿಮಾ ಮಾಡಬಾರದು ಎಂದು ಕನ್ನಡ ವಾಣಿಜ್ಯ ಮಂಡಳಿಗೆ ಪತ್ರವನ್ನು ಸಹಿತ ಬರೆದಿದ್ದರು .. ಹಾಗೆಯೇ ವಿಜಯ್ ದೇವರಕೊಂಡ ಜೊತೆಗಿನ ಒಡನಾಟವನ್ನು ಕುರಿತು ಕನ್ನಡದ ಟ್ರಾಲ್ ಪೇಜ್ಗಳು ಹಾಗೂ ಕನ್ನಡ ಶನಿ ಪ್ರೇಕ್ಷಕರು ಟ್ರಾಲ್ ಮಾಡುತ್ತಲೇ ಇದ್ದಾರೆ ! ಇದ್ಯಾವುದಕ್ಕೂ ಉತ್ತರಿಸಿದ ರಶ್ಮಿಕಾ ಈಗ ತಮಿಳು ಚಿತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ ..
ಸಿನಿಮಾ ವಿಚಾರಗಳಿಗಿಂತ ಬೇರೆ ವಿಚಾರದಲ್ಲಿ ಸಾಕಷ್ಟು ಕಿರಿಕ್ ಮಾಡಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಈಗ ತಮಿಳು ಚಿತ್ರದಲ್ಲೂ ಕಿರಿಕ್ ಮಾಡಿಕೊಂಡಿದ್ದಾರೆ !
ತಮಿಳು ಚಿತ್ರರಂಗಕ್ಕೆ ಪ್ರವೇಶ ಮಾಡಿರುವ ರಶ್ಮಿಕಾ ಕುಷಿಯಲ್ಲಿ ಒಂದು ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ ! ಇದರಿಂದ ಚಿತ್ರತಂಡದವರ ಕೋಪಕ್ಕೆ ತುತ್ತಾಗಿದ್ದಾರೆ !
ಇನ್ನು ತಮಿಳಿನ ಈ ಚಿತ್ರಕ್ಕೆ ನಿರ್ದೇಶಕ ಭಾಗ್ಯರಾಜ್ ಆಕ್ಷನ್ ಕಟ್ ಹೇಳುತ್ತಿದ್ದು,ಚಿತ್ರ ಸೆಟ್ಟೇರಿ ಬಹಳ ದಿನಗಳೇ ಆಗಿತ್ತು ಆದರೆ ಚಿತ್ರದ ಚಿತ್ರೀಕರಣ ಈಗ ಪ್ರಾರಂಭವಾಗಿದೆ !
ಇದು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾರ್ತಿ ಕಾಣಿಸಿಕೊಳ್ಳುತ್ತಿದ್ದಾರೆ !
ರಶ್ಮಿಕಾ ಮಾಡಿಕೊಂಡಿರುವ ಎಡವಟ್ಟು ಏನು ಗೊತ್ತಾ ?
ಇನ್ನು ರಶ್ಮಿಕಾ ಪಾದಾರ್ಪಣೆ ಮಾಡುತ್ತಿರುವ ತಮಿಳು ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಮಾಡಿರಲಿಲ್ಲ.. ಆದರೆ ಚಿತ್ರತಂಡ ಸುಲ್ತಾನ್ ಎಂದು ಹೆಸರಿಟ್ಟಿತ್ತು.. ಈ ಟೈಟಲ್ ಅನ್ನು ಎಲ್ಲೂ ರಿವಿಲ್ ಮಾಡಬಾರದು ಎಂದು ನಿರ್ದೇಶಕರು ಚಿತ್ರತಂಡದವರಿಗೆ ಹೇಳಿದ್ದರು ! ಆದರೆ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಾಲ್ಕನೆ ದಿನದ ‘ಸುಲ್ತಾನ್’ ಶೂಟಿಂಗ್, ನನ್ನ ಲುಕ್ ಹೇಗಿದೆ ಎನ್ನುವುದು ನಿಮಗೆ ಕಾಣಿಸುವುದಿಲ್ಲ”ಎಂದು ಒಂದು ಫೋಟೋವನ್ನು ಶೇರ್ ಮಾಡಿದ್ದಾರೆ ! ಇದನ್ನು ಕಂಡ ಚಿತ್ರತಂಡ ರಶ್ಮಿಕಾ ವಿರುದ್ಧ ಗರಂ ಆಗಿದ್ದಾರೆ.. ಹಾಗೆಯೇ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರಂತೆ! ಮತ್ತು ನಟ ಕಾರ್ತಿ ಕೂಡ ರಶ್ಮಿಕಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ! ಇದರಿಂತ ಚಿತ್ರತಂಡ ಈಗ ಅಧಿಕೃತವಾಗಿ ಟೈಟಲ್ ರಿವೀಲ್ ಮಾಡುವ ಅನಿವಾರ್ಯತೆ ಎದುರಾಗಿದೆಯಂತೆ!
ರಶ್ಮಿಕಾ ಮಾಡಿದ ಈ ಟೈಟಲ್ ಸೋರಿಕೆ ಎಡವಟ್ಟಿನಿಂದ ಚಿತ್ರತಂಡ ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದಾರೆ.. ಹಾಗೆಯೇ ರಶ್ಮಿಕಾ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಪೋಸ್ಟ್ ಡಿಲೀಟ್ ಮಾಡಿಸಿದ್ದಾರೆ !